‘ವೀರಪ್ಪನ್ ಗೆಳೆಯ ರಾಜೂಗೌಡರ ಮೇಲೆ ಕೇಸು ಜಡಿಯಿರಿ’
ಬೆಂಗಳೂರು : ವೀರಪ್ಪನ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿರುವ ಕಾರಣ ಆಹಾರ ಸಂಸ್ಕರಣಾ ಸಚಿವ ರಾಜೂಗೌಡರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸೋಮವಾರ ವಿಧಾನ ಸಭೆಯಲ್ಲಿ ಒತ್ತಾಯಿಸಲಾಯಿತು.
ವೀರಪ್ಪನ್ ಒತ್ತೆಯಾಳಾಗಿದ್ದಾಗ ಹತ್ಯೆಯಾದ ನಾಗಪ್ಪ ಪ್ರಕರಣದ ಚರ್ಚೆ ವೇಳೆ ಸಂಯುಕ್ತ ಜನತಾ ದಳ ನಾಯಕ ಬಿ.ಸೋಮಶೇಖರ್, ರಾಜೂಗೌಡರ ವಿರುದ್ಧ ಕಿಡಿ ಕಾರಿದರು. ಎರಡು ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ರಾಜೂಗೌಡರು ಗೆಲ್ಲಲು ವೀರಪ್ಪನ್ ಕಾರಣವಾಗಿದ್ದಾನೆ ಅನ್ನುವ ಮಾತಿದೆ. ಸಂಧಾನಕ್ಕೆ ಇವರು ಬರಬೇಕೆಂದು ಖುದ್ದು ವೀರಪ್ಪನ್ ಕೇಳಿದ್ದ. ಹಿಂದೆ ಗ್ರಾನೈಟ್ ಮಾಲೀಕರೊಬ್ಬರ ಮಗನನ್ನು ವೀರಪ್ಪನ್ ಅಪಹರಿಸಿದ್ದ. ಆತನ ಬಿಡುಗಡೆಯಲ್ಲಿ ರಾಜೂಗೌಡರೇ ಪ್ರಮುಖ ಪಾತ್ರವಹಿಸಿದ್ದರು ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ರಾಜೂಗೌಡರ ವಿರುದ್ಧ ಕೇಸು ಜಡಿಯಬೇಕೆಂದು ಸೋಮಶೇಖರ್ ಸದನದಲ್ಲಿ ಆಗ್ರಹಿಸಿದರು.
ಸೋಮಶೇಖರ್ ಆರೋಪಕ್ಕೆ ಕೆಂಡಮಂಡಲರಾದ ರಾಜೂಗೌಡ, ಎಲ್ಲಕ್ಕೂ ಸಾಕ್ಷ್ಯ ಒದಗಿಸಿ ಎಂದು ಸವಾಲು ಹಾಕಿದರು. ಕಾಡಿಗೆ ಹೋಗಿ ವೀರಪ್ಪನ್ ಜೊತೆ ಮಾತಾಡಿದ್ದು ನಿಮ್ಮ ಸಂಯುಕ್ತ ಜನತಾ ದಳದವರೇ ಆದ ಪೊನ್ನಾಚಿ ಮಹದೇವ ಸ್ವಾಮಿ. ಅವರ ವಿಷಯ ಮಾತಾಡಿ ಎಂದು ಕೆಣಕಿದರು.
ಇದಕ್ಕೆ ಉತ್ತರಿಸಿದ ಸೋಮಶೇಖರ್, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಗೃಹಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿಯೇ ಪೊನ್ನಾಚಿ ಕಾಡಿಗೆ ಹೋದದ್ದು ಎಂದರು.
ನಾಗಪ್ಪನವರ ಬಿಡುಗಡೆ ವಿಚಾರದಲ್ಲಿ ನಿದ್ದೆ ಮಾಡಿದ ಸರ್ಕಾರ, ಏನೂ ಮಾಡದಿರುವುದೇ ದೊಡ್ಡ ಕಾರ್ಯತಂತ್ರ ಎಂದು ಭಾವಿಸಿತು. ವೀರಪ್ಪನ್ ಒತ್ತೆಯಿಂದ ನಟ ರಾಜ್‌ಕುಮಾರ್ ಬಿಡುಗಡೆಯಾದ ನಂತರ ವೀರಪ್ಪನ್ ಹಿಡಿಯಲು ಎಸ್‌ಟಿಫ್ ಏನೇನೂ ಮಾಡಲಿಲ್ಲ. ಬದಲಿಗೆ ತಮಿಳು ರಾಷ್ಟ್ರೀಯ ಚಳವಳಿ ನಾಯಕ ಪಿ.ನೆಡುಮಾರನ್ ಮತ್ತು ನಕ್ಕೀರನ್ ವರದಿಗಾರ ಶಿವಸುಬ್ರಮಣ್ಯನ್‌ನನ್ನು ಬಂಧಿಸಿತು ಎಂದು ಸೋಮಶೇಖರ್ ಕಟಕಿಯಾಡಿದರು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications