ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಲಿಯ ಮೇಲೆ ಭಾರತೀಯ ರೈಲ್ವೆ ಇತಿಹಾಸ ದರ್ಶನ

By Staff
|
Google Oneindia Kannada News

*ನಾಡಿಗೇರ್‌ ಚೇತನ್‌

ಮಾನವ ಮತ್ತು ಸರಕು ಸಾಗಣೆಗಾಗಿ ನಿರ್ಮಾಣಗೊಂಡ ರೈಲ್ವೆ, ಇಂದು ಬೃಹತ್‌ ಉದ್ಯಮವಾಗಿ ಬೆಳೆದು ಸುಮಾರು 1.55 ಮಿಲಿಯನ್‌ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಭಾರತೀಯರಿಗೆ ಮೊದಲು ರೈಲಿನ ಪರಿಚಯವಾದದ್ದು ಬ್ರಿಟಿಷರ ಮೂಲಕ. ಭಾರತದಲ್ಲಿ ಮೊದಲ ರೈಲು ಓಡಿದ್ದು ಮುಂಬಯಿ ಮತ್ತು ಥಾಣೆ ನಡುನೆ, 1853- ಏಪ್ರಿಲ್‌ 16ರಂದು.

ಭಾರತೀಯ ರೈಲ್ವೆಗೆ ಮುಂದಿನ ವರ್ಷ ಅಂದರೆ ಏಪ್ರಿಲ್‌ 16, 2003ಕ್ಕೆ 150 ವರ್ಷ ತುಂಬಲಿದೆ. ಈ ವಿಶೇಷ ಸಂದರ್ಭದಲ್ಲಿ ಜನತೆಗೆ ರೈಲ್ವೆಯ ಪ್ರಗತಿಪರ ವಿಕಾಸವನ್ನು ಜನತೆಗೆ ತಿಳಿಸಲು ‘ಗಾಲಿಯ ಮೇಲೆ ಪ್ರದರ್ಶನ’ ಎಂಬ ವಿನೂತನ ಕಾರ್ಯಕ್ರಮವನ್ನು ಭಾರತೀಯ ರೈಲ್ವೆ ಏರ್ಪಡಿಸಿದೆ.

ಈ ಪ್ರದರ್ಶನದಲ್ಲಿ ಭಾರತೀಯ ರೈಲ್ವೆ ನಡೆದು ಬಂದ ದಾರಿಯ ವಿವರಣೆ ಇದೆ. ಈ ಪ್ರದರ್ಶನದ ವಿಶೇಷವೆಂದರೆ ಈ ಪ್ರದರ್ಶನವನ್ನು ಒಂದು ರೈಲಿನಲ್ಲಿ ಪ್ರದರ್ಶಿಸಲಾಗಿದೆ. ರೈಲ್ವೆ ಮಂತ್ರಿ ನಿತೀಶ್‌ಕುಮಾರ್‌ರಿಂದ ಉದ್ಘಾಟನೆಗೊಂಡ ಈ ರೈಲು ಆಗಸ್ಟ್‌ 15, 2002ರಂದು ನವದೆಹಲಿಯಿಂದ ಹೊರಟು ಚಂಡೀಗಢ, ಅಂಬಾಲ, ಹರಿದ್ವಾರ, ಲಕ್ನೋ, ಕಾನ್ಪುರ್‌, ಬನಾರಸ್‌, ಚೆನೈ, ತಿರುಪತಿ, ಬೆಂಗಳೂರು, ಹೈದರಾಬಾದ್‌ ಮುಂತಾದ 60ಕ್ಕೂ ಹೆಚ್ಚು ನಗರಗಳಲ್ಲಿ ಪ್ರದರ್ಶನ ನೀಡಿ, 2003ರ ಏಪ್ರಿಲ್‌ 15 ರಂದು ನವದೆಹಲಿ ತಲುಪಲಿದೆ.

ಪ್ರಸ್ತುತ ‘ಗಾಲಿಯ ಮೇಲೆ ಪ್ರದರ್ಶನ’ ವಿಶೇಷ ರೈಲು ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ 3ರಲ್ಲಿ ನಿಂತಿದೆ. ಈ ರೈಲಿನಲ್ಲಿ 16 ಭೋಗಿಗಳಿದ್ದು , ಅದರಲ್ಲಿ 12 ಭೋಗಿಗಳಲ್ಲಿ ಈ ಪ್ರದಶ}ನವನ್ನು ಏರ್ಪಡಿಸಲಾಗಿದೆ. ಒಂದೊಂದು ಭೋಗಿಯಲ್ಲಿ ಒಂದೊಂದು ತರಹದ ಪ್ರದರ್ಶನ.

ಪ್ರದರ್ಶನದ ವಿವರ ಈ ರೀತಿಯಿದೆ :

  1. ಪರಿಚಯ
  2. ರೈಲ್ವೆ ಇಂಜಿನ್‌ನ ವಿಕಾಸ
  3. ರೈಲ್ವೆ ಬಂಡಿಯ ವಿಕಾಸ
  4. ಪ್ರಯಾಣಿಕರ ಸೌಲಭ್ಯ
  5. ಪ್ರಯಾಣಿಕರ ರಕ್ಷಣೆ
  6. ಮಾನವ ಸಂಪನ್ಮೂಲ ಮತ್ತು ಕ್ರೀಡಾ ಸಾಧನೆ
  7. ಸರಕು ಸಾಗಾಣಿಕೆ
  8. ರೈಲ್ವೆ ವಿದ್ಯುದೀಕರಣ
  9. ಸಾಮಾಜಿಕ ಕರ್ತವ್ಯ
  10. ರೈಲ್ವೆ ಪ್ರವಾಸೋದ್ಯಮ
  11. ಉಪನಗರದ ರೈಲು
  12. ಬಿಡಿ ಭಾಗಗಳನ್ನು ತಯಾರಿಸುವ ಕಾರ್ಖಾನೆಗಳು.
ಸುಮಾರು 1000ಕ್ಕೂ ಹೆಚ್ಚು ಚಿತ್ರಗಳು ಮತ್ತು ಮಾದರಿಗಳು ಪ್ರದರ್ಶನದಲ್ಲಿ ವೆ. ಇದಲ್ಲದೆ ಮಹಾತ್ಮ ಗಾಂಧಿ, ಲಾಲ್‌ ಬಹದ್ದೂರ್‌ಶಾಸ್ತ್ರಿ, ಇಂದಿರಾ ಗಾಂಧಿ, ಜವಾಹರ್‌ ಲಾಲ್‌ ನೆಹರು ಮುಂತಾದವರು ರೈಲಿನಲ್ಲಿ ಪ್ರಯಾಣ ಮಾಡಿದ ಚಿತ್ರಗಳೂ ಇವೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X