ರಾಜ್ಯಾದ್ಯಂತ ಮಳೆ ನೀರ ಕೊಯ್ಲಿಗೆ ಸರಕಾರದ ಕ್ರಮ

ಬೆಂಗಳೂರು: ಮಳೆ ನೀರ ಸಂಗ್ರಹವೇ ಬರ ತಡೆಗಟ್ಟುವುದಕ್ಕೆ ಉತ್ತಮ ಮಾರ್ಗ ಎಂದು ಸರಕಾರ ನಿರ್ಧರಿಸಿದೆ.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಭಾಗದೊಂದಿಗೆ ಮಳೆ ನೀರ ಕೊಯ್ಲಿಗೆ ಯೋಜನೆಯಾಂದನ್ನು ರೂಪಿಸಿದೆ. ಹಳ್ಳಿಗಳಲ್ಲಿರುವ ಮನೆಗಳು ಮಳೆ ನೀರ ಕೊಯ್ಲಿಗೆ ವ್ಯವಸ್ಥೆ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವೆ ನಫೀಸಾ ಫಜಲ್‌ ಹೇಳಿದ್ದಾರೆ.

ಮಳೆ ಕೊಯ್ಲು ವ್ಯವಸ್ಥೆಯನ್ನು ಈಗಾಗಲೇ ನಗರ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಕರ್ನಾಟಕ ಮುನ್ಸಿಪಲ್‌ ಕಾರ್ಪರೇಷನ್‌ ಕಾಯ್ದೆಯಡಿ ಯೋಜನೆಗೆ ಬೇಕಾದ ರೂಪುರೇಶಗಳನ್ನು ಈಗಾಗಲೇ ನಿರ್ಧರಿಸಲಾಗಿದೆ. ಮಳೆ ನೀರು ಸಂಗ್ರಹಕ್ಕಾಗಿ ಬೇಕಾದ ತಂತ್ರಜ್ಞಾನ ಈಗಾಗಲೇ ಸಿದ್ಧವಾಗಿದೆ. ಈ ತಂತ್ರದಿಂದಾಗಿ ಅಂತರ್ಜಲ ವೃದ್ಧಿಗೂ ಅನುಕೂಲವಾಗುತ್ತದೆ ಎಂದು ಸಚಿವೆ ಹೇಳಿದರು.

ಜಲ ರಕ್ಷಣಾ ಯೋಜನೆ ಎಂಬ ಹೆಸರಿನ ಈ ಯೋಜನೆಯನ್ನು ಅಳವಡಿಸಿಕೊಳ್ಳುವ ರೈತರಿಗೆ ಅವರು ವೆಚ್ಚ ಮಾಡುವ ಕೂಲಿ ಹಣದ ಶೇ 75 ರಷ್ಟು ಹಣವನ್ನು ಹಿಂದಿರುಗಿಸಲಾಗುತ್ತದೆ ಎಂಬ ಭರವಸೆಯನ್ನೂ ಸಚಿವೆ ನೀಡಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+