ಬರ ಪರಿಹಾರಕ್ಕೆ ಕೇಂದ್ರ ಸರ್ಕಾರದ ತಾರಮ್ಮಯ್ಯವೇ ಗುಮ್ಮಯ್ಯ
ಬರ ಪರಿಹಾರಕ್ಕೆ ಕೇಂದ್ರ ಸರ್ಕಾರದ ತಾರಮ್ಮಯ್ಯವೇ ಗುಮ್ಮಯ್ಯ
10 ಸಾವಿರ ಬರ ಪರಿಹಾರ ಕಾಮಗಾರಿಗೆ ಅರ್ಧಚಂದ್ರ ಸಂಭವ
ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ವಿ.ಕೆ.ಕೆ.ಗೋರೆ ಬುಧವಾರ (ಜೂ.25) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಈವರೆಗೆ ಕೇಂದ್ರ ಸರ್ಕಾರ ಕೊಟ್ಟಿರುವ 6.65 ಲಕ್ಷ ಟನ್ ಆಹಾರ ಧಾನ್ಯವನ್ನು ಬಳಸಿ 34 ಸಾವಿರ ಬರ ಪರಿಹಾರ ಕಾಮಗಾರಿಗಳನ್ನು ರಾಜ್ಯ ಕೈಗೆತ್ತಿಕೊಂಡಿದೆ. ಈ ಧಾನ್ಯವೇ ಸಾಕಷ್ಟಿಲ್ಲ. ಇರುವುದರಲ್ಲೇ ತೂಗಿಸಿಕೊಂಡು ಹೋಗುವ ಯತ್ನವೂ ಹೆಚ್ಚು ದಿನ ನಡೆಯಲಿಕ್ಕಿಲ್ಲ. ಇನ್ನು 10- 15 ದಿನಗಳಲ್ಲಿ 3 ಲಕ್ಷ ಟನ್ ಹೆಚ್ಚುವರಿ ಆಹಾರ ಧಾನ್ಯ ಕೇಂದ್ರ ಸರ್ಕಾರದಿಂದ ಬರದಿದ್ದಲ್ಲಿ, 10 ಸಾವಿರ ಬರ ಪರಿಹಾರ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯ ಎಂದರು.
ರಾಜ್ಯದ ಕರಾವಳಿಯಲ್ಲಿ ಮಾತ್ರ ಸಾಕಷ್ಟು ಮಳೆಯಾಗಿದೆ. 58 ತಾಲ್ಲೂಕುಗಳಲ್ಲಿ ಸಾಧಾರಣ ಮತ್ತು ಹೆಚ್ಚು ಮಳೆಯಾಗಿದೆ. 107 ತಾಲ್ಲೂಕುಗಳಲ್ಲಿ ಹನಿ ಬಿದ್ದಿದೆ ಅಷ್ಟೆ. 10 ತಾಲ್ಲೂಕುಗಳು ಇನ್ನೂ ಮಳೆಯ ಮುಖವನ್ನೇ ಕಂಡಿಲ್ಲ . ಭೂಮಿಗೆ ಬೀಜ ಬಿತ್ತಿರುವವರು ಕೇವಲ 25 ಪ್ರತಿಶತ ರೈತರು. ಉಳಿದವರು ಕಾದು ನೋಡುವ ತಂತ್ರ ಅಳವಡಿಸಿಕೊಂಡಿದ್ದಾರೆ ಎಂದು ಗೋರೆ ವರುಣ ವರದಿಯನ್ನು ಕೊಟ್ಟರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications