Get Updates
Get notified of breaking news, exclusive insights, and must-see stories!

37ಟಿಎಂಸಿ ಆಲಮಟ್ಟಿ ನೀರು ಕೊಡಿ :ನಾಯ್ಡು

ಹೈದರಾಬಾದ್‌ : ನಾವು ಬರಗೆಟ್ಟಿದ್ದೇವೆ. ಆಲಮಟ್ಟಿ ಅಣೆಕಟ್ಟಿನಿಂದ 37 ಟಿಎಂಸಿ ನೀರನ್ನಾದರೂ ಬಿಡಿ ಎಂದು ಕರ್ನಾಟಕಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪತ್ರಿಸಲಿದ್ದಾರೆ.ನಾಗರಾಜ ಸಾಗರ ಯೋಜನೆಯಡಿ ನೀರು ಪಡೆಯುತ್ತಿರುವ ಆಂಧ್ರಪ್ರದೇಶದ ನಲಗೊಂದ.

ಖಮ್ಮಮ್‌, ಗುಂಟೂರು, ಕೃಷ್ಣ ಮತ್ತು ಪ್ರಕಾಶಂ ಜಿಲ್ಲೆಗಳಲ್ಲಿ ಈಗ ಕುಡಿಯುವ ನೀರಿಗೆ ತತ್ವಾರ. ಬೇಸಗೆ ಬಂದರಂತೂ ಪರಿಸ್ಥಿತಿ ಪ್ರಕೋಪಕ್ಕೆ ಹೋಗಲಿದೆ ಎಂದಿರುವ ಚಂದ್ರಬಾಬು ನಾಯ್ಡು, ಈ ಸಮಸ್ಯೆ ಪರಿಹಾರಕ್ಕಾಗಿ ತಕ್ಷಣವೇ ನೀರು ಬಿಡುವಂತೆ ಕರ್ನಾಟಕದ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರಿಗೆ ಪತ್ರ ಬರೆಯಲಿದ್ದಾರೆ. ಇದೇ ವಿಷಯವಾಗಿ ಪ್ರಧಾನಿ ವಾಜಪೇಯಿ ಅವರಿಗೂ ನಾಯ್ಡು ಪತ್ರ ಕಳುಹಿಸಲಿದ್ದಾರೆ.

ಆಂಧ್ರಪ್ರದೇಶದ ಬೃಹತ್‌ ನೀರಾವರಿ ಸಚಿವ ಕೆ.ಶ್ರೀಹರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸೆಪ್ಟೆಂಬರ್‌ ತಿಂಗಳಲ್ಲೇ ನಾವು 50 ಟಿಎಂಸಿ ಆಲಮಟ್ಟಿ ನೀರು ಬಿಡುವಂತೆ ಕರ್ನಾಟಕಕ್ಕೆ ಮನವಿ ಮಾಡಿಕೊಂಡಿದ್ದೆವು. ಅಕ್ಟೋಬರ್‌ನಲ್ಲಿ ಮಳೆ ಬಂದು, ಸಮಸ್ಯೆ ಕೊಂಚ ಬಗೆಹರಿದ ಕಾರಣ ನಾವು ಪದೇಪದೇ ನೀರಿಗಾಗಿ ಕರ್ನಾಟಕವನ್ನು ಒತ್ತಾಯಿಸಲಿಲ್ಲ. ಈಗ ನಮಗೆ ಆಲಮಟ್ಟಿ ನೀರು ಅನಿವಾರ್ಯವಾಗಿದೆ. ಇತರೆ ಜಲಾಶಯಗಳ ನೀರನ್ನೂ ಮಿತವಾಗಿ ಬಳಸಲು ಸೂಚಿಸಿದ್ದೇವೆ ಎಂದು ಶ್ರೀಹರಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+