ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಚಿಗುಡ ರೈಲು ಅಪಘಾತದಲ್ಲಿ ರಾಜ್ಯದ ಇಬ್ಬರ ಸಾವು

By Staff
|
Google Oneindia Kannada News

ಬೆಂಗಳೂರು : ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಕಾಚಿಗುಡ- ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಆಂಧ್ರಪ್ರದೇಶದ ಪೆಂಡೇಕಲ್‌- ಪಗಡಿರೈ ನಿಲ್ದಾಣಗಳ ನಡುವೆ ಹಳಿ ತಪ್ಪಿ ನಡೆದ ದುರ್ಘಟನೆಯಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದಾರೆ.

ದುರಂತಕ್ಕೆ ಬಲಿಯಾದ ರಾಜ್ಯದವರನ್ನು ಮೋಹನ್‌ ಕುಮಾರ್‌ (ಬೆಂಗಳೂರು) ಹಾಗೂ ವೆಂಕಟನಾರಾಯಣ ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ - ನಹಿದಾ, ಗುರುಪ್ರಸಾದ್‌ ರಾವ್‌(ಬೆಂಗಳೂರು), ರತಫ್‌ ಆಲಿ, ಸತೀಶ್‌ ಕುಮಾರ್‌, ರಾಯಮಲ್ಲು, ಪಿಳ್ಳಪ್ಪ (ಕೋಲಾರ), ಆದಿಯಪ್ಪ (ತುಮಕೂರು), ಕಾಲಿನಿ(ಬೀದರ್‌), ಚೆನ್ನಬಾಷಾ, ಹರಿಕೃಷ್ಣ (ಬೆಂಗಳೂರು), ಅಬ್ದುಲ್‌ ಮಥೀನ್‌, ಎಸ್‌. ವಿ. ಬಾಷಾ ಮತ್ತು ನಾರಾಯಣಮ್ಮ ( ಚಿಂತಾಮಣಿ) ಕರ್ನಾಟಕ್ಕೆ ಸೇರಿದವರು.

ಕೃಷ್ಣ ದಿಗ್ಭ್ರಮೆ : ರೈಲು ದುರಂತದ ಸುದ್ದಿ ಕೇಳಿ ತೀವ್ರ ಆಘಾತ ಹಾಗೂ ದುಃಖ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ , ಪರಿಹಾರ ಕಾರ್ಯಗಳಿಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ. ಅಪಘಾತದ ಸುದ್ದಿ ತಿಳಿದ ತಕ್ಷಣವೇ ದೆಹಲಿಯ ರೈಲ್ವೇ ವಿಚಾರಣಾ ಕೇಂದ್ರಕ್ಕೆ ಫೋನಾಯಿಸಿ ಯಾವುದೇ ನೆರವು ಬೇಕಿದ್ದಲ್ಲಿ ಸಂಪರ್ಕಿಸುವಂತೆ ಕೃಷ್ಣ ತಿಳಿಸಿದ್ದು, ಪರಿಹಾರ ಕಾರ್ಯಗಳಿಗೆ ತಕ್ಷಣವೇ ನೆರವಾಗುವಂತೆ ಸಣ್ಣ ಕೈಗಾರಿಕಾ ಸಚಿವ ರೋಷನ್‌ ಬೇಗ್‌ ಅವರಿಗೆ ಆದೇಶಿಸಿದ್ದಾರೆ.

ರೈಲು ಅಪಘಾತದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಐದು ಗಂಟೆಗೆ ಬೆಂಗಳೂರಿನಿಂದ ಕಾಚಿಗುಡಕ್ಕೆ ಹೊರಡಬೇಕಿದ್ದ ರೈಲು ರಾತ್ರಿ 10. 45ಕ್ಕೆ ಬೆಂಗಳೂರು ಬಿಡಲಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆ ತಿಳಿಸಿದೆ.

ಅಪಘಾತದ ಸುದ್ದಿಯಿಂದ ತತ್ತರಿಸಿರುವ ರೈಲು ಪ್ರಯಾಣಿಕರ ಸಂಬಂಧಿಗಳು ರೈಲ್ವೇ ವಿಚಾರಣಾ ಕಚೇರಿಗೆ ಧಾವಿಸಿದ್ದರಿಂದ ವಿಚಾರಣಾ ಕೇಂದ್ರದಲ್ಲಿ ಶನಿವಾರ ಬೆಳಗ್ಗೆ ವಿಪರೀತ ಕೋಲಾಹಲವುಂಟಾಗಿತ್ತು. ತಮ್ಮ ಸಂಬಂಧಿಗಳ ಕ್ಷೇಮದ ಬಗ್ಗೆ ತಿಳಿಯಲು ಕಾತರರಾಗಿದ್ದವರಿಗಾಗಿ ವಿಶೇಷ ವಿಚಾರಣಾ ಕೌಂಟರ್‌ನ್ನು ತೆರೆಯಲಾಗಿದೆ.

ಈ ನಡುವೆ ದುರಂತಕ್ಕೊಳಗಾಗಿರುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರ ಸಂಬಂಧಿಕರನ್ನು ಹೊತ್ತ ವಿಶೇಷ ರೈಲು ಇಂದು ಬೆಳಗ್ಗೆ ಬೆಂಗಳೂರಿನಿಂದ ದುರಂತ ನಡೆದ ಸ್ಥಳಕ್ಕೆ ತೆರಳಿದೆ. ರೈಲಿನಲ್ಲಿ ಸುಮಾರು 200 ಮಂದಿ ಪ್ರಯಾಣಿಕರು ಇದ್ದಾರೆ. ಸಂಜೆ ಹೊತ್ತಿಗೆ ವಿಶೇಷ ರೈಲು ಬೆಂಗಳೂರಿಗೆ ಮತ್ತೆ ವಾಪಾಸು ಬರಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Helpline:
Bangalore: The Railway authorities have setup helplines for information on the Kachiguda Express mishap in Anantapur district of Hyderabad. The numbers are:
Bangalore: 080 2203267, 080 2874544, 080 2876288.
Hyderabad: 040 27788120, 040 27704056, 040 27786950, 040 27820326, 040 27568624 and 040 27552817

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X