ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪ ಆಸುಪಾಸಿನಲ್ಲಿ ಕಾಡುತ್ತಿರುವ ಮಂಗನ ಜ್ವರ

By Staff
|
Google Oneindia Kannada News

ಕೊಪ್ಪ : ಕಳೆದ ಬಾರಿ ಅನೇಕ ಮಂದಿಯನ್ನು ಬಲಿತೆಗೆದುಕೊಂಡಿದ್ದ ಮಂಗನ ಕಾಯಿಲೆ ಕೊಪ್ಪ ಆಸುಪಾಸಿನ ಗ್ರಾಮಗಳಲ್ಲಿ ಪುನಃ ಕಾಣಿಸಿಕೊಂಡಿದೆ. 13 ಮಂದಿ ಮಂಗನ ಜ್ವರ ಪೀಡಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕನೂರು, ವಗ್ಗಡೆ, ಸಾತುವನೆ, ದವನ ಹಾಗೂ ಕತ್ತಿಮನೆ ಗ್ರಾಮಗಳಲ್ಲಿ ಮಂಗನ ಜ್ವರ ಪೀಡಿತ ಪ್ರಕರಣಗಳು ದಾಖಲಾಗಿದ್ದು , ಕನೂರ್‌ನ ಪ್ರಾಥಮಿಕ ಚಿಕಿತ್ಸ ಘಟಕ ಮಂಗನ ಜ್ವರ ಚಿಕಿತ್ಸೆಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಿದೆ. ಆದರೂ, ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಸಿಗೆಗಳ ಕೊರತೆ ಉಲ್ಬಣಿಸಿದೆ.

ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ 9 ಮಂದಿ ಹಾಗೂ ಆಯುರ್ವೇದ ಆಸ್ಪತ್ರೆಯಲ್ಲಿ 4 ಮಂದಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದಾರೆ. ಮಂಗನ ಜ್ವರ ಪೀಡಿತರ 110 ರಕ್ತದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ.

ಕ್ಯಾಸನೂರು ಅರಣ್ಯದ ಆಸುಪಾಸಿನ ಪ್ರದೇಶಗಳಲ್ಲೂ ಮಂಗನ ಜ್ವರ ಮರುಕಳಿಸಿದೆ ಎನ್ನಲಾಗಿದೆ. ಜ್ವರ ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಗ್ರಾಮಸ್ಥರು- ರೋಗ ನಿರೋಧಕ ಚುಚ್ಚುಮದ್ದುಗಳನ್ನು ಹಾಕಿಸಿಕೊಳ್ಳಬೇಕೆಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X