ಕೃಷ್ಣ ದರ್ಶನ ಭಾಗ್ಯ ಸಿಕ್ಕದ ಪಾಪು ಗರ್ಜನೆ

ಕೃಷ್ಣ ದರ್ಶನ ಭಾಗ್ಯ ಸಿಕ್ಕದ ಪಾಪು ಗರ್ಜನೆ
ನಾನು ಸಿನಿಮಾದವನೂ ಅಲ್ಲ , ನನ್ನ ಮುಖ ಚೆಂದವೂ ಇಲ್ಲ ಎನ್ನುವ ಪಾಪು ರಾಜಕಾರಣಿಗಳ ಉದಾಸೀನತೆ ಕುರಿತು ಕೆಂಡ ಕೆಂಡ. ಗೋಕಾಕ್‌ ಚಳವಳಿ ಮಾದರಿಯ ಹೋರಾಟದ ರೂಪುರೇಷೆ ಅವರ ಮನದೊಳಗೆ ಕದಲುತ್ತಿದೆ.

ದಟ್ಸ್‌ಕನ್ನಡ ಬ್ಯೂರೊ

ಬೆಳಗಾವಿ ಕನ್ನಡ ಸಾಹಿತ್ಯ ಸಮ್ಮೇಳನದ ಗೌಜಿ ಗದ್ದಲ ಮುಗಿದ ನಂತರ ಕನ್ನಡ ಚಳವಳಿಕಾರ ಡಾ. ಪಾಟೀಲ ಪುಟ್ಟಪ್ಪ ಅವರ ಕ್ರಾಂತಿ ಮಾತುಗಳಿಗೆ ಅಕಾಲಿಕ ರಜೆ ಸಿಕ್ಕಿತ್ತು. ಈವರೆಗೆ ಮೌನವಾಗಿದ್ದ ಪಾಪು- ಜೂನ್‌ 29ರ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ಪರಿಷನ್ಮಂದಿರದಲ್ಲಿ ಜರುಗಿದ ‘ಮಾದರಿ ಮೈಸೂರಿನ ಹಿನ್ನೆಲೆ, ನವ ಕರ್ನಾಟಕದ ಮುನ್ನೆಲೆ’ ಕುರಿತ ವಿಚಾರ ಸಂಕೀರ್ಣವನ್ನು ಉದ್ಘಾಟಿಸುವ ಅವಕಾಶ ಪಾಪು ಪಾಲಿಗೆ ದಕ್ಕಿತು. ಇಷ್ಟು ದಿನಗಳ ಮೌನದಲ್ಲಿ ಕುದಿದ ವಿಚಾರಗಳನ್ನು ಪಾಪು ಉದ್ಘಾಟನಾ ಭಾಷಣದಲ್ಲಿ ಹೊರಚೆಲ್ಲಿದರು.

ಪಾಪು ಪ್ರಹಾರದ ಮುಖ್ಯಾಂಶಗಳು :

  • ನಮ್ಮನ್ನು ಆಳುವವರಿಗೆ ಸಮಗ್ರ ಕರ್ನಾಟಕದ ಕಲ್ಪನೆಯೇ ಇಲ್ಲ. ಗಡಿ ಪ್ರದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ, ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸರಕಾರ ಕಾಸಿನ ಬೆಲೆ ನೀಡುತ್ತಿಲ್ಲ.
  • ಈ ಸರಕಾರ ಸಮಗ್ರ ಕರ್ನಾಟಕದ ಅಭಿವೃದ್ಧಿಗೋಸ್ಕರ ಯಾರೊಡನೆಯೂ ಚರ್ಚೆಯನ್ನೂ ನಡೆಸುವುದಿಲ್ಲ. ಸಮಗ್ರ ಕರ್ನಾಟಕದ ಒಳಿತಿಗಾಗಿ ಇನ್ನೊಂದು ಗೋಕಾಕ್‌ ಚಳವಳಿ ಅನಿವಾರ್ಯ.
  • ಪುತಿನ ಹೇಳಿದಂತೆ ಬೆಂಗಳೂರು ರಾಜಧಾನಿಯಾಗಿರುವುದೇ ದೊಡ್ಡ ಸಮಸ್ಯೆಯಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಅಧಿಕಾರಿಯನ್ನು ನೇಮಿಸಿ, ಅವರಿಗೆ ಯಾವುದೇ ಆಜ್ಞೆಯನ್ನು ಮಾಡದೇ ಸರಕಾರ ಸುಮ್ಮನೇ ಕುಳಿತಿದೆ.
  • ಹನಿ ನೀರು, ತುಂಡು ಭೂಮಿಗೂ ಹೋರಾಟ ನಡೆಸುವ ಆಂಧ್ರದ ಚಂದ್ರಬಾಬು ನಾಯ್ಡು ಚುರುಕುತನ ನೋಡಿಯಾದರೂ ನಮ್ಮವರು ಬುದ್ಧಿ ಕಲಿಯಬಾರದೇ ? ರಾಜ್ಯಕ್ಕೆ ಆಗುವ ಅನ್ಯಾಯವನ್ನು ನೋಡುತ್ತಾ ಕೂರುವ ಸರಕಾರಕ್ಕೆ ಕೇಂದ್ರಕ್ಕೆ ನೀಟಾಗಿ ಒಂದು ಪತ್ರ ಬರೆಯಲಿಕ್ಕೂ ಬರಲ್ವೇ ?
ದಕ್ಕದ ದರ್ಶನ

ಈ ನಡುವೆ ಸಮಗ್ರ ಕರ್ನಾಟಕದ ಕನಸು ಹೊತ್ತು ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರನ್ನು ಭೇಟಿಯಾಗಲೂ ಪಾಪು ಮೂರು ನಾಲ್ಕು ಬಾರಿ ಪ್ರಯತ್ನಿಸಿದರಂತೆ. ಆದರೆ ಅವರ ಭೇಟಿ ಸಾಧ್ಯವಾಗಲಿಲ್ಲ.

‘ನಾನು ಸಿನಿಮಾ ನಟಿಯೂ ಅಲ್ಲ. ನನ್ನ ಮುಖ ಚೆಂದವೂ ಇಲ್ಲ. ಹೀಗಾಗಿ ನಂಗೆ ಮುಖ್ಯಮಂತ್ರಿಗಳ ಭೇಟಿ ದಕ್ಕಲಿಲ್ಲವೋ ಏನೋ’ ಎಂದು ವ್ಯಂಗ್ಯವಾಡಿದ ಪಾಪು- ಬೆಂಗಳೂರಿನಲ್ಲಿರುವ ಕನ್ನಡಪರ ಹೋರಾಟಗಾರರನ್ನೂ ತರಾಟೆಗೆ ತೆಗೆದುಕೊಂಡರು. ಉದ್ಯೋಗ ನೇಮಕಾತಿಯಲ್ಲಿ ಆಗುತ್ತಿರುವ ತಾರತಮ್ಯವನ್ನು ನೋಡಿಕೊಂಡು ಈ ಕನ್ನಡ ಚಳವಳಿಕಾರರು ಏನು ಮಾಡುತ್ತಿದ್ದರು ಎಂದು ಪಾಪು ಗರ್ಜಿಸಿದರು.

ವಿಚಾರ ಸಂಕಿರಣದಲ್ಲಿ ಅಂಕಣಕಾರ ಎಚ್ಚೆಸ್ಕೆ, ಮೈಸೂರು ವಿವಿಯ ವಿಶ್ರಾಂತ ಕುಲಪತಿ ಡಾ. ದೇ. ಜವರೇ ಗೌಡ ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಉಪಸ್ಥಿತರಿದ್ದರು.

Post your views

ಪೂರಕ ಓದಿಗೆ-
ಬೆಳಗಾವಿ ಸಮ್ಮೇಳನದಲ್ಲಿ ಡಾ.ಪಾಟೀಲ ಪುಟ್ಟಪ್ಪ ಅಧ್ಯಕ್ಷ ಭಾಷಣ

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+