ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಕನ್ಸಲ್ಟೆನ್ಸಿಗೆ 4,000 ಎಂಜಿನಿಯರುಗಳು ಬೇಕಾಗಿದ್ದಾರೆ

By Staff
|
Google Oneindia Kannada News

ಬೆಂಗಳೂರು : ಸದ್ಯಕ್ಕೆ 21 ಸಾವಿರ ಸಿಬ್ಬಂದಿಯಿರುವ ಜಾಗತಿಕ ಸಾಫ್ಟ್‌ವೇರ್‌ ಹಾಗೂ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಇನ್ನೊಂದು ವರ್ಷದಲ್ಲಿ 4 ಸಾವಿರ ಸಾಫ್ಟ್‌ವೇರ್‌ ಪರಿಣತರಿಗೆ ಕೆಲಸ ಕೊಡಲಿದೆ.

ಕಂಪನಿಯ ಉಪಾಧ್ಯಕ್ಷ ಹಾಗೂ ಬ್ಯಾಂಕಿಂಗ್‌ ಪ್ರಯೋಗಗಳ ವಿಭಾಗದ ಮುಖ್ಯಸ್ಥ ಎನ್‌.ಜಿ.ಸುಬ್ರಮಣಿಯಮ್‌ ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವೆ ಹಾಗೂ ವಿಮಾ ವಲಯಕ್ಕೆ (ಬಿಎಫ್‌ಎಸ್‌ಐ) ಸಂಬಂಧಿಸಿದ ಸೇವೆ ಒದಗಿಸಲು ಬೆಂಗಳೂರಲ್ಲಿ ಸದ್ಯಕ್ಕೆ 1800 ನೌಕರರು ಕೆಲಸ ಮಾಡುತ್ತಿದ್ದಾರೆ. ಉಳಿದ ಸೇವಾ ವಲಯಗಳಲ್ಲಿ ಕೇವಲ 500 ನೌಕರರಿದ್ದಾರೆ. ಮುಂದೆ ಈ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು ಎಂದರು.

ಟಾಟಾ ಕನ್ಸಲ್ಟೆನ್ಸಿ : ಟಿಪ್ಪಣಿ
ಅಭಿವೃದ್ದಿ ಹೊಂದುತ್ತಿರುವ ಸಲಹಾ ಕಂಪನಿಗಳ ಯಾದಿಯಲ್ಲಿ 2001ನೇ ಇಸವಿಯಲ್ಲಿ ಎರಡನೇ ಸ್ಥಾನದಲ್ಲಿರುವ ಟಾಟಾ ಕನ್ಸಲ್ಟೆನ್ಸಿ, 2001- 02ನೇ ವಿತ್ತ ವರ್ಷದಲ್ಲಿ 880 ದಶಲಕ್ಷ ಅಮೆರಿಕನ್‌ ಡಾಲರ್‌ ಆದಾಯ ಗಳಿಸಿದೆ. ಬ್ಯಾಂಕಿಂಗ್‌ ಸೇವೆಗಳಿಗೆ ಹೆಸರುವಾಸಿಯಾಗಿರುವ ಕಂಪನಿ ಸದ್ಯದಲ್ಲೇ ಚಿಲಿಯಲ್ಲಿ ಒಂದು ಕಚೇರಿ ತೆರೆಯಲು ನಿರ್ಧರಿಸಿದೆ.

ತನ್ನ ಆದಾಯದ ಪ್ರತಿಶತ 40ನ್ನು ಬಿಎಫ್‌ಎಸ್‌ಐ ಸಂಬಂಧಿ ಸೇವೆಗಳಿಂದಲೇ ಗಳಿಸುತ್ತಿರುವ ಕಂಪನಿ, ಎರಡರಿಂದ ಮೂರು ವರ್ಷಗಳ ಅವಧಿಯಲ್ಲಿ ಆದಾಯವನ್ನು ದುಪ್ಪಟ್ಟು ಮಾಡಿಕೊಳ್ಳುತ್ತಾ ಬಂದಿದೆ.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X