ವೀರಪ್ಪನ್‌ ಸಿಗೋದಿರಲಿ, ಎಸ್‌ಟಿಎಫ್‌ ಪೊಲೀಸರೇ ನಾಪತ್ತೆ !

ಬೆಂಗಳೂರು : ನಾಗಪ್ಪ ಹತ್ಯೆ ನಂತರ ಎಸ್‌ಟಿಫ್‌ ಕೆನೆದಾಟ ಜೋರಾಗೇ ಶುರುವಾಯಿತಾದರೂ, ಈವರೆಗಿನ ಅದರ ಹೆಜ್ಜೆ ಜಾಡು ಏನೆಂದು ಇನ್ನೂ ಗೊತ್ತಾಗಿಲ್ಲ. ಕಾಡಲ್ಲಿ ಕಾರ್ಯಾಚರಣೆ. ನಾಡಲ್ಲಿ ಸರ್ಕಾರದ ಮೇಲೆ ಕಿಡಿ ಮುಂದುವರೆದೇ ಇದೆ.

ನಾಗಪ್ಪ ಹತ್ಯೆಯ ಹಿನ್ನೆಲೆಯಲ್ಲಿ ಬುಧವಾರ (ನ.18) ಕಂಡದ್ದು, ಕೇಳಿದ್ದು-

  • ಪೊಲೀಸ್‌ ಮೂಲಗಳ ಪ್ರಕಾರ ಮೂವರು ಎಸ್‌ಟಿಎಫ್‌ ಪೊಲೀಸರು ನಾಪತ್ತೆ ! ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಹುಡುಕಾಟ.
  • ವೀರಪ್ಪನ್‌ ಸೆರೆಯಾದರೆ ಅನೇಕ ರಾಜಕಾರಣಿಗಳ, ಪೊಲೀಸರ ಅಸಲಿಯತ್ತು ಬಯಲಿಗೆ : ಮಾಧವ ತೀರ್ಥ ಶ್ರೀಪಾದ ಸ್ವಾಮೀಜಿ.
  • ಬೆಂಗಳೂರಲ್ಲಿ ಪೊನ್ನಾಚಿ ಮಹದೇವ ಸ್ವಾಮಿ. ಈತ ಪೊಲೀಸರ ಅತಿಥಿಯೆಂಬುದು ವದಂತಿ. ನಾಗಪ್ಪನವರ ಡೈರಿಯಲ್ಲಿ ಬರೆದಿರುವಂತೆ ಮಹದೇವ ಸ್ವಾಮಿ ಎರಡು ಬಾರಿ ಕಾಡಿಗೆ ಹೋಗಿದ್ದಾರೆ. ಈ ಬಗ್ಗೆ ಗುಪ್ತ ಸಮಾಲೋಚನೆ ಸಂಭವ.
  • ನ್ಯಾಯಾಂಗ ತನಿಖೆ ನಾಚಿಕೆಗೇಡಿನ ಸಂಗತಿ : ಕನ್ನಡ ಚಳವಳಿಕಾರ ಜಿ.ನಾರಾಯಣ ಕುಮಾರ್‌.
  • ನಾಗಪ್ಪ ಹತ್ಯೆಯನ್ನು ಕೆಲವು ಮಠಾಧೀಶರು ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಅಖಿಲ ಕರ್ನಾಟಕ ಆದರ್ಶ ಕನ್ನಡಾಭಿಮಾನಿಗಳ ಸಂಘದಿಂದ ಬೆಂಗಳೂರಲ್ಲಿ ಮೌನ ಮೆರವಣಿಗೆ.
  • ನಾಗಪ್ಪನವರ ವಿಷಯದಲ್ಲಿ ದಿವ್ಯ ನಿರ್ಲಕ್ಷ್ಯ ತಳೆದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ರಾಜೀನಾಮೆ ಕೊಡಲಿ : ನಾಗಪ್ಪ ಶ್ರದ್ಧಾಂಜಲಿ ಸಭೆಯಲ್ಲಿ ವಾಟಾಳ್‌ ನಾಗರಾಜ್‌.
(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+