ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2008ರ ಹೊತ್ತಿಗೆ ಸಾಫ್ಟ್‌ವೇರ್‌ನಲ್ಲಿ ಭಾರತ ನಂ.1

By Staff
|
Google Oneindia Kannada News

ನವದೆಹಲಿ : 2008ನೇ ಇಸವಿ ಹೊತ್ತಿಗೆ ಸಾಫ್ಟ್‌ವೇರ್‌ ರಫ್ತಿನಲ್ಲಿ ಭಾರತ ಅಗ್ರಮಾನ್ಯವಾಗಲಿದ್ದು, 50 ಶತಕೋಟಿ ಡಾಲರ್‌ ಬೆಲೆಯ ಸಾಫ್ಟ್‌ವೇರನ್ನು ರಫ್ತು ಮಾಡಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಪ್ರಮೋದ್‌ ಮಹಾಜನ್‌ ಹೇಳಿದ್ದಾರೆ.

ರಾಜ್ಯಸಭೆಯ ಕಲಾಪದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಡಿ.5 ರ ಗುರುವಾರ ಸಚಿವರು ಮಾತಾಡುತ್ತಿದ್ದರು. ಈಗಿನ ಸಾಫ್ಟ್‌ವೇರ್‌ ಉತ್ಪಾದನಾ ಗತಿಯನ್ನು ಗಮನಿಸಿ, ಈ ಅಂಕಿ- ಅಂಶವನ್ನು ದೂರದೃಷ್ಟಿ ಇಟ್ಟುಕೊಂಡು ರೂಪಿಸಿರುವುದಾಗಿ ಅವರು ಸದನದಲ್ಲಿ ಹೇಳಿದರು. ಸಾಫ್ಟ್‌ವೇರ್‌ ಅಭಿವೃದ್ಧಿಯಲ್ಲಿ ಭಾರತ ಸಾಕಷ್ಟು ಮುಂಚೂಣಿಯಲ್ಲಿರುವುದರಿಂದ ಅದಕ್ಕೇ ಹೆಚ್ಚು ಒತ್ತು ಕೊಡಲಾಗುವುದು. ಜೊತೆಗೆ ಹಾರ್ಡ್‌ವೇರ್‌ ಅಭಿವೃದ್ಧಿಯತ್ತ ಕೂಡ ಸರ್ಕಾರ ಒಲವು ತೋರಲಿದೆ ಎಂದರು.

ಇತ್ತೀಚೆಗೆ ಭಾರತಕ್ಕೆ ಭೇಟಿ ಕೊಟ್ಟಿದ್ದ ಮೈಕ್ರೋಸಾಫ್ಟ್‌ ಅಧ್ಯಕ್ಷ ಬಿಲ್‌ ಗೇಟ್ಸ್‌, 8,000 ಎಂಜಿನಿಯರುಗಳಿಗೆ ತರಬೇತಿ ಕೊಡಲು 2,000 ಕೋಟಿ ರುಪಾಯಿ ಬಂಡವಾಳ ಹೂಡಲು ಒಪ್ಪಿಗೆ ಕೊಟ್ಟಿದ್ದಾರೆ. ಕಳೆದ ಬಾರಿ ಗೇಟ್ಸ್‌ ಇಲ್ಲಿಗೆ ಬಂದುಹೋದ ನಂತರ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಗೆ 5 ಕೋಟಿ ರುಪಾಯಿ ಹಣ ಕೊಟ್ಟಿದ್ದರು. ಈ ಹಣವನ್ನು ವಿವಿಧ ಶಾಲೆಗಳಿಗೆ ಈಗಾಗಲೇ ಸಂದಾಯ ಮಾಡಿದ್ದೇವೆ ಎಂದು ಮಹಾಜನ್‌ ಹೇಳಿದರು.

(ಏಜೆನ್ಸೀಸ್‌)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X