ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿಧೋದ್ದೇಶ ಸಾಲು ಉಪಗ್ರಹ ತಯಾರಿಯಲ್ಲಿ ಇಸ್ರೋ

By Staff
|
Google Oneindia Kannada News

ಬೆಂಗಳೂರು : ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿತ ಇನ್ಸಾಟ್‌-3ಎ ಉಪಗ್ರಹವನ್ನು 2003 ನೇ ಇಸವಿಯ ಫೆಬ್ರವರಿ ತಿಂಗಳಲ್ಲಿ ಫ್ರೆಂಚ್‌ ಗಯಾನ ಉಡ್ಡಯನಾ ಕೇಂದ್ರದಿಂದ ಉಡಾಯಿಸಲು ಉದ್ದೇಶಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಕಸ್ತೂರಿ ರಂಗನ್‌ ತಿಳಿಸಿದ್ದಾರೆ.

ಫೆಬ್ರವರಿ ಮಧ್ಯಭಾಗದಲ್ಲಿ ಇನ್ಸಾಟ್‌-3ಎ ಉಪಗ್ರಹವನ್ನು ಉಡಾಯಿಸಲು ಯೋಜಿಸಲಾಗಿದ್ದು, ನಾವು ಉಪಗ್ರಹದೊಂದಿಗೆ ಸಿದ್ಧರಾಗಿದ್ದೇವೆ ಎಂದು ಮಂಗಳವಾರ (ಡಿ.24) ಸುದ್ದಿಗಾರರಿಗೆ ಕಸ್ತೂರಿರಂಗನ್‌ ತಿಳಿಸಿದರು.

ಸಿ-ಬ್ಯಾಂಡ್‌ನಲ್ಲಿ 24 ಟ್ರಾನ್ಸ್‌ಪಾಂಡರ್‌ಗಳನ್ನು ಇನ್ಸಾಟ್‌-3ಎ ಹೊಂದಿದೆ. ಇನ್ಸಾಟ್‌-3ಇ ತಯಾರಿಕಾ ಪ್ರಕ್ರಿಯೆ ಕೂಡ ಚಾಲ್ತಿಯಲ್ಲಿದ್ದು, 2003 ರ ಮಧ್ಯಭಾಗದ ವೇಳೆಗೆ ಅದರ ಉಡ್ಡಯನ ಸಾಧ್ಯವಾಗಬಹುದು. ಮಾರ್ಚ್‌ ವೇಳೆಗೆ ಜಿಎಸ್‌ಎಲ್‌ವಿಯ ಎರಡನೇ ಟೆಸ್ಟ್‌ ಫ್ಲೈಟ್‌ (ಡಿ2) ನಡೆಸಲು ಉದ್ದೇಶಿಸಲಾಗಿದೆ.

ಶೈಕ್ಷಣಿಕ ಉಪಗ್ರಹ : 2000 ಕೇಜಿ ಉಪಗ್ರಹದ ತಯಾರಿಯನ್ನು ಇಸ್ರೋ ಈಗಷ್ಟೇ ಆರಂಭಿಸಿದೆ. ಶಿಕ್ಷಣ, ಸಾಕ್ಷರತೆ, ತರಬೇತಿ ಮುಂತಾದ ಕ್ಷೇತ್ರಗಳಲ್ಲಿ ಈ ಉಪಗ್ರಹ ಮಹತ್ವದ ಪಾತ್ರ ವಹಿಸಲಿದೆ. ಇಡೀ ವಿಶ್ವದಲ್ಲೇ ಇದೊಂದು ಅಪರೂಪದ ಯೋಜನೆಯಾಗಿದೆ ಎಂದು ಕಸ್ತೂರಿ ರಂಗನ್‌ ಬಣ್ಣಿಸಿದರು.

ಭಾರತ ಹಾಗೂ ರಷ್ಯಾ ಜಂಟಿಯಾಗಿ ಚಂದ್ರ ಉಪಗ್ರಹ ಯಾತ್ರೆಯನ್ನು ಹಮ್ಮಿಕೊಂಡಿರುವ ಮಾಧ್ಯಮ ಸುದ್ದಿಗಳನ್ನು ಕಸ್ತೂರಿರಂಗನ್‌ ಸ್ಪಷ್ಟವಾಗಿ ನಿರಾಕರಿಸಿದರು. ಪ್ರಸ್ತುತ ಇಂಥ ಯಾವ ಚಟುವಟಿಕೆಯೂ ನಡೆದಿಲ್ಲ . ಈ ಕುರಿತು ರಷ್ಯಾದೊಂದಿಗೆ ಯಾವುದೇ ಮಾತುಕತೆ ನಡೆದಿರುವುದು ಕೂಡ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಅವರು ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X