ನಾಗಪ್ಪ ಸತ್ತಿದ್ದು ಹೇಗೆ? 2 ದಿನದಲ್ಲಿ ಗುಟ್ಟು ಬಹಿರಂಗ

ಬೆಂಗಳೂರು : ನರಹಂತಕ ವೀರಪ್ಪನ್‌ನಿಂದ ಅಪಹೃತರಾಗಿ ಕಾಡಿನಲ್ಲೇ ದುರಂತ ಅಂತ್ಯ ಕಂಡ ಮಾಜಿ ಸಚಿವ ನಾಗಪ್ಪನವರ ಸಾವು ಸಂಭವಿಸಿದ್ದು ಹೇಗೆ ಎನ್ನುವುದನ್ನು ಇನ್ನೆರಡು ದಿನಗಳಲ್ಲಿ ಬಹಿರಂಗ ಪಡಿಸಲು ಅವರ ಕುಟುಂಬದ ಸದಸ್ಯರು ಮುಂದಾಗಿದ್ದಾರೆ.

ನಾಗಪ್ಪನವರ ಸಾವಿನ ಕುರಿತು ಸತ್ಯ ಸಂಗತಿಯನ್ನು ಬಹಿರಂಗಗೊಳಿಸಲಾಗುವುದು. ಈ ಕುರಿತು ನಾವು ಸ್ವತಃ ತನಿಖೆ ನಡೆಸುತ್ತಿದ್ದೇವೆ ಎಂದು ನಾಗಪ್ಪನವರ ಅಳಿಯ ಕಿರಣ್‌, ಖಾಸಗಿ ವಾಹಿನಿಯಾಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನಮಗೆ ಯಾರು ಸಹಾಯ ಮಾಡಿದರು, ಯಾರು ಮಾಡಲಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಿದೆ. ಪ್ರಸ್ತುತ ಯಾರೊಬ್ಬರನ್ನೂ ದೂಷಿಸಲು ಇಷ್ಟಪಡುವುದಿಲ್ಲ . ಆದರೆ ನಾಗಪ್ಪನವರ ಅಂತ್ಯಕ್ಕೆ ಕಾರಣರಾದವರು ಬೆಲೆ ತೆರಲೇಬೇಕಾಗುತ್ತದೆ ಎಂದು ಕಿರಣ್‌ ಆವೇಶದಿಂದ ಹೇಳಿದ್ದಾರೆ.

ನಾಗಪ್ಪನವರಿಗೆ ಒದಗಿದ ಸ್ಥಿತಿ ಬೇರೆ ಯಾರಿಗೂ ಬಾರದಿರಲಿ ಎಂದು ಆಶಿಸಿರುವ ಕಿರಣ್‌, ನಾಗಪ್ಪನವರ ದುರಂತ ಅಂತ್ಯಕ್ಕೆ ಹಲವಾರು ಮಂದಿ ಕಾರಣರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ವೀರಪ್ಪನ್‌ ಶಿಕಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+