ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂತು ‘ದಿ ವಿಜಯ್‌ ಟೈಮ್ಸ್‌’, ಒಂದೂವರೆ ರು.ಗೊಂದು!

By Staff
|
Google Oneindia Kannada News

ಬೆಂಗಳೂರು : ರುಪಾಯಿಗೊಂದರಂತೆ ‘ವಿಜಯ ಕರ್ನಾಟಕ’ ಪತ್ರಿಕೆಯನ್ನು ಓದುಗರ ಕೈಗಿತ್ತು, ಪ್ರಸಾರ ಸಂಖ್ಯೆಯ ಗ್ರಾಫನ್ನು ಗಗನದತ್ತ ಮುಖ ಮಾಡುವಂತೆ ನೋಡಿಕೊಂಡ ಸಂಸದ ವಿಜಯ ಸಂಕೇಶ್ವರ ಈಗ ಇಂಗ್ಲಿಷ್‌ ಪತ್ರಿಕೆಯಾಂದರ ಮಾಲೀಕರೂ ಹೌದು.

ಇವತ್ತಿನಿಂದ (ಡಿ.23) ಮಾರುಕಟ್ಟೆಗೆ ಕಾಲಿರಿಸಿರುವ ‘ದಿ ವಿಜಯ್‌ ಟೈಮ್ಸ್‌’ ಇಂಗ್ಲಿಷ್‌ ದೈನಿಕ ಕೂಡ ಪತ್ರಿಕಾ ಲೋಕದಲ್ಲಿ ದರ ಸಮರಕ್ಕೆ ಚಾಲನೆ ಕೊಡಲಿದೆ ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ.

‘ದಿ ವಿಜಯ್‌ ಟೈಮ್ಸ್‌’ ಬೆಲೆ ಒಂದೂವರೆ ರುಪಾಯಿ. ಇವತ್ತು ಮಾರುಕಟ್ಟೆಯಲ್ಲಿ ದಿ ಟೈಮ್ಸ್‌ ಆಫ್‌ ಇಂಡಿಯಾ, ಡೆಕ್ಕನ್‌ ಹೆರಾಲ್ಡ್‌, ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌, ದಿ ಹಿಂದೂ, ಏಷ್ಯನ್‌ ಏಜ್‌- ಮೊದಲಾದ ಪತ್ರಿಕೆಗಳ ಬೆಲೆ 2.50ಯಿಂದ 3 ರುಪಾಯಿವರೆಗಿದೆ. ಪುರವಣಿ ಸಹಿತ ಪ್ರತಿಗಳಿಗೆ 4.50ಯಿಂದ 5 ರುಪಾಯಿಯಿದೆ. ಆದರೆ, ‘ದಿ ವಿಜಯ್‌ ಟೈಮ್ಸ್‌’ ಪುರವಣಿ ಸಹಿತ ಪ್ರತಿಯನ್ನು 3 ರುಪಾಯಿಗೇ ಬಿಕರಿ ಮಾಡಲಿದೆ.

ಸದ್ಯಕ್ಕೆ 60 ಸಾವಿರ ಪ್ರತಿಗಳ ಆರ್ಡರನ್ನು ಮುಂದಿಟ್ಟುಕೊಂಡು ಇಂಗ್ಲಿಷ್‌ ಪತ್ರಿಕಾ ಲೋಕಕ್ಕೆ ಲಗ್ಗೆಯಿಟ್ಟಿರುವ ‘ದಿ ವಿಜಯ್‌ ಟೈಮ್ಸ್‌’ಗೆ ತನ್ನ ಬಳಗದ ‘ವಿಜಯ ಕರ್ನಾಟಕ’ದಷ್ಟೇ ಸಂಚಲನೆ ಹುಟ್ಟಿಸುವ ವಿಶ್ವಾಸವಿದೆ. ಇನ್ನೊಂದು ವರ್ಷದಲ್ಲಿ ಪ್ರಸಾರ ಸಂಖ್ಯೆಯನ್ನು 2 ಲಕ್ಷಕ್ಕೇರಿಸಿಕೊಳ್ಳುವ ಉಮೇದಿ ನಮ್ಮದು ಎನ್ನುತ್ತಾರೆ ಕನ್ನಡ ಹಾಗೂ ಇಂಗ್ಲಿಷ್‌- ಎರಡೂ ಪತ್ರಿಕೆಗಳ ಕಾರ್ಯನಿರ್ವಾಹಕ ಸಂಪಾದಕರಾಗಿರುವ ವಿಶ್ವೇಶ್ವರ ಭಟ್‌.

ವಿಜಯ ಕರ್ನಾಟಕದ ಯಶಸ್ಸು ಕೇವಲ ಮಾರುಕಟ್ಟೆಯ ತಂತ್ರದಿಂದ ಸಾಧಿಸಿದ್ದಷ್ಟೇ ಅಲ್ಲ, ಪತ್ರಿಕೆಯ ತಿರುಳು- ಹುರುಳಿನ ಕಾಣಿಕೆಯೇ ಇದರಲ್ಲಿ ಹೆಚ್ಚು ಎಂಬುದು ವಿಶ್ವೇಶ್ವರ ಭಟ್ಟರ ಅಭಿಪ್ರಾಯ.

ಮೊದಲು ಬೆಂಗಳೂರಲ್ಲಿ ನೆಲೆನಿಂತು, ಆಮೇಲೆ ಮುಂಬಯಿ ಹಾಗೂ ಚೆನ್ನೈ ಪತ್ರಿಕಾ ಮಾರುಕಟ್ಟೆಗೂ ಲಗ್ಗೆ ಇಡುವುದು ‘ದಿ ವಿಜಯ್‌ ಟೈಮ್ಸ್‌’ ಕನಸು.

ದಶಕದ ಹಿಂದೆ ಇದೇ ಪರಿಯ ದರ ಸಮರದಿಂದ ಬೆಂಗಳೂರಲ್ಲಿ ನೆಲೆ ನಿಂತಿದ್ದ ‘ಡೆಕ್ಕನ್‌ ಹೆರಾಲ್ಡ್‌’ನಂಥಾ ಪತ್ರಿಕೆಯ ಬುಡವನ್ನೇ ಅಲ್ಲಾಡಿಸಿದ್ದು ‘ದಿ ಟೈಮ್ಸ್‌ ಆಫ್‌ ಇಂಡಿಯಾ’. ಏಜೆಂಟರಿಗೆ ಇಂತಿಷ್ಟು ಪ್ರತಿಗಳನ್ನು ಮಾರಿದರೆ ಫ್ರಿಡ್ಜು, ಇನ್ನಷ್ಟು ಮಾರಿದರೆ ಬಣ್ಣದ ಟಿವಿ ಎಂದೆಲ್ಲಾ ಆಮಿಷ ತೋರಿ, ತನ್ನ ಮಾರುಕಟ್ಟೆಯ ತಂತ್ರದಿಂದ ಮೇಲಕ್ಕೆ ಬಂದ ಟೈಮ್ಸ್‌ ಇವತ್ತು ಬೆಂಗಳೂರಿನ ನಂಬರ್‌ ಒನ್‌ ಇಂಗ್ಲಿಷ್‌ ದೈನಿಕ. ಇದೇ ತಂತ್ರ ಮುಂದಿಟ್ಟುಕೊಂಡು ಹುಟ್ಟಿರುವ ‘ದಿ ವಿಜಯ್‌ ಟೈಮ್ಸ್‌’ ಸವಾಲಿಗೆ ಟೈಮ್ಸ್‌ ಹೇಗೆ ಜವಾಬು ಕೊಡುತ್ತದೋ ನೋಡಬೇಕು.

ಒಂದು ವೇಳೆ ದರ ಸಮರದ ಭರದಲ್ಲಿ ಪತ್ರಿಕೆಗಳ ಬೆಲೆಗಳು ತಗ್ಗಿದರೆ, ಓದುಗರಿಗೆ ಅದುವೇ ಬೋನಸ್ಸು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X