Get Updates
Get notified of breaking news, exclusive insights, and must-see stories!

ಸುತ್ತೂರು ಸ್ವಾಮೀಜಿ ಮೇಲೆ ವೀರಪ್ಪನ್‌ ಕಣ್ಣು ?

ಮೈಸೂರು : ನರಹಂತಕ ವೀರಪ್ಪನ್‌ನ ಮುಂದಿನ ಬಲಿ ಸುತ್ತೂರು ಸ್ವಾಮೀಜಿಗಳೆನ್ನುವ ಪತ್ರಿಕಾ ವರದಿಗಳ ಹಿನ್ನೆಲೆಯಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿರುವ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಈ ರಾಜ್ಯದಲ್ಲಿ ಯಾರಿಗೂ ರಕ್ಷಣೆಯೇ ಇಲ್ಲವಾಗಿದೆ ಎಂದು ವಿಷಾದಿಸಿದ್ದಾರೆ.

ಮಾಜಿ ಸಚಿವ ಎಚ್‌.ನಾಗಪ್ಪನವರ ಹತ್ಯೆಯ ಹಿನ್ನೆಲೆಯ ಪೂರ್ವಾಪರಗಳನ್ನು ಚರ್ಚಿಸಲು ಮೈಸೂರಿನಲ್ಲಿ ಶುಕ್ರವಾರ ನಡೆದ ವೀರಶೈವ ಮುಖಂಡರ ಸಭೆಯಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡುತ್ತಿದ್ದರು.

ವೀರಪ್ಪನ್‌ನ ಮುಂದಿನ ಬಲಿ ತಾವೇ ಎಂದು ತಮಿಳು ಪತ್ರಿಕೆಯಾಂದು ಬರೆದಿದೆ. ನಾಗಪ್ಪನವರಂಥ ಗಣ್ಯರಿಗೇ ರಕ್ಷಣೆ ಇಲ್ಲವೆಂದ ಮೇಲೆ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಒದಗಿದೆ ಎಂದು ಸ್ವಾಮೀಜಿ ಹೇಳಿದರು. ನಾಗಪ್ಪನವರ ಹತ್ಯೆಯ ರಹಸ್ಯವನ್ನು ಬಯಲಿಗೆಳೆಯಲು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.

ನಾಗಪ್ಪನವರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಸರ್ಕಾರ ನಡೆಸಿದ ಪ್ರಯತ್ನಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ವಾಮೀಜಿ, ಸರ್ಕಾರ ತನ್ನ ಕ್ರಮಗಳ ಮೂಲಕ ಜನತೆಯ ವಿಶ್ವಾಸ ಗಳಿಸಿಲ್ಲ ಎಂದರು. ರಾಜ್‌ಕುಮಾರ್‌ ಪ್ರಕರಣದಲ್ಲಿ ಕೈಗೊಂಡ ಬಿಗು ಕ್ರಮಗಳನ್ನು ನಾಗಪ್ಪನವರ ಪ್ರಕರಣದಲ್ಲಿ ಸರ್ಕಾರ ಕೈಗೊಳ್ಳಲಿಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿರುವುದಾಗಿ ಅವರು ಹೇಳಿದರು.

ಶಾಸಕರಾದ ಎ. ಎಸ್‌.ಗುರುಸ್ವಾಮಿ, ಮಹದೇವ ಪ್ರಸಾದ ಎಚ್‌. ಎಸ್‌, ಹಾಗೂ ನಿಜಗುಣ ಶಿವಯೋಗಿ ಸಭೆಯಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+