Get Updates
Get notified of breaking news, exclusive insights, and must-see stories!

‘ದೇವರಾಣೆ, ನಾಗಪ್ಪನವರಿಗೆ ಹೊಡೆದದ್ದು ನಾನಲ್ಲ ..’

Who killed H.Nagappaಬೆಂಗಳೂರು : ‘ಕೈ ಮುಗಿದು ಹೇಳುತ್ತೇನೆ. ದೇವರಾಣೆ ಮಾಡಿ ಹೇಳುತ್ತೇನೆ, ನನ್ನನ್ನು ನಂಬಿ. ನಾಗಪ್ಪನವರ ಮೇಲೆ ದಾಳಿ ನಡೆಸಿದ್ದು ತಮಿಳುನಾಡು ಪೊಲೀಸರೇ ಹೊರತು ನಾನಲ್ಲ .’

ಕರ್ನಾಟಕ ಸರ್ಕಾರಕ್ಕೆ ಕಳುಹಿಸಿರುವ ಆರನೇ ಕೆಸೆಟ್‌ನಲ್ಲಿ ವೀರಪ್ಪನ್‌ ಅಲವತ್ತುಕೊಂಡಿರುವುದು ಹೀಗೆ. ನನ್ನ ಮಾತನ್ನು ನಂಬಿ ಎದು ಪದೇಪದೇ ಒತ್ತಿ ಹೇಳಿರುವ ವೀರಪ್ಪನ್‌, ನಾಗಪ್ಪನವರ ಸಾವಿಗೆ ತಮಿಳುನಾಡು ಪೊಲೀಸರೇ ಹೊಣೆ ಎಂದು ಆಪಾದಿಸಿದ್ದಾನೆ. ನಾಗಪ್ಪನವರಿಗೆ ಗುಂಡು ತಗುಲಿರುವುದಕ್ಕೆ ತಮಿಳುನಾಡು ಪೊಲೀಸರು ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು 15 ನಿಮಿಷಗಳ ಕೆಸೆಟ್‌ ಮಾತಿನಲ್ಲಿ ವೀರಪ್ಪನ್‌ ನಿಂದಿಸಿದ್ದಾನೆ.

ಗುರುವಾರ (ಡಿ.5) ಬೆಳಗ್ಗೆ ಚೆಂಗಾಡಿ ಬೆಟ್ಟದಲ್ಲಿ ಅಡಗುತಾಣ ಬದಲಿಸುತ್ತಿದ್ದಾಗ ತಮಿಳುನಾಡು ವಿಶೇಷ ಕಾರ್ಯಪಡೆ ಪೊಲೀಸರು ಏಕಾಏಕಿ ದಾಳಿ ನಡೆಸಿದರು. ಸೇತುಕುಳಿ ಗೋವಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ. ತಪ್ಪಿಸಿಕೊಳ್ಳುವಂತೆ ನಾಗಪ್ಪನವರಿಗೆ ಸೂಚಿಸಿದೆ. ಅವರು ಎಚ್ಚತ್ತುಕೊಳ್ಳುವಲ್ಲಿ ಅವರಿಗೆ ಗುಂಡು ತಗುಲಿತು ಎಂದು ವೀರಪ್ಪನ್‌ ಹೇಳಿದ್ದಾನೆ.

ನನ್ನ ಬಳಿ ಇರುವವರೆಗೂ ನಾಗಪ್ಪನವರನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ. ಅವರಿಗೆ ಬ್ರೆಡ್‌-ಜಾಮ್‌ ತಂದುಕೊಟ್ಟಿದ್ದೇನೆ. ಎಸ್‌ಟಿಎಫ್‌ ದಾಳಿಯ ಸಮಯದಲ್ಲಿ ಅವರು ತಪ್ಪಿಸಿಕೊಂಡಿದ್ದು , ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಎಂದು ವೀರಪ್ಪನ್‌ ಕೆಸೆಟ್‌ನಲ್ಲಿ ತಿಳಿಸಿದ್ದಾನೆ. ಈ ಕೆಸೆಟ್‌ ನಾಗಪ್ಪನವರ ಕಾಮಗೆರೆ ನಿವಾಸದ ಬಳಿ ಭಾನುವಾರ(ಡಿ.8) ದೊರೆಯಿತು.

ಜಯಾ, ಥೇವರಂ ನಿರಾಕರಣೆ :
ವೀರಪ್ಪನ್‌ ಮೇಲೆ ತಮಿಳುನಾಡು ಎಸ್‌ಟಿಎಫ್‌ ದಾಳಿ ನಡೆಸಿದೆ ಎನ್ನುವ ವೀರಪ್ಪನ್‌ ಆರೋಪವನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹಾಗೂ ಎಸ್‌ಟಿಎಫ್‌ ಮುಖ್ಯಸ್ಥ ವಾಲ್ಟರ್‌ ಥೇವರಂ ನಿರಾಕರಿಸಿದ್ದಾರೆ. ಕರ್ನಾಟಕದ ಅರಣ್ಯ ಪ್ರದೇಶಕ್ಕೆ ತಮಿಳುನಾಡು ಎಸ್‌ಟಿಎಫ್‌ ಕಾಲಿಟ್ಟಿದ್ದೇ ಇಲ್ಲ . ಹೀಗಿರುವಾಗ ದಾಳಿಯ ಮಾತು ಎಲ್ಲಿಂದ ಬಂತು ಎಂದು ಥೇವರಂ ಹೇಳಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+