ನಾಗಾರ್ಜುನ ವಿದ್ಯುತ್ ಸ್ಥಾವರಕ್ಕೆ ಪರಿಸರಾಸಕ್ತರ ವಿರೋಧ
ನಾಗಾರ್ಜುನ ವಿದ್ಯುತ್ ಸ್ಥಾವರಕ್ಕೆ ಪರಿಸರಾಸಕ್ತರ ವಿರೋಧ
ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರದಿಂದ ಪಶ್ಚಿಮ ಘಟ್ಟಕ್ಕೆ ಹಾನಿ
ಕಲ್ಲಿದ್ದಲು ಬಳಕೆಯ ಬದಲಾಗಿ ಅನಿಲ ಆಧಾರಿತ ಸ್ಥಾವರ ಸ್ಥಾಪಿಸುವಂತೆ ಪರಿಸರವಾದಿಗಳು ನಾಗಾರ್ಜುನ ಕಂಪೆನಿಗೆ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಗೆ ತಾಗಿಕೊಂಡಿರುವ ಪಶ್ಚಿಮ ಘಟ್ಟವು ಜಗತ್ತಿನ 18 ಜೀವ ವೈವಿಧ್ಯ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದೆ. ಕಲ್ಲಿದ್ದಲು ಆಧಾರಿತ ಸ್ಥಾವರದಿಂದ ಅದಕ್ಕೆ ಗಂಭೀರ ಹಾನಿಯಾಗಲಿದೆ ಎಂದು ಪರಸರಾಸಕ್ತ ಒಕ್ಕೂಟದ ಅಧ್ಯಕ್ಷ ರಂಜನ್ ರಾವ್ ಯರ್ಡೂರ್ ಹಾಗೂ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಹೇಳಿದ್ದಾರೆ.
ಕಲ್ಲಿದ್ದಲಿಗೆ ಹೋಲಿಸಿದರೆ ಪರಿಸರ ಹಿತ ದೃಷ್ಠಿಯಿಂದ ಅನಿಲವು ಹೆಚ್ಚು ಅನುಕೂಲಕರ. ಆದ್ದರಿಂದ ರಾಜಕೀಯ ನಾಯಕರು ಈ ಕುರಿತು ಗಮನ ಹರಿಸಬೇಕು ಎಂದು ರಂಜನ್ ರಾವ್ ಆಗ್ರಹಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications