ಕಾರವಾರ-ಮುಂಬಯಿ ವಿಶೇಷ ರೈಲು ಅಪಘಾತ, 17 ಸಾವು
ಕಾರವಾರ-ಮುಂಬಯಿ ವಿಶೇಷ ರೈಲು ಅಪಘಾತ, 17 ಸಾವು
ಕಳಚಿಕೊಂಡ ರಜೆ ವಿಶೇಷ ರೈಲಿನ ಬೋಗಿಗಳು, ಪ್ರಕರಣದ ತನಿಖೆಗೆ ನಿತೀಶ್‌ಕುಮಾರ್ ಆದೇಶ
ನಾಲ್ಕು ಬೋಗಿಗಳು ಹಾಗೂ ಇಂಜಿನ್ ರೈಲಿನಿಂದ ಬೇರ್ಪಟ್ಟ ಕಾರಣ ರಾಜಾಪುರ್ ಹಾಗೂ ವೈಭವ್‌ವಾಡಿ ನಿಲ್ದಾಣಗಳ ನಜಡುವೆ ಈ ದುರ್ಘಟನೆ ರಾತ್ರಿ 22.30 ರ ಸುಮಾರಿಗೆ ಸಂಭವಿಸಿದೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದ್ದಾರೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು - ಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ಪ್ರಕಟಣೆ ಹೇಳಿದೆ. ಈ ನಡುವೆ, ಅಪಘಾತದ ಬಗೆಗಿನ ತನಿಖೆಗೆ ರೈಲ್ವೆ ಖಾತೆ ಸಚಿವ ನಿತೀಶ್ ಕುಮಾರ್ ಆದೇಶಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ರೈಲ್ವೆ ತುರ್ತು ದೂರವಾಣಿ ಸಂಖ್ಯೆಗಳು:
ಮುಂಬಯಿ ಸೆಂಟ್ರಲ್ (ಪೂರ್ವ ರೈಲ್ವೆ )- (022) 23017426 ಮತ್ತು (022) 23017425
ಕೊಂಕಣ ರೈಲ್ವೆ- (022) 27579939 ಮತ್ತು (022) 27579938
ಕಂಕಾವಳಿ ನಿಲ್ದಾಣ- (02367) 230111 ಮತ್ತು (02367) 232243
ಮದ್‌ಗಾಂವ್ ನಿಲ್ದಾಣ- 0832) 2712796 ಮತ್ತು (0832) 2703950
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications