ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರಾಯಣ ನೀತಿ !

By Staff
|
Google Oneindia Kannada News

ಬೆಂಗಳೂರು : ಭಾರತೀಯ ಉದ್ದಿಮೆ ಹಾಗೂ ಶಿಕ್ಷಣ ಕ್ಷೇತ್ರ ಕೈಜೋಡಿಸಿ, ರಿಯಾಯಿತಿಯಿಲ್ಲದೆ ಉನ್ನತ ಶಿಕ್ಷಣವನ್ನು ಒದಗಿಸಬೇಕು. ಈ ಕೆಲಸ ಮುಕ್ತ ಮಾರುಕಟ್ಟೆ ಪರಿಸರದಲ್ಲೇ ನಡೆಯುವಂತಾಗಬೇಕು ಎಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮಿನುಗುತಾರೆ ಇನ್ಫೋಸಿಸ್‌ ಎನ್‌.ಆರ್‌.ನಾರಾಯಣ ಮೂರ್ತಿ ಸಲಹೆ ಕೊಟ್ಟರು.

ಅಖಿಲ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದ 90ನೇ ಮೇಳದ ‘ಬೌದ್ಧಿಕ ಸಮಾಜಕ್ಕೆ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ವಿಷಯ ಕುರಿತ ಚರ್ಚೆಯ ಸಂದರ್ಭದಲ್ಲಿ ನಾರಾಯಣ ಮೂರ್ತಿ ಈ ಸಲಹೆ ಕೊಟ್ಟರು. ನಾಸ್ದಾಕ್‌ ಯಾದಿಯ ಕಂಪನಿ ಇನ್ಫೋಸಿಸ್‌ನ ಅಧ್ಯಕ್ಷ ಹಾಗೂ ರಾಜಗುರು ನಾರಾಯಣ ಮೂರ್ತಿ ಕಳಕಳಿಯ ಮಾತುಗಳು ಇಂತಿವೆ-

  • ಉನ್ನತ ಶಿಕ್ಷಣದಲ್ಲಿ ಯಾವುದೇ ರಿಯಾಯಿತಿ ಕೊಡುವ ಅಗತ್ಯವಿಲ್ಲ. ನಮ್ಮಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸಾಕಷ್ಟು ಸವಲತ್ತುಗಳು ಬೇಕು. ಅಲ್ಲಿ ರಿಯಾಯಿತು ಕೊಡುವುದು ಒಳ್ಳೆಯದು. ಉನ್ನತ ಶಿಕ್ಷಣವನ್ನು ಮುಕ್ತ ಮಾರುಕಟ್ಟೆಯ ರೀತಿಯಲ್ಲಿ ಉದ್ದಿಮೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಕೈಜೋಡಿಸಿ ಒದಗಿಸಬೇಕು.
  • ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಧ್ವನಿ ಸವಲತ್ತುಗಳು (ವಾಯ್ಸ್‌ ಅಪ್ಲಿಕೇಷನ್ಸ್‌) ಭಾರತದಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ ಸಿದ್ಧವಾಗಬೇಕು. ಹೀಗಾದಾಗ ಜನರ ಭಾಷಾ ಸ್ವಾತಂತ್ರ್ಯಕ್ಕೆ ಸ್ಪಂದಿಸಿದಂತಾಗುತ್ತದೆ. ತಂತಮ್ಮ ಮಾತೃಭಾಷೆಯಲ್ಲೇ ಸಂವಹನೆ ಸಾಧ್ಯವಾದರೆ, ಹೆಚ್ಚು ಜನರನ್ನು ಮಾಹಿತಿ ತಂತ್ರಜ್ಞಾನ ತಲುಪಲು ಸಾಧ್ಯ.
  • ಭಾರತದಲ್ಲಿ ಕಂಪ್ಯೂಟರ್‌ ಹಾರ್ಡ್‌ವೇರ್‌ ದರ ತಗ್ಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹಾರ್ಡ್‌ವೇರ್‌ ಬೆಲೆ ಹೆಚ್ಚಾಗಿದೆ.
  • ಭಾರತದ ಬಡಬಗ್ಗರನ್ನು ದಂಗೆಡಿಸಿರುವ ‘ಡಿಜಿಟಲ್‌ ವಿಭಜನೆ’ಗೆ ಸರ್ಕಾರ ಉತ್ತರ ಕಂಡುಹಿಡಿಯಬೇಕು. ಮಾಹಿತಿ ತಂತ್ರಜ್ಞಾನದಿಂದ ಶ್ರೀಮಂತ- ಬಡವರ ನಡುವೆ ನಿರ್ಮಿತವಾಗಿರುವ ಸಾಮಾಜಿಕ ಕಂದರಕ್ಕೆ ಸೇತುವೆ ಕಟ್ಟುವ ಕೆಲಸವನ್ನು ಸರ್ಕಾರ ಮಾಡಬೇಕು.
  • ದೇಶದ ಅಕ್ಷರಸ್ಥರ ಸಂಖ್ಯೆ ಪ್ರತಿಶತ 65 ಮಾತ್ರ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹಣ ಹೂಡಬೇಕಾಗಿರುವುದು ಅತ್ಯವಶ್ಯಕ.
  • ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಭಾರತ ಮೊದಲಿಂದಲೂ ಜಾಗತಿಕ ಸ್ಪರ್ಧೆಗೆ ಎದೆಗೊಟ್ಟಿತು. ಅಂತೆಯೇ ವಿವಿಧ ಆರ್ಥಿಕ ಕ್ಷೇತ್ರಗಳಲ್ಲೂ ಸರ್ಕಾರ ಜಾಗತಿಕ ಸ್ಪರ್ಧಾಳುವಾಗಬೇಕು. ಅಂಥ ಗತಿಯ ನಡೆಯನ್ನು ಭಾರತ ತಾಳಬೇಕು.
  • ಅಗ್ಗದ ವಸ್ತುಗಳನ್ನು ಚೀನಾ ದೇಶ ಭಾರತದ ಮಾರುಕಟ್ಟೆಗೆ ಬಿಡಬಲ್ಲುದಾದರೆ, ಭಾರತ ಕೂಡ ಅದೇ ಕೆಲಸವನ್ನು ಚೀನಾ ಹಾಗೂ ಮಧ್ಯ ಪ್ರಾಚ್ಯದಲ್ಲಿ ಮಾಡಲು ಯಾಕೆ ಸಾಧ್ಯವಿಲ್ಲ ಹೇಳಿ? ಚೀನಾದವರು ನಮಗಿಂತ ಸಾಕಷ್ಟು ಮುನ್ನುಗ್ಗುತ್ತಿದ್ದಾರೆ. ಕಾರ್ಪೊರೇಟ್‌ ವಲಯವಾಗಲೀ, ಶೈಕ್ಷಣಿಕ ವಲಯವಾಗಲೀ- ಅಲ್ಲಿ ತಾಳಮೇಳ ಚೆನ್ನಾಗಿದೆ. ಬೌದ್ಧಿಕ ಸಮಾಜದ ನಿರ್ಮಾಣಕ್ಕೆ ತಕ್ಕಂಥ ಕಾರ್ಯತಂತ್ರ ಅವರು ರೂಪಿಸಿದ್ದಾರೆ.
(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X