ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದಯಿಸಲಿ ರಾಷ್ಟ್ರೀಯ ದಳ;ಬೊಮ್ಮಾಯಿ ಸೂತ್ರ ಪ್ರಕಟ

By Staff
|
Google Oneindia Kannada News

ಬೆಂಗಳೂರು : ಸಂಯುಕ್ತ ಜನತಾ ದಳ ಹಾಗೂ ಜಾತ್ಯತೀತ ಜನತಾ ದಳದ ಕೆಲವು ಮುಖಂಡರು ಸೇರಿ ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ ಅವರ ಸೂತ್ರದಲ್ಲಿ ರಚಿಸಿರುವ ಹೊಸ ರಾಷ್ಟ್ರೀಯ ಪಕ್ಷ ‘ಅಖಿಲ ಭಾರತ ಜನತಾ ದಳ’ ಜನವರಿ, 2003ರಲ್ಲಿ ಅಸ್ಥಿತ್ವಕ್ಕೆ ಬರಲಿದೆ.

ಖುದ್ದು ಬೊಮ್ಮಾಯಿ ಬುಧವಾರ ಹೊಸ ಪಕ್ಷವನ್ನು ಪ್ರಕಟಿಸಿದರು. ಕರ್ನಾಟಕ ಘಟಕದ ಅಧ್ಯಕ್ಷ ಸಿದ್ಧರಾಮಯ್ಯ ಸೇರಿದಂತೆ ಜಾತ್ಯತೀತ ಜನತಾ ದಳದ ಪ್ರಮುಖರು ಹೊಸ ಪಕ್ಷ ಪ್ರಕಟಣೆಯ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಈ ಬಗ್ಗೆ ಬೊಮ್ಮಾಯಿಯವರನ್ನು ಕೇಳಿದಾಗ, ‘ಹೊಸ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಸಂಯುಕ್ತ ಜನತಾ ದಳ ಇನ್ನೂ ಎನ್‌ಡಿಎಯಿಂದ ಹೊರ ಬರದಿರುವುದು ಜಾತ್ಯತೀತ ದಳದವರಿಗೆ ಬೇಸರ ತಂದಿದೆ. ಸಾಕಷ್ಟು ಕೂತು ಮಾತಾಡುವ ಅವಕಾಶ ಇದ್ದೇ ಇದೆ. ಅವರೆಲ್ಲಾ ಪಕ್ಷಕ್ಕೆ ಸೇರಿಕೊಳ್ಳುತ್ತಾರೆಂಬ ಭರವಸೆ ಇದೆ’ ಎಂದರು.

ದೇವೇಗೌಡ್ರ ಬಗ್ಗೆ ಇನ್ನೂ ಆಸೆ : ದೇವೇಗೌಡರು ವಿಲೀನ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಹೊರಗುಳಿದಿರುವ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ಹೊಸ ಪಕ್ಷ ಸೇರಿಕೊಳ್ಳುತ್ತಾರೆಂಬ ಭರವಸೆ ಇನ್ನೂ ಜೀವಂತವಾಗಿದೆ ಎಂದರು. ಸಿದ್ಧರಾಮಯ್ಯನವರನ್ನು ಬುಧವಾರದ ಕಾರ್ಯಕ್ರಮಕ್ಕೆ ಕರೆದಿದ್ದರೂ, ಅವರು ಆಮಂತ್ರಣಕ್ಕೆ ಓಗೊಟ್ಟಿರಲಿಲ್ಲ.

ಗುರುವಾರ (ಡಿ.12) ಜಾತ್ಯತೀತ ಜನತಾ ದಳ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆದಿದ್ದು, ಹೊಸ ಪಕ್ಷವನ್ನು ಸೇರಿಕೊಳ್ಳುವ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಹೊಸ ಪಕ್ಷದ ರೂಪುರೇಷೆಗಳು, ಅದರ ಲಾಂಛನ ಹಾಗೂ ಧ್ವಜ ಯಾವುದಿರಬೇಕೆಂದು ಚರ್ಚಿಸಿ, ತೀರ್ಮಾನಕ್ಕೆ ಬರಲಾಗುವುದು. ಹೊಸ ಪಕ್ಷ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಬೇಕಾದ ವರದಿಯನ್ನು ಇನ್ನೊಂದು ತಿಂಗಳಲ್ಲಿ ಸಮಿತಿ ಸಿದ್ಧಪಡಿಸಲಿದೆ ಎಂದು ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಿಗೆ ಪರ್ಯಾಯವಾದ ಹೊಸ ಪಕ್ಷ ಜಯಪ್ರಕಾಶ ನಾರಾಯಣರ ತತ್ವಗಳನ್ನು ಆಧರಿಸಿದ್ದು ಜಾತ್ಯತೀತ ಮೌಲ್ಯಗಳನ್ನು ಗೌರವಿಸುತ್ತದೆ ಎಂದು ಹೊಸ ಪಕ್ಷದ ಸಂಕ್ಷಿಪ್ತ ಸೂತ್ರವನ್ನು ತಿಳಿಸಿದರು.

(ಜಾ) ಜನತಾ ದಳದ ಇಬ್ಬರು ಮಾತ್ರ ಹಾಜರ್‌ : ಸಂಯುಕ್ತ ಜನತಾ ದಳದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮದ್ಯೋದ್ಯಮಿ ವಿಜಯ ಮಲ್ಯ, ಕರ್ನಾಟಕ ಘಟಕದ ಅಧ್ಯಕ್ಷ ಸಿ.ಭೈರೇಗೌಡ, ಶಾಸಕ ಪಿ.ಜಿ.ಆರ್‌.ಸಿಂಧ್ಯ, ಹಿರಿಯ ನಾಯಕರಾದ ಎಂ.ಪಿ.ಪ್ರಕಾಶ್‌ ಹಾಗೂ ಕೆ.ಎನ್‌.ನಾಗೇಗೌಡ ಕಾರ್ಯಕ್ರಮದಲ್ಲಿ ಇದ್ದರು. ಜಾತ್ಯತೀತ ಜನತಾ ದಳದ ಸದಸ್ಯರ ಪರವಾಗಿ ಎಚ್‌.ಎನ್‌.ನಂಜೇಗೌಡ ಮತ್ತು ಕೆ.ಎಚ್‌.ಶ್ರೀನಿವಾಸ್‌ ಇಬ್ಬರು ಮಾತ್ರ ಹಾಜರಿದ್ದರು. ತಮ್ಮನ್ನು ತಟಸ್ಥ ಜನತಾ ದಳದವರೆಂದು ಕರೆದುಕೊಳ್ಳುವ ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಹಾಗೂ ಜಯಪ್ರಕಾಶ್‌ ಹೆಗಡೆ ಕೂಡ ಇದ್ದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X