ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲ್ಲೂಕುಗಳಿಂದ ಸಾವಿರ ಹಳ್ಳಿಗಳತ್ತ ಮಹತ್ವಾಕಾಂಕ್ಷೆಯ ‘ಭೂಮಿ’

By Staff
|
Google Oneindia Kannada News

ತಾಲ್ಲೂಕುಗಳಿಂದ ಸಾವಿರ ಹಳ್ಳಿಗಳತ್ತ ಮಹತ್ವಾಕಾಂಕ್ಷೆಯ ‘ಭೂಮಿ’
ರೈತರಿಗೆ ತಾಲ್ಲೂಕು ಕೇಂದ್ರಗಳಿಗೆ ಅಲೆಯುವ ಕಾಟದಿಂದ ಮುಕ್ತಿ

ಬೆಂಗಳೂರು: ರಾಜ್ಯಾದ್ಯಂತ ಇ- ಆಡಳಿತವನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯದ 1 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಭೂ ದಾಖಲೆಗಳನ್ನು ಸಂರಕ್ಷಿಸುವ ಕೇಂದ್ರಗಳನ್ನು ಖಾಸಗಿಯವರ ಸಹಯೋಗದೊಂದಿಗೆ ಸರಕಾರ ಆರಂಭಿಸಲಿದೆ.

ಭೂ ದಾಖಲೆ ಕೇಂದ್ರಗಳು ಕಾರ್ಯಾರಂಭ ಮಾಡಿದ ನಂತರ ಗ್ರಾಮಸ್ಥರು ಭೂ ದಾಖಲೆಗಳ ಬಗ್ಗೆ ತಿಳಿದುಕೊಳ್ಳಲು ತಾಲ್ಲೂಕು ಕಚೇರಿಗೆ ತೆರಳಬೇಕಾಗಿಲ್ಲ. ಇ- ಆಡಳಿತದ ಬಗ್ಗೆ ಸಿಂಗಪೂರ - ಭಾರತ ವಿಚಾರ ಸಂಕಿರಣದಲ್ಲಿ ಆ. 4ರ ಸೋಮವಾರ ಮಾತನಾಡಿದ ರಾಜ್ಯದ ಇ- ಆಡಳಿತ ಕಾರ್ಯದರ್ಶಿ ರಾಜೀವ್‌ ಚಾವ್ಲಾ ಈ ವಿಷಯವನ್ನು ತಿಳಿಸಿದರು.

ರೈತನೊಬ್ಬ ಭೂ ದಾಖಲೆ ಕೇಂದ್ರಕ್ಕೆ ಭೇಟಿ ನೀಡಿ ಸಾಂಕೇತಿಕ ಶುಲ್ಕ ನೀಡಿ ತನ್ನ ಭೂಮಿಯ ದಾಖಲೆಗಳ ಬಗ್ಗೆ ತಿಳಿದುಕೊಳ್ಳಬಹುದು. ತಾಲ್ಲೂಕು ಕೇಂದ್ರಕ್ಕೆ ಪ್ರಯಾಣಿಸುವ ಹಣ ಮತ್ತು ಸಮಯ ಉಳಿತಾಯ ಮಾಡಿದಂತಾಗುತ್ತದೆ. ಈ ಯೋಜನೆಯ ಮೂಲಕ ತಾಲ್ಲೂಕು ಮಟ್ಟದಲ್ಲಿ ಜಾರಿಗೆ ಬರುತ್ತಿರುವ ಭೂಮಿ ಯೋಜನೆಯನ್ನು ಹಳ್ಳಿಗಳಿಗೂ ವಿಸ್ತರಿಸಿದಂತಾಗಲಿದೆ ಎಂದು ಚಾವ್ಲಾ ಅಭಿಪ್ರಾಯಪಟ್ಟರು.

ಇ- ಆಡಳಿತದ ಬಗ್ಗೆ ರಾಜ್ಯವು ಸಿಂಗಪೂರ ಸರಕಾರದ ಕಾರ್ಯವೈಖರಿಯನ್ನು ಮಾದರಿಯಾಗಿಸಿಕೊಳ್ಳಬಹುದು. ಈ ಕೇಂದ್ರಗಳನ್ನು ಖಾಸಗಿಯವರ ಸಹಯೋಗದೊಂದಿಗೆ ಇನ್ನಷ್ಟು ಬಲಪಡಿಸಬಹುದು ಎಂದು ಚಾವ್ಲಾ ಆಶಿಸಿದರು.

ರಾಜ್ಯದ 268 ಕೋರ್ಟುಗಳನ್ನು ಆನ್‌ಲೈನ್‌ ನೆಟ್‌ವರ್ಕ್‌ ಮುಖಾಂತರ ಹೈಕೋರ್ಟ್‌ ಕಚೇರಿಗೆ ಸಂಪರ್ಕಿಸಲಾಗಿದೆ ಎಂದು ವಿಚಾರ ಸಂಕಿರಣದಲ್ಲಿ ಮಾತನಾಡಿದ ರಾಜ್ಯ ಮುಖ್ಯ ಕಾರ್ಯದರ್ಶಿ ಬಿ. ಎಸ್‌. ಪಾಟೀಲ್‌ ಹೇಳಿದರು.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X