ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಕೋಟಿಯ ಆಮಿಶ: ವೀರಪ್ಪನ್‌ನ್ನು ಹಿಡಿಯೋರ್ಯಾರು?

By Staff
|
Google Oneindia Kannada News

ಬೆಂಗಳೂರು: ನರಹಂತಕ ವೀರಪ್ಪನ್‌ನನ್ನು ಜೀವಂತವಾಗಿ ಅಥವಾ ಹೆಣವಾಗಿ ತಂದುಕೊಟ್ಟವರಿಗೆ ಎರಡು ಕೋಟಿ ರೂಪಾಯಿ ಬಹುಮಾನವನ್ನು ಸರಕಾರ ಘೋಷಿಸಿದೆ.

ಈ ಹಿಂದೆಯೂ ವೀರಪ್ಪನ್‌ ತಲೆಗೆ ಬಹುಮಾನವನ್ನು ಸರಕಾರ ಘೋಷಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಾಜಿ ಸಚಿವ ನಾಗಪ್ಪ ಅವರ ದಾರುಣ ಸಾವಿನ ಬಳಿಕ ಸರಕಾರ ಮತ್ತೊಮ್ಮೆ ಆತನನ್ನು ಬಂಧಿಸಿದವರಿಗೆ ಅಥವಾ ಕೊಂದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದೆ.

ಸೋಮವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಕೃಷ್ಣ ತಿಳಿಸಿದರು. ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ಇತರ ನಿರ್ಣಯಗಳು:

- ಕಾಡುಗಳ್ಳನ ಕಾರ್ಯವ್ಯಾಪ್ತಿಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸುವಂತೆ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಗೆ ಮನವಿ, ಆಗ್ರಹ.
- ನಾಗಪ್ಪ ಸಾವಿನ ತನಿಖೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವ ವಿಚಾರವಿಲ್ಲ.
- ಸಾವಿನ ತನಿಖೆಗೆ ವಿಶೇಷ ಪೊಲೀಸ್‌ ತಂಡ ರಚನೆ.

ಪ್ರಕರಣದ ಕುರಿತು ರಾಜ್ಯಪಾಲರಿಂದ ವಿವರಣೆ ಕೋರಿಕೆ
ಈ ನಡುವೆ ನಾಗಪ್ಪ ಹತ್ಯೆ ಘಟನೆ ಕುರಿತಂತೆ ರಾಜ್ಯಪಾಲ ಟಿ. ಎನ್‌. ಚತುರ್ವೇದಿ ಸರಕಾರದಿಂದ ವರದಿ ಕೋರಿದ್ದಾರೆ. ನಾಗಪ್ಪ ಹತ್ಯೆಯ ಬಗ್ಗೆ ರಾಜ್ಯದಲ್ಲಿ ವಿಭಿನ್ನ ರೀತಿಯ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ಚಾಮರಾಜ ನಗರ ಜಿಲ್ಲೆಯಲ್ಲಿ ನಡೆದ ಗಲಭೆ ಮತ್ತು ಹಿಂಸೆಯ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ರಾಜ್ಯಪಾಲರು ಸರಕಾರಕ್ಕೆ ಸೂಚಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X