ಗೌಡ್ರ ಗದ್ದಲದಾಗೆ ಡಿಕೇಶಿ ಜೇಬೇ ಪಿಕ್‌ಪಾಕೇಟಾಗೋಯ್ತು

ಗೌಡ್ರ ಗದ್ದಲದಾಗೆ ಡಿಕೇಶಿ ಜೇಬೇ ಪಿಕ್‌ಪಾಕೇಟಾಗೋಯ್ತು
ತುರುವೇಕೆರೆ ಸಮುದಾಯ ಭವನ ಉದ್ಘಾಟನೆ ಸಮಾರಂಭದಲ್ಲಿ ವಿವಿಐಪಿಗಳ ಜೇಬಿಗೆ ದೊಡ್ಡ ಕತ್ತರಿ

ತುರುವೇಕೆರೆ : ಇಲ್ಲಿನ ಬಿಜಿಎಸ್‌ ಸಮುದಾಯ ಭವನ ಉದ್ಘಾಟಿಸಲು ಸೋಮವಾರ (ಜೂನ್‌ 16) ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಬರಬೇಕಾಗಿತ್ತು. ಆದರೆ, ಅವರು ಬೆಂಗಳೂರಿನ ಗಾಂಧಿಬಜಾರಿನ ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂದು, ಲಾಲ್‌ಬಾಗ್‌ ನೋಡೋಕೆ ಹೋಗುವ ಕಾರ್ಯಕ್ರಮವಿದ್ದ ಕಾರಣ ಉದ್ಘಾಟನಾ ಸಮಾರಂಭಕ್ಕೆ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಬಂದಿದ್ದರು.

ಒಕ್ಕಲಿಗ ಸಮುದಾಯವನ್ನು ಪೊರೆದು, ಉದ್ಧರಿಸುವ ಏಕಮೇವಾದ್ವಿತೀಯರು ಆದಿ ಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ. ಕೆಲವರು ಇನ್ನೊಬ್ಬ ಸ್ವಾಮೀಜಿಯನ್ನು ಪಟ್ಟಕ್ಕೆ ತಂದು, ಮಠ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಡಿಕೇಶಿ ಉದ್ಘರಿಸಿದಾಗ, ಚಪ್ಪಾಳೆಯ ಜೊತೆಗೆ ಕೆಲವರು ಭಿನ್ನಮತೀಯರ ತಗಾದೆಯ ಸದ್ದೂ ಕೇಳಿಬಂತು. ಸಂಯುಕ್ತ ಮತ್ತು ಜಾತ್ಯತೀತ ಜನತಾ ದಳದ ಕೆಲವರು ಸಮಾರಂಭದಿಂದ ಹೊರ ನಡೆದರು. ದೇವೇಗೌಡರ ವಿರುದ್ಧ ರಾಜಕೀಯ ಅಪಪ್ರಚಾರ ಮಾಡಲು ಡಿಕೇಶಿ ವೇದಿಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರೆಲ್ಲ ದೂರಿದರು.

ಗೌಜು ಗದ್ದಲಗಳ ನಡುವೆ ಸಮಾರಂಭ ಅಂತೂಇಂತೂ ಮುಗಿಯಿತು. ಸಮಾರಂಭ ಮುಗಿದ ಮೇಲೆ ವಿವಿಐಪಿಗಳೆಲ್ಲಾ ಜೇಬೊಳಗೆ ಕೈಯಿಟ್ಟುಕೊಂಡಾಗ, ಭಣಭಣ. ಅವರ ದುಡ್ಡೆಲ್ಲ ಕಳವಾಗಿತ್ತು. ಯಾರೋ ಪ್ರಕಾಂಡ ಕಳ್ಳ ಸುಮಾರು 18 ವಿವಿಐಪಿಗಳ ಜೇಬುಗಳಿಗೇ ಕತ್ತರಿ ಹಾಕಿದ್ದ. ಆದ ಕಳವು ಒಟ್ಟು 40 ಸಾವಿರ ರುಪಾಯಿ. ಒಕ್ಕಲಿಗ ನಾಯಕ ಹಿಂದೂಮಾರನಹಳ್ಳಿ ನಾಗರಾಜ್‌ ಅವರ 2 ಸಾವಿರ ರುಪಾಯಿ ದುಡ್ಡಿನ ಜೊತೆಗೆ ಹೀರೋ ಹೋಂಡಾ ಬೈಕನ್ನೂ ಕಳ್ಳರು ಕದ್ದೊಯ್ದಿದ್ದರು.

ಉದ್ಘಾಟನೆ ನೆರವೇರಿಸಿದ ನಂತರ ಡಿಕೇಶಿ ಜೇಬಿಗೆ ಕೈ ಇಳಿಬಿಟ್ಟುಕೊಂಡಾಗ ಗೊತ್ತಾಯಿತು, ಅವರದ್ದೂ 8 ಸಾವಿರ ರುಪಾಯಿ ಕಳವಾಗಿತ್ತು !

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+