ಬಳ್ಳಾರಿಯಲ್ಲಿ ದಲಿತ ವ್ಯಕ್ತಿಯ ಪ್ರಾಣ ಕಿತ್ತುಕೊಂಡ ಬಡತನ-ಹಸಿವು
ಬಳ್ಳಾರಿಯಲ್ಲಿ ದಲಿತ ವ್ಯಕ್ತಿಯ ಪ್ರಾಣ ಕಿತ್ತುಕೊಂಡ ಬಡತನ-ಹಸಿವು
ಊರಿನಲ್ಲಿ ನಿಂತ ಗಣಿಗಾರಿಕೆ, ಹೆಚ್ಚಿದ ನಿರುದ್ಯೋಗ
ಮೃತ ಹೊನ್ನೂರಪ್ಪ ಮೂವರು ಮಕ್ಕಳನ್ನು ಅಗಲಿದ್ದಾರೆ. ದುಡಿಯುವುದಕ್ಕೆ ಕೆಲಸವಿಲ್ಲದೆ, ತಿನ್ನುವುದಕ್ಕೆ ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಹೊನ್ನೂರಪ್ಪ ಶನಿವಾರ ಬೆಳಗ್ಗೆ ಎಡವಿ ಬಿದ್ದಿದ್ದರು. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವುದಕ್ಕೆ ಮನೆಯಲ್ಲಿ ಹಣವಿರಲಿಲ್ಲವಾದ್ದರಿಂದ ಮಕ್ಕಳು ತಂದೆಯನ್ನು ಮನೆಯಲ್ಲೇ ಮಲಗಿಸಿದ್ದರು.
ಕಳೆದ ಒಂದೂವರೆ ತಿಂಗಳಿನಿಂದ ಹರಗಿನಡೋಣಿ ಗ್ರಾಮದಲ್ಲಿ ಗಣಿಗಾರಿಕೆಯನ್ನು ನಿಲ್ಲಿಸಿದ್ದರಿಂದ, ಗಣಿಗಾರಿಕೆಯನ್ನು ನಂಬಿಕೊಂಡಿದ್ದ ಜನ ಹೊಟ್ಟೆ ಪಾಡಿಗೆ ಬೇರೆ ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ತಾಂಡವವಾಡುತ್ತಿರುವ ಬಡತನ ಜನರನ್ನು ಸಾವಿನಂಚಿಗೆ ತಳ್ಳುತ್ತಿದೆ. ಹೊನ್ನೂರಪ್ಪ ಅವರ ಅಂತ್ಯಸಂಸ್ಕಾರಕ್ಕಾಗಿ ಮಾನವೀಯತೆಯ ನೆಲೆಯಲ್ಲಿ ಗ್ರಾಮಪಂಚಾಯಿತಿ 1 ಸಾವಿರ ರೂಪಾಯಿ ನೀಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications