ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪೂರ್ವ ಗಿಡಮೂಲಿಕೆಗಳ ಸಿದ್ಧರಬೆಟ್ಟ ಅಭಿವೃದ್ಧಿಗೆ ಸರ್ಕಾರ ಬದ

By Staff
|
Google Oneindia Kannada News

ಅಪೂರ್ವ ಗಿಡಮೂಲಿಕೆಗಳ ಸಿದ್ಧರಬೆಟ್ಟ ಅಭಿವೃದ್ಧಿಗೆ ಸರ್ಕಾರ ಬದ
ಅಧಿಕಾರಿಗಳಿಂದ ವರದಿ ಕೇಳಿಕೆ, ಆನಂತರವೇ ಮುಂದಿನ ಕ್ರಮ- ಇನಾಂದಾರ್‌

ಬೆಂಗಳೂರು : ತುಮಕೂರು ಜಿಲ್ಲೆಯ ಪ್ರವಾಸಿತಾಣವಾದ ಸಿದ್ಧರಬೆಟ್ಟವನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರವಾಸೋದ್ಯಮ ಸಚಿವ ಡಿ.ಬಿ.ಇನಾಂದಾರ್‌ ತಿಳಿಸಿದರು.

ಸಿದ್ಧರ ಬೆಟ್ಟವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಂದ ವರದಿ ಕೇಳಲಾಗುವುದು. ಈ ವರದಿ ಬಂದ ನಂತರ ಸಿದ್ಧರಬೆಟ್ಟದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಇನಾಂದಾರ್‌ ಶುಕ್ರವಾರ (ಆ.1) ವಿಧಾನಪರಿಷತ್ತಿನಲ್ಲಿ ತಿಳಿಸಿದರು. ಶಾಸಕ ಎಸ್‌. ಚನ್ನಬಸವಯ್ಯ ಅವರ ಪ್ರಶ್ನೆಗೆ ಇನಾಂದಾರ್‌ ಪ್ರತಿಕ್ರಿಯಿಸುತ್ತಿದ್ದರು.

ಸಿದ್ಧರಬೆಟ್ಟದಲ್ಲಿ ಪ್ರವಾಸಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಿರುವುದನ್ನು ವಿಧಾನಪರಿಷತ್ತಿನ ಗಮನಕ್ಕೆ ತಂದ ಚನ್ನಬಸವಯ್ಯ- ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ವಿಷಾದಿಸಿದರು.

ಚರ್ಚೆಯ ನಡುವೆ ಮಧ್ಯಪ್ರವೇಶಿಸಿದ ಸಭಾಪತಿ ಬಿ.ಎಲ್‌.ಶಂಕರ್‌- ಅಪರೂಪದ ಗಿಡಮೂಲಿಕೆಗಳನ್ನು ಒಳಗೊಂಡಿರುವ ಸಿದ್ಧರಬೆಟ್ಟದ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಸಚಿವರಿಗೆ ಸೂಚಿಸಿದರು. ಸಭಾಪತಿಯವರ ಸೂಚನೆಗೆ ಸ್ಪಂದಿಸಿದ ಸಚಿವ ಇನಾಂದಾರ್‌, ಅಧಿಕಾರಿಗಳಿಂದ ಈ ಬಗ್ಗೆ ತಕ್ಷಣ ವಿವರಣೆ ಕೇಳಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

(ಇನ್ಫೋ ವಾರ್ತೆ)

ಪೂರಕ ಓದಿಗೆ
ಬಾಲಿವುಡ್‌ನಲ್ಲಿ ವಿಜಯ್‌ಮಲ್ಯ ರೇಸು

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X