ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು ಜಿಲ್ಲೆಯಲ್ಲಿ 2 ದಿನಕ್ಕೊಬ್ಬರು ಹಾವಿನ ಕಡಿತಕ್ಕೆ ಬಲಿ

By Staff
|
Google Oneindia Kannada News

ರಾಯಚೂರು ಜಿಲ್ಲೆಯಲ್ಲಿ 2 ದಿನಕ್ಕೊಬ್ಬರು ಹಾವಿನ ಕಡಿತಕ್ಕೆ ಬಲಿ
ಪ್ರಾಥಮಿಕ ಚಿಕಿತ್ಸೆ ಬಗ್ಗೆ ಅಜ್ಞಾನ, ವಿಷ ನಿರೋಧಕ ಔಷಧಿಗಳ ಕೊರತೆ.

*ದಟ್ಸ್‌ಕನ್ನಡ ಬ್ಯೂರೊ

ರಾಯಚೂರು ಜಿಲ್ಲೆಗೀಗ ಅರ್ಜೆಂಟಾಗಿ ಒಬ್ಬ ಕಿಂದರ ಜೋಗಿ ಬೇಕಾಗಿದ್ದಾನೆ. ಅಲ್ಲೀಗ ಹಾವುಗಳ ಕಾಟವೋ ಕಾಟ !

ಹಾವು ಕಡಿತದಿಂದ ಸತ್ತವರ ಸಂಖ್ಯೆ ರಾಯಚೂರು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿ ದಿನ ಕನಿಷ್ಠ ನಾಲ್ಕು ಮಂದಿಯಾದರೂ ಹಾವು ಕಡಿತದಿಂದ ಆಸ್ಪತ್ರೆಗೆ ಸೇರುತ್ತಿರುವುದು ವರದಿಯಾಗುತ್ತಿದೆ. ಕಳೆದೆರಡು ತಿಂಗಳಲ್ಲಿ ಸುಮಾರು 30 ಮಂದಿ ಹಾವು ಕಡಿತದಿಂದ ಸತ್ತಿದ್ದಾರೆ.

ಯಾಕೆ ಹೀಗೆ ?

ರಾಯಚೂರು ಜಿಲ್ಲೆಯಲ್ಲಿ ಹಾವು ಕಡಿತಕ್ಕೆ ನೀಡುವ ಪ್ರಥಮ ಚಿಕಿತ್ಸೆಯ ಬಗ್ಗೆ ಜನರಲ್ಲಿ ಅರಿವಿಲ್ಲ. ಚಿಕಿತ್ಸೆಯಲ್ಲಿ ಪರಿಣತರಾದವರೂ ಜಿಲ್ಲೆಯಲ್ಲಿ ಬಹು ಕಡಿಮೆ. ಸಾಮಾನ್ಯವಾಗಿ ಹಾವು ಕಚ್ಚಿಸಿಕೊಳ್ಳುವವರು ರೈತರು ಅಥವಾ ಹೊಲ ಗದ್ದೆ ಕೆಲಸ ಮಾಡುವ ಕೂಲಿಕಾರರು. ಹಾವು ಕಚ್ಚಿದ ತಕ್ಷಣ ವಿಪರೀತ ಭಯದಿಂದಲೇ ಸಾವು ಸಂಭವಿಸುತ್ತದೆ. ಈ ಬಗ್ಗೆ ಜನರಿಗೆ ತಿಳಿ ಹೇಳುವ ಕೆಲಸ ಜಿಲ್ಲೆಯಲ್ಲಿ ನಡೆಯಬೇಕಿದೆ.

ದೇವದುರ್ಗ, ಲಿಂಗಸಗೂರು ಮತ್ತು ರಾಯಚೂರಿನಲ್ಲಿ ಹಾವು ಕಡಿತದ ಪ್ರಸಂಗಗಳು ಹೆಚ್ಚು ವರದಿಯಾಗುತ್ತಿವೆ. ಆದರೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮೌನವಾಗಿದ್ದಾರೆ. ಇದರಿಂದಾಗಿ ಜನರು ಮೂಢನಂಬಿಕೆಗಳನ್ನೇ ಹಾವು ಕಡಿತಕ್ಕೆ ತಾಳೆ ಹಾಕುತ್ತಿದ್ದಾರೆ.

ಹಾವು ಕಡಿತದ ವರದಿಗಳು ಹಳ್ಳಿಗಳಿಂದಲೇ ಹೆಚ್ಚಾಗಿ ಕೇಳಿ ಬರುತ್ತವೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪಟ್ಟಣದಲ್ಲಿಯೇ ಇರುವುದರಿಂದ ಪ್ರಥಮ ಚಿಕಿತ್ಸೆ ಪಡೆಯಲಿಚ್ಚಿಸುವವರಿಗೂ ಚಿಕಿತ್ಸೆ ದಕ್ಕುವುದಿಲ್ಲ. ಪಟ್ಟಣಕ್ಕೆ ಧಾವಿಸುವುದಕ್ಕೆ ಸರಿಯಾದ ರಸ್ತೆ ಬಸ್ಸುಗಳ ವ್ಯವಸ್ಥೆಯೂ ಇರುವುದಿಲ್ಲ ಎನ್ನುವುದು ಬೇರೆ ಮಾತು. ಹಾವು ಕಚ್ಚಿಸಿಕೊಂಡಾತ ಎತ್ತಿನ ಗಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪುವ ಹೊತ್ತಿಗೆ ನೀಲಿಗಟ್ಟಿರುತ್ತಾನೆ.

ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಹಾವು ಕಡಿತಕ್ಕೆ ಪ್ರತ್ಯೇಕ ಆ್ಯಂಟಿಡೋಟ್‌ ಚಿಕಿತ್ಸೆ ಸೌಲಭ್ಯ ಇರುತ್ತದೆ. ಆದರೆ ಈ ಚಿಕಿತ್ಸೆ ತುಂಬಾ ದುಬಾರಿಯದು. ಸರಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಆ್ಯಂಟಿಡೋಟ್‌ ಸರಕಿರುವುದಿಲ್ಲ. ಹಾವು ಕಡಿಸಿಕೊಂಡವನಿಗೆ ಚಿಕಿತ್ಸೆಯ ದಿಕ್ಕಿರುವುದಿಲ್ಲ.

ಜಿಲ್ಲೆಯ ಜನತೆ ಕಿಂದರಿಜೋಗಿಗೆ ಎದುರು ನೋಡುತ್ತಿದ್ದಾರೆ. ಸರ್ಕಾರ ಯಾವಾಗ ಕಳಿಸೀತೊ ?

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X