Get Updates
Get notified of breaking news, exclusive insights, and must-see stories!

ನಾಗಪ್ಪನವರ ಸಾವಿಗೆ ವರನಟ ರಾಜ್‌ಕುಮಾರ್‌ ಕಂಬನಿ

ಬೆಂಗಳೂರು : ಅವರು ತುಂಬಾ ಒಳ್ಳೆಯ ವ್ಯಕ್ತಿ . ಅವರಿಗೆ ಹೀಗಾಗಬಾರದಿತ್ತು . ಅವರ ಸಾವು ತಮಗೆ ತುಂಬಾ ನೋವು ಉಂಟು ಮಾಡಿದೆ ಎಂದು ವೀರಪ್ಪನ್‌ ಒತ್ತೆಯಾಳಾಗಿದ್ದ ಮಾಜಿ ಸಚಿವ ನಾಗಪ್ಪನವರ ಸಾವಿನ ಕುರಿತು ವರನಟ ಡಾ.ರಾಜ್‌ಕುಮಾರ್‌ ಕಂಬನಿ ಮಿಡಿದಿದ್ದಾರೆ.

ನಾನು 108 ದಿನಗಳ ಕಾಲ ವೀರಪ್ಪನ್‌ ಸೆರೆಯಲ್ಲಿದ್ದು ಬದುಕಿ ಬಂದೆ, ನಾಗಪ್ಪನವರು ಬರಲಿಲ್ಲ . ಅವರ ಸಾವು ಅತ್ಯಂತ ದುರದೃಷ್ಟಕರ ಹಾಗೂ ಶೋಚನೀಯ ಎಂದು ನಾಗಪ್ಪನವರ ಸಾವಿನ ಸುದ್ದಿ ತಿಳಿದ ರಾಜ್‌ ಪ್ರತಿಕ್ರಿಯಿಸಿದರು.

ನಾಗಪ್ಪನವರು ಸುರಕ್ಷಿತವಾಗಿ ಬಿಡುಗಡೆ ಹೊಂದುತ್ತಾರೆ, ಯೋಚಿಸಬೇಡಿ ಎಂದು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೆ . ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಎಂದು ರಾಜ್‌ ನೋವಿನಿಂದ ನುಡಿದರು. ನಾಗಪ್ಪನವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡುವಂತೆ ದೇವರನ್ನು ಪ್ರಾರ್ಥಿಸುವುದಾಗಿ ರಾಜ್‌ ಹೇಳಿದರು.

ತಮಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಬಂದ ಸಂದರ್ಭದಲ್ಲಿ , ಆಗ ಸಚಿವರಾಗಿದ್ದ ನಾಗಪ್ಪನವರು ಕೊಳ್ಳೇಗಾಲದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಿದುದನ್ನು ಸ್ಮರಿಸಿಕೊಂಡ ರಾಜ್‌, ಅದೊಂದು ಮರೆಯಲಾಗದ ನೆನಪು ಎಂದು ಭಾವುಕರಾದರು.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+