ಜೂ.7ಕ್ಕೆ ಬೆಂಗಳೂರು ಮಕ್ಕಳ ಜತೆ ಕಲಾಂ ತಾತನ ಊಟ

ಜೂ.7ಕ್ಕೆ ಬೆಂಗಳೂರು ಮಕ್ಕಳ ಜತೆ ಕಲಾಂ ತಾತನ ಊಟ
ಇಸ್ಕಾನ್‌ನ ಪಾತ್ರೆ ಸದಾ ಅಕ್ಷಯವಾಗಲಿ

ಬೆಂಗಳೂರು : ಮಕ್ಕಳೊಂದಿಗೆ ಮಗುವಾಗುವ ಜಾಯಮಾನದ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್‌ ಕಲಾಂ ಜೂನ್‌ 7ನೇ ತಾರೀಕು ಇಸ್ಕಾನ್‌ನ ಕೃಷ್ಣ ದೇಗುಲದಲ್ಲಿ 900 ಬಡ ಮಕ್ಕಳ ಜತೆ ಸಾಲಲ್ಲಿ ಕೂತು ಊಟ ಮಾಡಲಿದ್ದಾರೆ.

ಜೂನ್‌ 6ನೇ ತಾರೀಕು ಸಂಜೆ ಬೆಂಗಳೂರಿಗೆ ಬರಲಿರುವ ಕಲಾಂ, ಮರುದಿನ ಇಸ್ಕಾನ್‌ನ ಅಕ್ಷಯ ಪಾತ್ರೆ ಯೋಜನೆಗೆ ಹೊಸ ಆಯಾಮ ಕೊಡಲಿದ್ದಾರೆ. ನಗರದ ಮಹಾನಗರ ಪಾಲಿಕೆಯ ಹಾಗೂ ಸರ್ಕಾರಿ ಶಾಲೆಗಳ ಸುಮಾರು 700 ಮಕ್ಕಳೂ ಸೇರಿದಂತೆ 900 ಬಡ ಶಾಲಾ ಮಕ್ಕಳೊಂದಿಗೆ ಸಾಲಿನಲ್ಲಿ ಕೂತು ಕಲಾಂ ತಾತ ಉಣ್ಣಲಿದ್ದಾರೆ. ಊಟದೊಟ್ಟಿಗೆ ಮಕ್ಕಳು ಕಲಾಂ ಅಜ್ಜನನ್ನು ಮನದಣಿಯೆ ಮಾತಾಡಿಸಬಹುದು. ಚೆಂದದ ಪ್ರಶ್ನೆಗಳಿಗೆ ತಾತ ಅಂದದ ಉತ್ತರ ಕೊಡಲಿದ್ದಾರೆ.

2000ನೇ ಇಸವಿಯಲ್ಲಿ ಶುರುವಾದ ಇಸ್ಕಾನ್‌ನ ಮಹತ್ವಾಕಾಂಕ್ಷೆಯ ಅಕ್ಷಯ ಪಾತ್ರೆ ಯೋಜನೆ ಈಗ ದೊಡ್ಡದಾಗಿದೆ. 1500 ಮಕ್ಕಳಿಗೆ ಊಟ ಬಡಿಸುವುದರೊಂದಿಗೆ ಶುರುವಾದ ಯೋಜನೆ ಇವತ್ತು 43 ಸಾವಿರ ಮಕ್ಕಳಿಗೆ ಉಣಬಡಿಸುವಷ್ಟು ಬೆಳೆದಿದೆ. ಈ ಶೈಕ್ಷಣಿಕ ವರ್ಷದಲ್ಲಿ 1 ಲಕ್ಷ ಮಕ್ಕಳಿಗೆ ಊಟ ಹಾಕಬೇಕೆಂಬುದು ಇಸ್ಕಾನ್‌ನ ಗುರಿ. 2005ನೇ ಇಸವಿ ಹೊತ್ತಿಗೆ 2.5 ಲಕ್ಷ ಮಕ್ಕಳಿಗೆ ಊಟ ಬಡಿಸುವುದು ಕನಸು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+