ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊತ್ತಿ ಉರಿವ ಕಾಮಗೆರೆಯಲ್ಲಿ ನಾಗಪ್ಪ ಮರಳಿ ಮಣ್ಣಿಗೆ

By Staff
|
Google Oneindia Kannada News

ಚಾಮರಾಜನಗರ : ಸರ್ಕಾರದ ಸಕಲ ಮರ್ಯಾದೆಗಳನ್ನು ನಾಗಪ್ಪನವರ ಕುಟುಂಬದವರು ನಿರಾಕರಿಸಿದ ಕಾರಣ, ನಾಗಪ್ಪನವರ ಅಂತ್ಯ ಸಂಸ್ಕಾರ ಅಪಾರ ಜನ ಸಮೂಹದ ಸಮ್ಮುಖದಲ್ಲಿ ಸೋಮವಾರ ಸರಳವಾಗಿ ನಡೆಯಿತು.

ಅಂತ್ಯ ಸಂಸ್ಕಾರದ ಜಾಗದಲ್ಲಿ ಪೊಲೀಸರ ಗುಂಪು ನೆರೆಯುವುದು ಬೇಡ ಎಂದು ನಾಗಪ್ಪನವರ ಕುಟುಂಬದ ಸದಸ್ಯರು ಕೇಳಿಕೊಂಡರು. ಹೀಗಾಗಿ ಸರ್ಕಾರಿ ಮರ್ಯಾದೆಗಳಿಲ್ಲದೆ ಲಿಂಗಾಯಿತ ಜನಾಂಗದ ಆಚರಣೆಯಂತೆ ನಾಗಪ್ಪನವರು ಮರಳಿ ಮಣ್ಣಿಗೆ ಸೇರಿದರು. ಸರ್ಕಾರಿ ಪ್ರತಿನಿಧಿಗಳ ವಿರುದ್ಧ ಕಾಮಗೆರೆಯ ಮಂದಿ ಕೆಂಡಾಮಂಡಲಾಗಿರುವುದರಿಂದ ಊರಿನಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದೆ.

ನಾಗಪ್ಪನವರ ಹತ್ಯೆಯ ನಂತರದ ಸೋಮವಾರ :

  • ನಾಗಪ್ಪ ಅವರ ದೇಹವನ್ನು ಅಂತ್ಯ ಸಂಸ್ಕಾರಕ್ಕೆಂದು ಅವರ ಹುಟ್ಟೂರಿಗೆ ಒಯ್ಯುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾಕಾರರಿಂದ ಪೊಲೀಸ್‌ ಜೀಪ್‌ಗೆ ಬೆಂಕಿ. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ ಬಳಿಕ ಪರಿಸ್ಥಿತಿ ತಹಬಂದಿಗೆ. ಘಟನೆಯಲ್ಲಿ ಸಂತೆ ಮರಹಳ್ಳಿಯ ಶಾಸಕ ಎ. ಆರ್‌. ಕೃಷ್ಣ ಸ್ವಾಮಿ ಸೇರಿದಂತೆ ಹಲವರಿಗೆ ಗಾಯ.
  • ಮಾಜಿ ಸಚಿವ ನಾಗಪ್ಪ ಅವರ ಅಂತ್ಯ ಕ್ರಿಯೆಯಲ್ಲಿ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಭಾಗವಹಿಸಲಿಲ್ಲ. ಸರಕಾರದ ಪ್ರತಿನಿಧಿಯಾಗಿ ಪಶು ಸಂಗೋಪನೆ ಮತ್ತು ಸಕ್ಕರೆ ಖಾತೆ ಸಚಿವ ಎಂ. ಮಹದೇವ ಅವರು ನಾಗಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತೆರಳಿದಾಗ, ಕಾಮಗೆರೆ ಬಳಿ ಪ್ರತಿಭಟನಕಾರರು ಅವರ ಕಾರಿಗೆ ಮುತ್ತಿಗೆ ಹಾಕಿ ಹಲ್ಲೆ ಯತ್ನ ನಡೆಸಿದರು. ಅವರನ್ನು ರಕ್ಷಿಸುವ ಸಲುವಾಗಿ ಅತಿಥಿ ಗೃಹಕ್ಕೆ ಕಳುಹಿಸಲಾಯಿತು.

    ಸರ್ಕಾರದ ಪರವಾಗಿ ನಾಗಪ್ಪನವರಿಗೆ ಗೌರವ ಸಲ್ಲಿಸಲೆಂದು ಬಂದೆ. ಆದರೆ, ಇಲ್ಲಿನ ಪರಿಸ್ಥಿತಿ ಅದಕ್ಕೆ ಅವಕಾಶ ಕೊಡುತ್ತಿಲ್ಲ. ಇದಕ್ಕಾಗಿ ಬೇಸರವಾಗುತ್ತಿದೆ- ಮಹದೇವ ಪ್ರತಿಕ್ರಿಯೆ.

  • ವೀರಪ್ಪನ್‌ ಕಾರ್ಯಾಚರಣೆಯನ್ನು ನಿಲ್ಲಿಸುವಂತೆಯೂ ಒತ್ತಡ ತಂದಿದ್ದ ವಿರೋಧ ಪಕ್ಷವೂ ಕೂಡ ಜನತೆಗೆ ವಿವರಣೆ ನೀಡಬೇಕಾಗಿದೆ . ನಾಗಪ್ಪ ಹತ್ಯೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗುವುದು. ಆದರೆ ಅದು ಯಾವ ಸ್ವರೂಪದ್ದು ಎಂಬುದನ್ನು ವಿವರವಾದ ಚರ್ಚೆ ನಡೆಸಿದ ಬಳಿಕ ನಿರ್ಧರಿಸಲಾಗುವುದು- ಎಸ್ಸೆಂ ಕೃಷ್ಣ .
  • ನಾಗಪ್ಪ ನವರ ಅಂತಿಮ ದರ್ಶನಕ್ಕಾಗಿ ಅವರ ನಿವಾಸ ಮುಂದೆ ಅಪಾರ ಸಂಖ್ಯೆಯ ಅಭಿಮಾನಿಗಳ ಜಮಾವಣೆ.
  • ಸಂಸತ್ತಿನಲ್ಲಿ ನಾಗಪ್ಪ ಹತ್ಯೆ ಕುರಿತು ಚರ್ಚೆ. ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರಿಂದ ನಾಗಪ್ಪ ಹತ್ಯೆ ವಿಚಾರ ಪ್ರಸ್ತಾಪ. ವೀರಪ್ಪನ್‌ ಶಿಕಾರಿಗೆ ಕರ್ನಾಟಕ ಹಾಗೂ ತಮಿಳುನಾಡಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್‌ ಮಹಾಜನ್‌ ಭರವಸೆ.
  • (ಪಿಟಿಐ/ಇನ್ಫೋ ವಾರ್ತೆ)

    ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X