ರಾಮಜನ್ಮಭೂಮಿ ನ್ಯಾಸದ ಪರಮಹಂಸರಿಗೆ ಹೃದಯಾಘಾತ
ರಾಮಜನ್ಮಭೂಮಿ ನ್ಯಾಸದ ಪರಮಹಂಸರಿಗೆ ಹೃದಯಾಘಾತ
ಸರ್ಕಾರದ ವಿಶೇಷ ವಿಮಾನದಲ್ಲಿ ಲಕ್ನೋ ಆಸ್ಪತ್ರೆಗೆ ರವಾನೆ
ಪರಮಹಂಸ ರಾಮಚಂದ್ರ ದಾಸ್‌ರು ಗುರುವಾರ ಬೆಳಗ್ಗೆ ಅಯೋಧ್ಯೆಯಲ್ಲಿ ಹೃದಯಾಘಾತಕ್ಕೆ ಈಡಾದರು. ತಕ್ಷಣವೇ ಅವರನ್ನು ಸರ್ಕಾರದ ವಿಶೇಷ ವಿಮಾನದಲ್ಲಿ ಲಕ್ನೋಗೆ ಕರೆತರಲಾಯಿತು. ವಿಮಾನದಲ್ಲಿ ರಾಮಚಂದ್ರ ಅವರೊಂದಿಗೆ ತಜ್ಞ ವೈದ್ಯರುಗಳ ತಂಡ ಕೂಡ ಪ್ರಯಾಣ ಬೆಳೆಸಿತು.
ಗುರುವಾರ ಮುಂಜಾನೆ ರಾಮಚಂದ್ರ ದಾಸರು ಪ್ರಾರ್ಥನೆಗೆ ಸಿದ್ಧವಾಗುತ್ತಿದ್ದ ಸಮಯದಲ್ಲಿ ಹೃದಯಾಘಾತಕ್ಕೀಡಾದರು. ಎರಡು ಬಾರಿ ಹೃದಯಾಘಾತವಾದ ರಾಮಚಂದ್ರ ದಾಸರನ್ನು ಫೈಜಾಬಾದ್ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.
ರಾಮಚಂದ್ರ ದಾಸರನ್ನು ಲಕ್ನೋಗೆ ಕರೆದೊಯ್ಯುವ ಮುನ್ನ, ಉತ್ತರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ವಿನಯ್ ಕಟಿಯಾರ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಹಾಗೂ ಅಭಿಮಾನಿಗಳು ಫೈಜಾಬಾದ್‌ನ ಆಸ್ಪತ್ರೆಗೆ ಆಗಮಿಸಿ ರಾಮಚಂದ್ರ ದಾಸ್ ಅವರ ದೇಹಸ್ಥಿತಿಯನ್ನು ವಿಚಾರಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications