ಕಾವೇರಿನಿಗಮ: ಜುಲೈ ಅಂತ್ಯದೊಳಗೆ 500 ಕೋಟಿ ರೂ.ಸಂಗ್ರಹ

ಕಾವೇರಿನಿಗಮ: ಜುಲೈ ಅಂತ್ಯದೊಳಗೆ 500 ಕೋಟಿ ರೂ.ಸಂಗ್ರಹ
ನಿಗಮದ ಆದ್ಯತೆಯೆಲ್ಲಾ ನೀರಾವರಿ ಕಾಮಗಾರಿಗಳತ್ತ ..

ಬೆಂಗಳೂರು : ರಾಜ್ಯ ಸರಕಾರ ಸ್ಥಾಪಿಸಿರುವ ಕಾವೇರಿ ನೀರಾವರಿ ನಿಗಮವು ಜುಲೈ ಅಂತ್ಯದೊಳಗೆ 500 ಕೋಟಿ ರೂಪಾಯಿ ನಿಧಿ ಸಂಗ್ರಹಿಸಿ ಕಾವೇರಿ ಕಣಿವೆಯಲ್ಲಿನ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ನೀರಾವರಿ ಸಚಿವ ಎಚ್‌. ಕೆ. ಪಾಟೀಲ್‌ ತಿಳಿಸಿದ್ದಾರೆ.

ಕಾಮಗಾರಿಗೋಸ್ಕರ ಅಗತ್ಯವಿರುವ ಹಣವನ್ನು ಹೊರಗಿನ ವಾಣಿಜ್ಯ ಮೂಲಗಳಿಂದ, ಖಾಸಗಿ ಮೂಲದಿಂದ ಅಥವಾ ಬಾಂಡ್‌ಗಳ ಮೂಲಕ ಸಂಗ್ರಹಿಸಲಾಗುವುದು. ಕಾವೇರಿ ಕಣಿವೆಯಲ್ಲಿ ಇನ್ನೂ 23 ಯೋಜನೆಗಳು ಸಂಪೂರ್ಣಗೊಂಡಿಲ್ಲ. ಕಾವೇರಿ ನಿಗಮವು ಬಾಕಿ ಇರುವ ಎಲ್ಲ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದು, ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಆಧುನಿಕ ನೀರಾವರಿ ಕ್ರಮಗಳಿಗೆ ಒತ್ತು ನೀಡಲಿದೆ ಎಂದು ನಿಗಮದ ಪ್ರಥಮ ಬೋರ್ಡ್‌ ಮೀಟಿಂಗ್‌ ನಂತರ (ಜೂನ್‌ 19, ಗುರುವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಟೀಲ್‌ ತಿಳಿಸಿದರು.

ನಿಗಮದ ಅಧ್ಯಕ್ಷ ಮುಖ್ಯಮಂತ್ರಿ ಎಸ್ಸೆಂ. ಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಚಿತ್ರಾವತಿ ನದಿ ನೀರಿಗಾಗಿ ನಡೆಯುತ್ತಿರುವ ಜಗಳವನ್ನು ಪ್ರಸ್ತಾಪಿಸಿದ ಪಾಟೀಲ್‌ ಪರಗೋಡು ಅಣೆಕಟ್ಟನ್ನು ವಿರೋಧಿಸುವ ನೈತಿಕ ಹಕ್ಕು ಆಂಧ್ರಕ್ಕಿಲ್ಲ ಎಂದರು.

(ಪಿಟಿಐ)

ಮುಖಪುಟ / ಕಾವೇರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+