ಬಂದರುಗಳ ಹೂಳೆತ್ತಲು ಮೀನುಗಾರರಿಂದ ಹಫ್ತಾ ವಸೂಲಿ !
ಬಂದರುಗಳ ಹೂಳೆತ್ತಲು ಮೀನುಗಾರರಿಂದ ಹಫ್ತಾ ವಸೂಲಿ !
ಇದು ಮೀನುಗಾರಿಕಾ ಸಚಿವ ವಸಂತ್ ಸಾಲಿಯಾನ್ ಅವರ ಐಡಿಯಾ
ಈ ಯೋಜನೆಯ ಪ್ರಕಾರ ಕರಾವಳಿಯಲ್ಲಿರುವ ಮೀನುಗಾರಿಕಾ ಬೋಟುಗಳಿಂದ ನಿತ್ಯ 10 ರೂಪಾಯಿಗಳನ್ನು ಸಂಗ್ರಹಿಸಿ, ವಾರ್ಷಿಕವಾಗಿ ಸಂಗ್ರಹಿಸಲಾದ ಹಣದಲ್ಲಿ ಹಡಗೊಂದನ್ನು ಖರೀದಿಸಿ ಹೂಳೆತ್ತಲಾಗುವುದು.
ಮಂಗಳವಾರ ಕಾರವಾರದಲ್ಲಿ ಸಮುದ್ರ ಕೊರೆತ ವೀಕ್ಷಣೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೀನುಗಾರಿಕಾ ಸಚಿವ ವಸಂತ ಸಾಲಿಯಾನ್ ಈ ಐಡಿಯಾವನ್ನು ಮುಂದಿಟ್ಟರು. ಹಾಗಾದರೆ ಮೀನುಗಾರರು ತೆರಿಗೆ ಯಾಕೆ ಕಟ್ಟಬೇಕು ಎಂಬ ಸುದ್ದಿಗಾರರ ಪ್ರಶ್ನೆಗೆ ಸಾಲಿಯಾನ್ ಉತ್ತರಿಸಲಿಲ್ಲ.
ಮೀನುಗಾರರಿಂದ ಹಫ್ತಾ ರೂಪದಲ್ಲಿ ಹಣ ವಸೂಲಿ ಮಾಡಿ ನಂತರ ಹಡಗು ಖರೀದಿಸಿ ಹೂಳೆತ್ತುವ ಕಾರ್ಯ ಶುರುಮಾಡುವುದಾದರೆ ಸರಾಕರ ದಿವಾಳಿಯಾಗಿದೆಯೇ ಎಂದು ಸುದ್ದಿಗಾರರು ಇನ್ನಷ್ಟು ಚುಚ್ಚಿದಾಗ ತಬ್ಬಿಬ್ಬಾದ ಸಾಲಿಯಾನ್, ಇದು ನನ್ನ ವೈಯಕ್ತಿಕ ಸಲಹೆ ಎಂದು ಜಾರಿಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications