ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಲೋಡೌನೇ ನಮಗೆ ವರವಾಯ್ತು : ಕಿರಣ್‌ ಕಾರ್ನಿಕ್‌

By Staff
|
Google Oneindia Kannada News

ಬೆಂಗಳೂರು : ಜಾಗತಿಕ ಮಟ್ಟದಲ್ಲಿ ಸ್ಲೋಡೌನು ಎಂಬ ಸೊಲ್ಲಿದ್ದದ್ದೇ ಭಾರತೀಯ ಸಾಫ್ಟ್‌ವೇರ್‌ ಕಂಪನಿಗಳಿಗೆ ವರದಾನವಾಯಿತು. 2002ನೇ ಇಸವಿಯಲ್ಲಿ ಸಾಫ್ಟ್‌ವೇರ್‌ ಉದ್ದಿಮೆಯಲ್ಲಿ ಭಾರತ ನಿರೀಕ್ಷಿತ ಸಾಧನೆಯನ್ನೇ ಮಾಡಿದೆ ಎಂದು ನಾಸ್‌ಕಾಮ್‌ ಅಧ್ಯಕ್ಷ ಕಿರಣ್‌ ಕಾರ್ನಿಕ್‌ ಹೇಳಿದರು.

ಅಖಿಲ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದ 90ನೇ ಮೇಳದಲ್ಲಿ ಸೋಮವಾರ ಅವರು ಸುದ್ದಿಗಾರರೊಡನೆ ಮಾತಾಡಿದರು. ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹಿನ್ನಡೆಯಾಯಿತು ನಿಜ. ಆದರೆ ಇದರ ಸೊಲ್ಲು ವಾಸ್ತವಕ್ಕಿಂತ ಜೋರಾಗಿ ಇತ್ತು. ಪರಿಣಾಮ ಖರ್ಚು ಕಡಿತಕ್ಕೆ ಕಂಪನಿಗಳು ವಾಲಿದವು. ದೂರದ ದೇಶದಲ್ಲಿ ಅಗ್ಗದ ಬೆಲೆಗೆ ಸಾಫ್ಟ್‌ವೇರ್‌ ಸೇವೆ ಸಿಗುತ್ತದಾ ಎಂದು ನೋಡಿದವು. ಆಗ ಕಂಪನಿಗಳಿಗೆ ಕಂಡಿದ್ದು ಭಾರತ. ಪರಿಣಾಮ ಹೊಸ ಸಾಫ್ಟ್‌ವೇರ್‌ ಗ್ರಾಹಕರು ಸಿಕ್ಕಿದ್ದು ಭಾರತಕ್ಕೆ ಎಂದರು.

2002ನೇ ಇಸವಿಯಲ್ಲಿ ಸಾಫ್ಟ್‌ವೇರ್‌ ಕ್ಷೇತ್ರ ಪ್ರತಿಶತ 30ರಷ್ಟು ಪ್ರಗತಿ ಸಾಧಿಸಿದೆ. 2003ರಲ್ಲೂ ಇದೇ ಗತಿಯಲ್ಲಿ ಅಭಿವೃದ್ಧಿ ಸಾಧ್ಯವಿದೆ. ಇದಕ್ಕಿಂತ ಹೆಚ್ಚೇನನ್ನೂ ನಾವು ನಿರೀಕ್ಷಿಸುತ್ತಿಲ್ಲ. ಆದರೆ ನಮ್ಮಲ್ಲಿನ ಕೆಲವು ಆಡಳಿತ ತೊಡಕುಗಳು ನಿವಾರಣೆಯಾಗಬೇಕು. ಚೀನಾ ದೇಶಕ್ಕಿಂತ ನಾವು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳಷ್ಟು ಮುಂದಿದ್ದೇವೆ. ಇದನ್ನು ಕಾಪಾಡಿಕೊಳ್ಳಲು ನಾವು ಅವರೊಂದಿಗೆ ಸ್ಪರ್ಧಿಸಬೇಕಾಗಿರುವುದು ಆಡಳಿತಾತ್ಮಕವಾಗಿ. ಅಲ್ಲಿ ವಿಳಂಬ ನೀತಿಯಿಲ್ಲ, ಲಂಚಗುಳಿತನ ನಮ್ಮಷ್ಟು ಇಲ್ಲ. ನಮಗಿಂತ ಹೆಚ್ಚು ಚುರುಕುಮತಿಗಳು ಅಲ್ಲಿದ್ದಾರೆ. ನಾವು ಆಡಳಿತಾತ್ಮಕವಾಗಿ ಇನ್ನೂ ಬಲಾಢ್ಯವಾಗಬೇಕು ಎಂದು ಕಾರ್ನಿಕ್‌ ಅಭಿಪ್ರಾಯಪಟ್ಟರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X