ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳ ವೀರೇಂದ್ರಹೆಗ್ಗಡೆ ದೃಷ್ಟಿಯಲ್ಲಿ ಕಲೆ-ವಾಸ್ತುಶಿಲ್ಪ

By Staff
|
Google Oneindia Kannada News

ಭಾರತ ಆರ್ಥಿಕವಾಗಿ ಬಡರಾಷ್ಟ್ರವಾದರೂ ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಶ್ರೀಮಂತಿಕೆ ಪಡೆದಿದೆ. ಭೂಕಂಪ, ಮಳೆ, ಗಾಳಿಯಂಥ ಪ್ರಕೃತಿ ಪ್ರಕೋಪಗಳನ್ನು ಎದುರಿಸಿಯೂ ಈವತ್ತಿಗೂ ಗಟ್ಟಿಯಾಗಿ ನಿಂತಿರುವ ಸ್ಮಾರಕಗಳು ವಾಸ್ತುಶಿಲ್ಪ ಕಲೆಯಲ್ಲಿ ಭಾರತೀಯರ ಪಾರಂಪರಿಕ ಜ್ಞಾನಕ್ಕೆ ನಿದರ್ಶನವಾಗಿವೆ ಎಂದವರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ. ಅವರು ಮೊನ್ನೆ ಮಾತಿಗೆ ಸಿಕ್ಕಾಗ-

ಹಿಂದಿನ ಕಾಲದಲ್ಲಿ ಚಾಲ್ತಿಯಲ್ಲಿದ್ದ ವಾಸ್ತುಕಲೆಗೂ, ಈ ದಿನಗಳ ವಾಸ್ತುಕಲೆಗೂ ವ್ಯತ್ಯಾಸವೇನು ?
ಪ್ರಾಚೀನ ವಾಸ್ತುಶಿಲ್ಪ ಕಲೆಯಲ್ಲಿ ಪರಿಸರ ಸ್ನೇಹಿ ಕಲೆ ಇತ್ತು. ಆದರೆ ಈಗ ಕೇವಲ ಸೌಂದರ್ಯಕ್ಕೆ ಮಾತ್ರ ಒತ್ತು ನೀಡುವ ವಾಸ್ತುಶಿಲ್ಪ ಶೈಲಿಯಷ್ಟೇ ಇದೆ. ಇದರಿಂದ ಯಾವ ಪ್ರಯೋಜನವೂ ಇಲ್ಲ.

ವಾಸ್ತುಶಿಲ್ಪದಲ್ಲಿ ಸೃಜನಶೀಲತೆ ತರುವುದು ಹೇಗೆ?
ಆಧ್ಯಾತ್ಮಿಕ ಒಳನೋಟ ಹಾಗೂ ಪ್ರಕೃತಿಯ ಜತೆಗಿನ ಒಡನಾಟದಿಂದ ಮಾತ್ರವೇ ವಾಸ್ತುಶಿಲ್ಪ ಶೈಲಿಯಲ್ಲಿ ಸೃಜನಶೀಲತೆ ತರಬಹುದು. ನಮ್ಮ ಈ ದಿನದ ವಾಸ್ತುಶಿಲ್ಪಿಗಳು ಈ ನಿಷ್ಠುರ ಸತ್ಯವನ್ನು ಅರ್ಥೈಸಿಕೊಳ್ಳಬೇಕು.

ಪುರಾತನ ದೇಗುಲಗಳ ಜೀರ್ಣೋದ್ಧಾರ ಸಂದರ್ಭದಲ್ಲಿ ಈಗ ಆಧುನಿಕ ಸಲಕರಣೆ ಬಳಕೆ ಹೆಚ್ಚುತ್ತಿದೆ. ಆ ಕುರಿತು ನೀವು ಏನಂತೀರಿ ?
ಸ್ಮಾರಕಗಳ ಜೀರ್ಣೋದ್ಧಾರ ಸಂದರ್ಭದಲ್ಲಿ ಆಧುನಿಕ ಸಲಕರಣೆಗಳ ಬಳಕೆ ಖಂಡಿತ ತಪ್ಪು. ಈ ರೀತಿ ಮಾಡುವುದರಿಂದ ಜೀರ್ಣೋದ್ಧಾರದ ಮೂಲ ಆಶಯ ಈಡೇರಿದಂತಾಗುವುದಿಲ್ಲ.

ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‌ನ ಕಾರ್ಯ ಚಟುವಟಿಕೆ ಬಗೆಗೆ ಹೇಳ್ತೀರಾ?
ಧರ್ಮೋತ್ಥಾನ ಟ್ರಸ್ಟ್‌ , ಭಾರತೀಯ ಪ್ರಾಚ್ಯವಸ್ತು ಇಲಾಖೆ ನೆರವಿನೊಂದಿಗೆ ವಿವಿಧ ಕಡೆಗಳಲ್ಲಿ 38 ದೇವಾಲಯಗಳ ಜೀರ್ಣೋದ್ಧಾರ ಮಾಡಿದೆ. ಇನ್ನೂ 18 ದೇವಾಲಯಗಳ ಜೀರ್ಣೋದ್ಧಾರಕ್ಕೆ ಪ್ರಯತ್ನಿಸಲಾಗುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X