ಮಂಗಳೂರಿಗೆ ಮುತ್ತಿಕ್ಕಿದ ಮುಂಗಾರು ;11ಕ್ಕೆ ಕುಸಿದ ಉಷ್ಣಾಂಶ
ಮಂಗಳೂರಿಗೆ ಮುತ್ತಿಕ್ಕಿದ ಮುಂಗಾರು ;11ಕ್ಕೆ ಕುಸಿದ ಉಷ್ಣಾಂಶ
ತುಂಬೆ ಅಣೆಕಟ್ಟೆಗೆ ಸ್ವಲ್ಪ ನೀರು ಬಂದಿದ್ದು, ಕುಡಿಯುವ ನೀರಿನ ತೊಂದರೆ ಕೊಂಚ ಬಗೆ ಹರಿದಿದೆ
ಕಳೆದ 24 ಗಂಟೆಗಳಲ್ಲಿ ಮಂಗಳೂರು ನಗರಿಯಲ್ಲಿ 25.8 ಮಿಲಿ ಮೀಟರ್ ಮಳೆ ಸುರಿದಿದೆ. ಬಜ್ಪೆ ವಿಮಾನ ನಿಲ್ದಾಣದಲ್ಲಿಯೂ 14.8 ಮಿಲಿ ಮೀಟರ್ ಮಳೆಯಾಗಿದೆ. ತುಂಬೆ ಅಣೆಯಲ್ಲಿ ನೀರು ತಳ ಮುಟ್ಟಿ, ಜನ ಕುಡಿಯುವ ನೀರಿಗೆ ಹಾಹಾಕರಿಸಬೇಕಾದ ಪರಿಸ್ಥಿತಿ ಇಣುಕುತ್ತಿತ್ತು.
ಕೆಲವೆಡೆ 3 ದಿನಕ್ಕೊಮ್ಮೆ, ಮತ್ತೆ ಕೆಲವೆಡೆ ನಾಲ್ಕು ದಿನಕ್ಕೊಮ್ಮೆ ನೀರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿರುವ ಮಲೆನಾಡಲ್ಲಿ ಈಗ ತಣ್ಣನೆಯ ಗಾಳಿ ಸುಳಿದಿದೆ. ತುಂಬೆ ನದಿಗೂ ಸ್ವಲ್ಪ ನೀರು ಸೇರಿದೆ. ಮಂಗಳೂರಿಗರ ಕುಡಿಯುವ ನೀರಿನ ಏಕೈಕ ಮೂಲ ಪೂರ್ಣ ಬತ್ತದಿರುವುದರಿಂದ ಜನ ನೆಮ್ಮದಿಯ ನಿಟ್ಟುಸಿರಿಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications