ತಣ್ಣಗೆ ಶುರುವಾದ ಅಧಿವೇಶನದಲ್ಲಿ ನಾಗಪ್ಪ ಮಗ, ಅಳಿಯ
ಬೆಂಗಳೂರು : ನಾಗಪ್ಪ ಹತ್ಯೆ ಕುರಿತ ವಿಧಾನಮಂಡಲದ ವಿಶೇಷ ಅಧಿವೇಶನ, ಮೃತ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಮೂಲಕ ಸೋಮವಾರ ಶುರುವಾಯಿತು.
ನಾಗಪ್ಪನವರ ಮಗ ಪ್ರೀತನ್ ಹಾಗೂ ಅಳಿಯ ಕಿರಣ್ ಪಟೇಲ್ ವಿಧಾನಸಭೆಯ ಜನರ ಗ್ಯಾಲರಿಯಲ್ಲಿ ಕೂತು, ಶ್ರದ್ಧಾಂಜಲಿಯನ್ನು ನೋಡಿದರು. ಶ್ರದ್ಧಾಂಜಲಿ ಸಲ್ಲಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತಾಡಿದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಹಲವು ವರ್ಷಗಳಿಂದ ಪೀಡೆ ಕೊಡುತ್ತಿರುವ ವೀರಪ್ಪನ್‌ಗೆ ಪೂರ್ಣವಿರಾಮ ಹಾಕಲೇಬೇಕು. ಆತ ತುಂಬಲಾರದ ನಷ್ಟ ಉಂಟುಮಾಡಿದ್ದಾನೆ. ಇದಕ್ಕಾಗಿ ಸರ್ಕಾರ ಬದ್ಧವಾಗಿದ್ದು, ಶತಾಯ ಗತಾಯ ಯತ್ನಿಸುತ್ತಿದೆ ಎಂದರು.
ವೀರಪ್ಪನ್‌ನನ್ನು ಮಟ್ಟ ಹಾಕಲು ಮುಂದಿನ ದಿನಗಳಲ್ಲಿ ದಿಟ್ಟ ಹೆಜ್ಜೆಗಳನ್ನು ಇಡಬೇಕಿದೆ. ನಾಗಪ್ಪನವರ ಹತ್ಯೆ ಕುರಿತಂತೆ ಸಭೆಯ ಸದಸ್ಯರು ಮಂಗಳವಾರದಿಂದ ಎರಡು ದಿನಗಳ ಕಾಲ ಮುಕ್ತವಾಗಿ ಚರ್ಚಿಸಬೇಕು ಎಂದು ಕೃಷ್ಣ ಕರೆ ಕೊಟ್ಟರು. ನಾಗಪ್ಪನವರಿಗಷ್ಟೇ ಅಲ್ಲದೆ, ಕಾಚಿಗೋಡ- ಬೆಂಗಳೂರು ಎಕ್ಸ್‌ಪ್ರೆಸ್ ರೈಲು ದುರಂತದಲ್ಲಿ ಸತ್ತ 20 ಮಂದಿಗೆ ಹಾಗೂ ಈಚೆಗೆ ಸಾವಪ್ಪಿದ ಪ್ರಖ್ಯಾತ ನ್ಯಾಯವಾದಿ ನಾನಿ ಫಾಲ್ಕಿವಾಲ ಅವರಿಗೆ ವಿಧಾನಮಂಡಲದ ಉಭಯ ಸದನಗಳು ಶ್ರದ್ಧಾಂಜಲಿ ಸಲ್ಲಿಸಿದವು.
ಶ್ರದ್ಧಾಂಜಲಿ ನಂತರ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಮಂಗಳವಾರ ಹಾಗೂ ಬುಧವಾರ ಉಭಯ ಸದನಗಳಲ್ಲಿ ನಾಗಪ್ಪ ಹತ್ಯೆ ಕುರಿತಂತೆ ಬಿಸಿ ಬಿಸಿ ಚರ್ಚೆಗಳಾಗುವ ನಿರೀಕ್ಷೆಯಿದೆ.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications