ಇನ್ಫೋಸಿಸ್ಗೆ 1,300 ಕೋಟಿ ರು.ವಿಮೆ ಮಾರಿದ ಎಲ್ಐಸಿ
ಬೆಂಗಳೂರು : ಇನ್ಫೋಸಿಸ್ನ 13,000 ನೌಕರರು ಈಗ ಎಲ್ಐಸಿಯ ವಿಮಾ ಪಾಲಿಸಿದಾರರು. ಒಂದೇ ಏಟಿಗೆ 1,300 ಕೋಟಿ ರುಪಾಯಿ ಮೊತ್ತದ ಗುಂಪು ವಿಮೆ ಮಾಡಿಸುವ ಮೂಲಕ ಎಲ್ಐಸಿ ದಾಖಲೆ ಮಾಡಿದೆ.
ಈ ಮೊದಲು ಇಷ್ಟೊಂದು ದೊಡ್ಡ ಮೊತ್ತದ ಗುಂಪು ವಿಮೆಯನ್ನು ಎಲ್ಐಸಿ ಮಾಡಿಸಿರಲಿಲ್ಲ. ಯಾವುದೇ ದಲ್ಲಾಳಿ ಅಥವಾ ಅಭಿವೃದ್ಧಿ ಅಧಿಕಾರಿಗಳ ಮಧ್ಯಸ್ಥಿಕೆಯಿಲ್ಲದೆ ನೇರವಾಗಿ ಇನ್ಫೋಸಿಸ್ ಜೊತೆ ಮಾತಾಡಿ ಎಲ್ಐಸಿ ಈ ವ್ಯವಹಾರ ಕುದುರಿಸಿಕೊಂಡಿದೆ.
ಎಲ್ಐಸಿಯ ವಿಭಾಗೀಯ ಮ್ಯಾನೇಜರ್ ಆರ್.ಮುನಿರತ್ನಂ ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಹೊಸ ವಿಮೆಯಡಿ ಪ್ರತಿಯಾಬ್ಬ ನೌಕರನಿಗೆ 10 ಲಕ್ಷ ರುಪಾಯಿವರೆಗೆ ವಿಮಾ ಮೊತ್ತದ ಭದ್ರತೆಯಿದೆ. ಎಲ್ಐಸಿಯ ಕಾರ್ಪೊರೇಟ್ ಕಚೇರಿ ಗುಂಪು ವಿಮೆಯ ಕಂತನ್ನು ನಿರ್ಧರಿಸಿದೆ. ಕಂತು ಎಷ್ಟೆಂದು ಹೇಳಲು ಮುನಿರತ್ನಂ ನಿರಾಕರಿಸಿದರು.
ಇನ್ಫೋಸಿಸ್ ನಂತರ ಈಗ ವಿಪ್ರೋದ ಮೇಲೆ ಎಲ್ಐಸಿ ಕಣ್ಣಿಟ್ಟಿದೆ. ಈವರೆಗೆ ಕಾರ್ಪೊರೇಟ್ ಹಾಗೂ ನಾನ್ ಕಾರ್ಪೊರೇಟ್ ವಲಯಗಳಲ್ಲಿ ಈ ಮೊತ್ತದ ಗುಂಪು ವಿಮೆ ಆಗಿರಲೇ ಇಲ್ಲ.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ


Click it and Unblock the Notifications
