Get Updates
Get notified of breaking news, exclusive insights, and must-see stories!

ಇವರೆಲ್ಲ ವೀರಪ್ಪನ್‌ನಿಂದ ಹತರಾದವರು...

ಬೆಂಗಳೂರು : ಈವರೆಗೆ ವೀರಪ್ಪನ್‌ ಎಷ್ಟು ಮಂದಿಯನ್ನು ಕೊಂದಿದ್ದಾನೆ? ಪೊಲೀಸರ ಕಿರ್ದಿ ಪುಸ್ತಕದಲ್ಲಿ ಸಿಗುವ ಲೆಕ್ಕದ ಪ್ರಕಾರ ಕೇವಲ 119. ಒಂದು ವೇಳೆ ನಾಗಪ್ಪನವರನ್ನೂ ಆತನೇ ಕೊಂದಿರುವುದೇ ಆದರೆ ಅದು ವೀರಪ್ಪನ್‌ನ 120ನೇ ಅಧಿಕೃತ ಹತ್ಯೆಯಾಗುತ್ತದೆ.

ವೀರಪ್ಪನ್‌ನಿಂದ ಹತರಾದ ಕೆಲವರ ಹೆಸರುಗಳು,-
ಅರಣ್ಯ ರಕ್ಷಕ ಮೋಹನಯ್ಯ (1989ರಲ್ಲಿ ಪಾಲಾರ್‌ ಗೇಟ್‌ ಬಳಿ)
ಪಿ.ಎಸ್‌.ಐ. ಜಗನ್ನಾಥ್‌ (1990ರಲ್ಲಿ ಹೊಗೆನಕಲ್‌ ಬಳಿ)
ಪಿ.ಎಸ್‌.ಐ. ಆರ್‌.ರಾಮಲಿಂಗು (1990ರಲ್ಲಿ ಹೊಗೆನಕಲ್‌ ಹತ್ತಿರ)
ಪಿ.ಎಸ್‌.ಐ. ದಿನೇಶ್‌ (1990ರಲ್ಲಿ ಹೊಗೆನಕಲ್‌ ಹತ್ತಿರ)
ಡಿ.ಸಿ.ಎಫ್‌. ಶ್ರೀನಿವಾಸ್‌ (1991ರಲ್ಲಿ ಕೊಳ್ಳೇಗಾಲ ಬಳಿಯ ಎರಕೇಹಳ್ಳದಲ್ಲಿ)
ಎ.ಪಿ.ಸಿ. ಪ್ರೇಂ ಕುಮಾರ್‌ (1992ರಲ್ಲಿ , ರಾಂಪುರದಲ್ಲಿ)
ಮೈಸೂರು ಎಸ್ಪಿ ಹರಿಕೃಷ್ಣ (1992- ಮೀನ್ಯಂ ಹತ್ತಿರ)
ಮೈಸೂರು ಎಸ್ಪಿ ಶಕೀಲ್‌ ಅಹ್ಮದ್‌ (1992- ಮಲೆಮಹದೇಶ್ವರ ಬೆಟ್ಟದ ಹತ್ತಿರ)
ಟಾಸ್ಕ್‌ಫೋರ್ಸ್‌ನ ಪಿ.ಎಸ್‌.ಐ. ಸೆಂದಿಲ್‌ ಕುಮಾರ್‌ (1994- ಕೈಲಾಸಪಳ್ಳಂ)
ಬಿ.ಎಸ್‌.ಎಫ್‌ನ ಭುಪಿಂದರ್‌ ಸಿಂಗ್‌ (1994- ಚೆನ್ನಗಡಿ)
ತಮಿಳುನಾಡು ಎಚ್‌.ಸಿ. ಸೆಲ್ವರಾಜ್‌ (1996- ಅರೇಪಾಳ್ಯ).

ಸಾಮಾನ್ಯವಾಗಿ ಅಪಹರಿಸಿದವರನ್ನು ಏನೂ ಗಿಟ್ಟದಿರುವಾಗ ಕೊಲ್ಲುವ ಜಾಯಮಾನ ವೀರಪ್ಪನದಲ್ಲ . ಈತನ ತೆಕ್ಕೆಗೆ ಸಿಲುಕಿದ ನಂತರವೂ ಬದುಕಿ ಹೊರಬಂದಿರುವವರ ಸಾಕಷ್ಟು ಉದಾಹರಣೆಗಳೇ ಇದಕ್ಕೆ ಸಾಕ್ಷಿ. ವೀರಪ್ಪನ್‌ ಶಿಕಾರಿಗೆ ಹೋಗಿ, ಆತನಿಂದ ಹತರಾದವರೇ ಹೆಚ್ಚು ಎಂಬುದು ಮೇಲಿನ ಪಟ್ಟಿ ನೋಡಿದರೆ ವೇದ್ಯವಾಗುತ್ತದೆ. ಆ ಕಾರಣದಿಂದಲೇ ನಾಗಪ್ಪನವರ ಹತ್ಯೆಯ ಕುರಿತು ಪ್ರಶ್ನೆಗಳು ....

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+