ಕರ್ನಾಟಕ ಲೇಖಕಿಯರ ಸಮ್ಮೇಳನ ಅಧ್ಯಕ್ಷರಾಗಿ ವೀಣಾಶಾಂತೇಶ್ವರ

ಕರ್ನಾಟಕ ಲೇಖಕಿಯರ ಸಮ್ಮೇಳನ ಅಧ್ಯಕ್ಷರಾಗಿ ವೀಣಾಶಾಂತೇಶ್ವರ
ಜುಲೈ 12 ಹಾಗೂ 13ರಂದು ಲೇಖಕಿಯರ 5 ನೇ ಸಮ್ಮೇಳನ. 7 ವರ್ಷಗಳ ನಂತರ ಮತ್ತೆ ಸಮ್ಮೇಳನದ ಪುನರುಜ್ಜೀವನ.

ಬೆಂಗಳೂರು : ಜುಲೈ 12ರಿಂದ ನಡೆಯುವ ಎರಡು ದಿನಗಳ ಲೇಖಕಿಯರ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲೇಖಕಿ ವೀಣಾ ಶಾಂತೇಶ್ವರ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ 12 ಹಾಗೂ 13ರಂದು ಅಖಿಲ ಕರ್ನಾಟಕ ಲೇಖಕಿಯರ 5ನೇ ಸಮ್ಮೇಳನ ನಡೆಯುವುದು. ಈ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲೇಖಕಿ ವೀಣಾ ಶಾಂತೇಶ್ವರ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸಮ್ಮೇಳನವನ್ನು ಉದ್ಘಾಟಿಸುವರು ಎಂದು ಲೇಖಕಿಯರ ಸಂಘದ ಅಧ್ಯಕ್ಷೆ ಕೆ.ಉಷಾ ಪಿ.ರೈ ಸುದ್ದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜನಪ್ರಿಯ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಹಾಗೂ ಪ್ರಸಿದ್ಧ ತೆಲುಗು ಲೇಖಕಿ ಅಬ್ಬೂರಿ ಛಾಯಾದೇವಿ ಸಮ್ಮೇಳನದಲ್ಲಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ನಡೆಯುವ ಪುಸ್ತಕ ಪ್ರದರ್ಶನ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನವನ್ನು ಪ್ರೇಮಾ ಕೃಷ್ಣ ಉದ್ಘಾಟಿಸುವರು.

ಏಳು ವರ್ಷಗಳ ನಂತರ ಲೇಖಕಿಯರ ಸಮ್ಮೇಳನ ಮತ್ತೆ ನಡೆಯುತ್ತಿದೆ. ಸಮ್ಮೇಳನದಲ್ಲಿ ವಿಚಾರಗೋಷ್ಠಿ , ಕವಿಗೋಷ್ಠಿ ಹಾಗೂ ಹಾಸ್ಯಗೋಷ್ಠಿ ನಡೆಯಲಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+