ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೆವ ಚಳಿಗೆ ಉತ್ತರ ಪ್ರದೇಶದಲ್ಲಿ ಸತ್ತವರು 150 !

By Staff
|
Google Oneindia Kannada News

ನವದೆಹಲಿ : ಕೊರೆವ ಚಳಿ ಮಾರುತ ಈ ಚಳಿಗಾಲದಲ್ಲಿ ಈವರೆಗೆ ಉತ್ತರ ಪ್ರದೇಶದ 150 ಮಂದಿಯ ಜೀವ ತೆಗೆದಿದೆ.

ಬೆಳಗ್ಗೆ 11 ಗಂಟೆಯಾದರೂ ನೂರು ಮೀಟರು ದೂರದ ವಸ್ತುಗಳು ಕಾಣದಷ್ಟು ದಟ್ಟವಾಗಿ ಹಿಮ ಆವರಿಸಿದ್ದು, ರಾಜ್ಯದ ರೈಲು, ರಸ್ತೆ ಮತ್ತು ವಾಯುಯಾನದಲ್ಲಿ ಏರುಪೇರಾಗಿದೆ. ರಾಜಧಾನಿ ದೆಹಲಿಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಯಾವ ವಿಮಾನವೂ ಹಾರುತ್ತಿಲ್ಲ.

ದೆಹಲಿ, ಹರಿಯಾಣ ಹಾಗೂ ಅಂಬಾಲ ಜನರ ಪಾಲಿಗೆ ಬೆಳಗು ಈಗ ಕರಾಳವಾಗಿದೆ. ಬೆಳಗ್ಗೆ ಇಲ್ಲಿನ ತಾಪಮಾನ 5 ರಿಂದ 5.5 ಡಿಗ್ರಿ ಸೆಲ್ಶಿಯಸ್‌ ಸುತ್ತ ಗಿರಕಿ ಹೊಡೆಯುತ್ತಿದೆ. ಕಳೆದ 24 ತಾಸಲ್ಲಿ ಉತ್ತರ ಪ್ರದೇಶದಲ್ಲಿ ಕೊರೆವ ಚಳಿಗೆ ಸತ್ತವರ ಸಂಖ್ಯೆ 11. ಇದೇ ರೀತಿಯ ಕೊರೆವ ಚಳಿ ಇನ್ನಷ್ಟು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X