ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಕು ಮೇಳದ ಸೆಳಕು-ನೀಲ್‌ಗಿರೀಸ್‌ ಲಲಿತ ಮಹಲ್‌

By Staff
|
Google Oneindia Kannada News

Nilgiris Lalitha Mahalಬೆಂಗಳೂರು : ಕ್ರಿಸ್‌ಮಸ್‌ ಬಂತೆಂದರೆ ಕೇಕಿನ ಹಬ್ಬದ ಸುಗ್ಗಿ. ನಗರದ ವಿಠ್ಠಲ್‌ ಮಲ್ಯ ರಸ್ತೆಯ ಸೇಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲು ಮೈದಾನದಲ್ಲಿ ಡಿ.20ರಿಂದ ಜ.1, 2003ರವರೆಗೆ ಕೇಕುಗಳೇ ಮಾತಾಡಲಿವೆ. ಈ ಪೈಕಿ ‘ನೀಲ್‌ಗಿರೀಸ್‌’ನ ಲಲಿತ ಮಹಲ್‌ ದೊಡ್ಡ ಸೆಳಕು.

ಆರು ಟನ್‌ ಸಕ್ಕರೆ ಬಳಸಿ ನೀಲ್‌ಗಿರೀಸ್‌ ಮೈಸೂರು ‘ಲಲಿತ ಮಹಲ್‌’ ಅರಮನೆ ಮಾದರಿಯ ಕೇಕನ್ನು ಮಾಡಿದೆ. ಚಾಕೊಲೇಟ್‌ ಮತ್ತಿತರ ವಸ್ತುಗಳನ್ನು ಬಳಸಿ ತಯಾರಿಸಿರುವ ಗೀತೋಪದೇಶದ ಚಿತ್ರಣ, ದೋಣಿ ಮನೆ, ತೋಟದ ಮನೆ, ನವಿಲು, ಮದುವೆ ಕೇಕ್‌- ಹೀಗೆ ತರಾವರಿ ಮಾದರಿ ಕೇಕುಗಳು ಪ್ರದರ್ಶನ ಹಾಗೂ ಮಾರಾಟಕ್ಕುಂಟು.

ಮೂರು ದಶಕಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದಿರುವ ಈ ಕೇಕು ಪ್ರದರ್ಶನದ ಜನಪ್ರಿಯತೆ ಹೆಚ್ಚಿಸಲು ಈ ಬಾರಿ ಗ್ರಾಹಕ ವಸ್ತುಗಳು, ಮಕ್ಕಳ ಮನರಂಜನೆ, ಕ್ರೀಡಾ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ಕೂಡ ಉಂಟು. ನೀಲ್‌ಗಿರೀಸ್‌ನ ಮಾರುಕಟ್ಟೆ ವಿಭಾಗದ ನಿರ್ದೇಶಕ ವೆಂಕಟರಾಮ್‌ ಸುದ್ದಿಗೋಷ್ಠಿಯಲ್ಲಿ ಈ ವಿವರಗಳನ್ನು ಕೊಟ್ಟರು.

ಲಲಿತ ಮಹಲ್‌ ನಿರ್ಮಾಣ ಪ್ರಹಸನ
15 ಜನ 45 ದಿನಗಳ ಕಾಲ ನಿರಂತರವಾಗಿ ‘ಲಲಿತ ಮಹಲ್‌’ ಕೇಕಿನ ತಯಾರಿಕೆಯಲ್ಲಿ ತೊಡಗಿದ್ದರು. 18 ಅಡಿ ಎತ್ತರ, 60 ಅಡಿ ಉದ್ದ ಹಾಗೂ 26 ಅಡಿ ಅಗಲವಿರುವ ಈ ಕೇಕಿಗೆ ಬರೋಬ್ಬರಿ 6 ಟನ್‌ ಸಕ್ಕರೆ ಖರ್ಚಾಗಿದೆ. ವಿಧಾನಸೌಧ, ಟೈಟಾನಿಕ್‌ ಹಡಗು, ಕಾರ್ಗಿಲ್‌, ಕೇರಳದ ದೋಣಿ ಸ್ಪರ್ಧೆ, ವಿಶ್ವಸಂಸ್ಥೆ ಕಟ್ಟಡ, ವಿಶ್ವ ವ್ಯಾಪಾರ ಕೇಂದ್ರ- ಹೀಗೆ ಬಗೆಬಗೆಯ ಮಾದರಿ ಕೇಕುಗಳಿಂದ ಸದ್ದು ಮಾಡಿದ ನೀಲ್‌ಗಿರೀಸ್‌ ಈ ಬಾರಿ ಲಲಿತ ಮಹಲ್‌ ಮಾದರಿ ಕೇಕನ್ನು ಬಲು ಆಸ್ಥೆಯಿಂದ ತಯಾರಿಸಿದೆ.

ಕೇಕ್‌, ಐಸ್‌ ಕ್ರೀಂ ಮಾರಾಟದ ಕೌಂಟರೂಗಳೂ ಸೇರಿದಂತೆ ಆಹಾರ, ಸೌಂದರ್ಯ ವರ್ಧಕ ಮತ್ತಿತರ 50 ಅಂಗಡಿಗಳು ಮೇಳದಲ್ಲಿ ತಲೆಯೆತ್ತಲಿವೆ. ಅಂದಹಾಗೆ, ಮೇಳಕ್ಕೆ 15 ರುಪಾಯಿ ಪ್ರವೇಶ ಶುಲ್ಕ ಕೊಡಬೇಕು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X