ನಾಗಪ್ಪ ಹತ್ಯೆ ಹಿಂದೆ ಏನೈತಿ : ‘ಬಲಿ’ ಪುಸ್ತಕ ಬಂದೈತಿ !
ಬೆಂಗಳೂರು : ಈಗ ರಹಸ್ಯ ಜಾಹೀರು ಮಾಡುವ ಪುಸ್ತಕಗಳಿಗೆ ಬಜಾರಲ್ಲಿ ಜೋರು ವ್ಯಾಪಾರ. ದಿನಕರ್ ಬರೆದ ‘ವೀರಪ್ಪನ್ಸ್ ಪ್ರೆೃಸ್ ಕ್ಯಾಚ್ : ರಾಜ್‌ಕುಮಾರ್’ ಇದಕ್ಕೆ ಜ್ವಲಂತ ನಿದರ್ಶನ. ಇದೀಗ ನಾಗಪ್ಪ ಹತ್ಯೆಯ ಪಾಳಿ ವಿಧಾನಮಂಡಲದ ಉಭಯ ಸದನಗಳಲ್ಲಿ ನಾಗಪ್ಪ ಹತ್ಯೆ ಕುರಿತು ರಾಜಕಾರಣಿಗಳು ರಾಡಿ ಎರಚಾಡುತ್ತಿರುವಾಗಲೇ, ಸೋಮವಾರ (ಡಿ.30) ಪ್ರೆಸ್‌ಕ್ಲಬ್ಬಿನಲ್ಲಿ ‘ಬಲಿ’ ಎಂಬ ಪುಸ್ತಕ ಬಿಡುಗಡೆಯಾಯಿತು. ನಾಗಪ್ಪ ಹತ್ಯೆ ಹಿಂದಿನ ಅನೇಕ ನಿಗೂಢಗಳನ್ನು ಒಳಗೊಂಡಿದೆ ಎನ್ನಲಾದ ಈ ಪುಸ್ತಕದ ಕರ್ತೃ ರವೀಂದ್ರ ಜೋಷಿ. ಪುಸ್ತಕ ಬಿಡುಗಡೆ ಮಾಡಿದ್ದು - ಸಂಯುಕ್ತ ಜನತಾ ದಳದ ನಾಯಕ ಹಾಗೂ ವೀರಪ್ಪನ್ ಜೊತೆ ಮುಖಾಮುಖಿಯಾಗಿ ಬಂದಿರುವ ಪೊನ್ನಾಚಿ ಮಹದೇವ ಸ್ವಾಮಿ.
ಪುಸ್ತಕ ಬಿಡುಗಡೆಯ ನಂತರ ವೀರಪ್ಪನ್ ಬಳಿಗೆ ತಮ್ಮ ಎರಡು ಯಾತ್ರೆಗಳ ನೆನಪುಗಳನ್ನು ಪೊನ್ನಾಚಿ ಮೆಲುಕು ಹಾಕಿದರು...
‘ಪರಿಮಳಾ ನಾಗಪ್ಪ ಅವರಿಗೆ ನಾನು ಕಾಡಿಗೆ ಹೋಗಿ, ವೀರಪ್ಪನ್ ಕಾಣುವ ವಿಷಯ ಹೇಳಿದಾಗ, ಬೇಡ ಎಂದರು. ಅವರಿಗೆ ಭಯವಿತ್ತು. ನನ್ನ ಹೆಂಡತಿ ಅವರ ಮನವೊಲಿಸಿದ ಮೇಲೆ ಒಪ್ಪಿದರು. 30- 32 ದಿನ ಕಾಡಲ್ಲಿ ಅಲೆದ ಮೇಲೆ ವೀರಪ್ಪನ್ ಸಿಕ್ಕಿದ. ಎಷ್ಟು ಅಂಗಲಾಚಿದರೂ, ಮಣಿ ಬರೋವರೆಗೆ ನಾಗಪ್ಪನವರನ್ನ ಬಿಡಲ್ಲ ಎಂದು ವೀರಪ್ಪನ್ ಪಟ್ಟು ಹಿಡಿದ. ಇನ್ನೊಮ್ಮೆ ಭೇಟಿಯಾದಾಗಲೂ ಇದನ್ನೇ ಹೇಳಿದ. ಆದರೆ, ಎರಡನೇ ಬಾರಿ ನಾಗಪ್ಪನವರನ್ನು ತೋರಿಸಲಿಲ್ಲ. ಮೊದಲು ಭೇಟಿಯಾದಾಗ ನಾಗಪ್ಪನವರು ತಮ್ಮನ್ನು ಹೇಗಾದರೂ ಬಿಡಿಸಿಕೊಂಡು ಹೋಗಿ ಅಂತ ಅಂಗಲಾಚಲಿಲ್ಲ. ಬದಲಿಗೆ, ಮನೆಯವರ ಕುಶಲ ವಿಚಾರಿಸಿದರು’.
‘ಕ್ಷಮೆ ಪತ್ರದೊಡನೆ ಸುತ್ತೂರು ಶ್ರೀ, ಜಾರ್ಜ್ ಫರ್ನಾಂಡಿಸ್, ಕೃಷ್ಣ ಬರಲಿ ; ನಾನು ಶರಣು’ !
‘ರಾಷ್ಟ್ರಪತಿಯಿಂದ ನೀವು ಕ್ಷಮಾದಾನ ಪತ್ರ ತನ್ನಿ. ಜೊತೆಯಲ್ಲಿ ಸುತ್ತೂರು ಶ್ರೀಗಳು, ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಹಾಗೂ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಕರೆತನ್ನಿ. ನಾನು ಶರಣಾಗುತ್ತನೆ ಅಂತ ವೀರಪ್ಪನ್ ಹೇಳಿದ. ಸಂವಿಧಾನದಲ್ಲಿ ಇದು ಅಷ್ಟು ಸುಲಭವಲ್ಲ ಅಂತ ಪರಿಪರಿಯಾಗಿ ಹೇಳಿದರೂ ಅದನ್ನು ವೀರಪ್ಪನ್ ಅರ್ಥ ಮಾಡಿಕೊಳ್ಳಲಿಲ್ಲ. ಆಮೇಲೆ ನಾಗಪ್ಪನವರ ಹತ್ಯೆಯಾಯಿತು. ಅವರನ್ನು ಬಿಡಿಸಿ ತರಲಾಗಲಿಲ್ಲವೆಂಬ ವಿಷಾದ ನನ್ನನ್ನು ಈಗಲೂ ಕಾಡುತ್ತಿದೆ’.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಂಯುಕ್ತ ಜನತಾ ದಳದ ವಕ್ತಾರ ಶ್ರೀಪತಿ ರಾವ್ ಹಾಜರಿದ್ದರು. ಈ ಪುಸ್ತಕದಲ್ಲಿ ಏನೇನಿದೆ ಅನ್ನುವ ವಿವರ ಕೇಳಿದಾಗ, ಓದಿ ನೋಡಿ ಎಂದಷ್ಟೇ ಹೇಳಿದರು. ಸದನದಲ್ಲಿ ನಾಗಪ್ಪ ಹತ್ಯೆ ಕುರಿತ ಚರ್ಚೆಗೆ ಈ ಪುಸ್ತಕದಿಂದ ಹೊಸ ದಿಕ್ಕು ದೊರೆಯುವುದೇ?
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications