• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಅನು’ದಿನ ಪದಗಳನ್ನು ಮಥಿಸಿ ‘ಸ್ತುತಿ’ಸುವ ಪನ್‌ಡಿತರು !

By Staff
|

*ಹಾಲ್ದೊಡ್ಡೇರಿ ಸುಧೀಂದ್ರ

The Author Haldodderi Sudheendra with his daughter Madhuryaಹೆಚ್ಚು ಮಾತನಾಡದ ತಮ್ಮ ಸ್ನೇಹಿತರೊಂದಿಗೆ ವಾದ ಮಾಡುವ ಅವರ ಮಗ ಒಮ್ಮೆ ಎದುರಿಗೆ ಸಿಕ್ಕಾಗ ‘ನಿಮ್ಮಪ್ಪನಿಗೆ ನೀನು ಅಪವಾದ’ ಎಂದಿದ್ದರು ವೈಯೆನ್ಕೆ. ‘ಹೆಚ್ಕೆ’ ಎಂಬ ಇನಿಶಿಯಲ್ಸ್‌ನವರ ಪ್ರತಿಕ್ರಿಯೆ ಪಡೆಯಲು ಹೊರಟ ಸಹೋದ್ಯೋಗಿಯನ್ನು, ‘ಹುಷಾರು, ಅವರು ಹೆಚ್ಗೆ ಮಾತಡ್ತಾರೆ’ ಎಂದು ಎಚ್ಚರಿಸಿದ್ದರು. ಇದು ಪತ್ರಕರ್ತ ವೈಯೆನ್ಕೆ ‘ಮಾತು ಮಾತು ಮಥಿಸಿ’ ಆಡುತ್ತಿದ್ದ ವೈಖರಿ. ಪದಗಳೊಡನೆ ಪಟಪಟನೆ ಚೆಲ್ಲಾಟವಾಡುವ ವೈಯೆನ್ಕೆಯವರಂಥ ‘ಪನ್‌’ಡಿತರು ಬೆರಳೆಣಿಕೆಯಷ್ಟಿರಬಹುದು. ಪದಗಳನ್ನು ‘ಪನ್‌’ ಮಾಡುವಂತೆ ಪದ/ಪದಪುಂಜಗಳಲ್ಲಿರುವ ಅಕ್ಷರಗಳ ಸ್ಥಾನ ಪಲ್ಲಟ ಮಾಡಿ ಮೋಜು ತೆಗೆದುಕೊಳ್ಳುವ ಒಂದು ವರ್ಗವೇ ಇದೆ. ಹೀಗೆ ಸೃಷ್ಟಿಯಾದ ಪದ ಅಥವಾ ಪದಗಳ ಗುಂಪನ್ನು ಇಂಗ್ಲೀಷ್‌ನಲ್ಲಿ ‘ಅ್ಯನಗ್ರಮ್‌’ (ANAGRAM) ಎನ್ನುತ್ತಾರೆ. ಉದಾಹರಣೆಗೆ MOTHERINLAW ಎಂಬ ಪದಪುಂಜದಲ್ಲಿರುವ ಎಲ್ಲ ಅಕ್ಷರಗಳನ್ನೂ ಬಳಸಿ WOMAN HITLER ಎಂಬ ಪದಗಳನ್ನು ರಚಿಸಬಹುದು. ಇದೇ ರೀತಿ

THE MORSE CODE HERE COME DOTS

DORMITORY DIRTY ROOM

WILLIAM SHAKESPEARE I AM A WEAKISH SPELLER

A DECIMAL POINT IM A DOT IN PLACE

DESPERATION A ROPE ENDS IT

THE EARTHQUAKES THAT QUEER SHAKE

CONTRADICTION ACCORD NOT IN IT

THE PUBLIC ART GALLERIES LARGE PICTURE HALLS, I BET

ಮೂರು ವರ್ಷಗಳ ಹಿಂದೆ ಇಡೀ ಜಗತ್ತು Y2K (YEAR TWO THOUSAND) ಎಂಬ ಮಾಹಿತಿ ಜಗತ್ತಿನ ಮಹಾಮಾರಿಯ ಬಗ್ಗೆ ಭೀತಿಯಲ್ಲಿದ್ದಾಗ ಜನಪ್ರಿಯವಾಗಿದ್ದ ‘ಅ್ಯನಗ್ರಮ್‌’ ಯಾವುದು ಗೊತ್ತೆ? YEAR TWO THOUSAND, A YEAR TO SHUTDOWN.

ಇಂಗ್ಲೀಷ್‌ ಭಾಷೆಯ ಪದಗಳ ಅಕ್ಷರಗಳೊಡನೆ ಸರಸವಾಡುವುದೇ ಇಂದು ದೊಡ್ಡ ವಹಿವಾಟು. ಅಮೆರಿಕದಲ್ಲಿ ಕಂಪನಿಗಳು ತಮ್ಮ ಹೆಸರಿನೊಂದಿಗೆ ತಳಕು ಹಾಕಿಕೊಳ್ಳಬಲ್ಲ ಸೂಕ್ತ ’ಅ್ಯನಗ್ರಮ್‌’ಗಳಿಗಾಗಿ ಹಣ ಚೆಲ್ಲಲು ತಯಾರಿದ್ದಾರೆ. BOEING ಎಂಬ ಬೃಹತ್‌ ವಿಮಾನ ಕಂಪನಿಗೆ BIG ONE ಎಂಬುದು ಅತ್ಯಂತ ಸೂಕ್ತ ’ಅ್ಯನಗ್ರಮ್‌’. ರೂಪರ್ಟ್‌ ಮುರ್ಡೋಶ್‌ ಲಂಡನ್‌ನಲ್ಲಿ ಪ್ರಕಟಿಸುವ THE NEWS OF THE WORLD ಎಂಬ ರಸವತ್ತಾದ ಸುದ್ದಿಗಳ ಟ್ಯಾಬ್ಲಾಯ್ಡ್‌ಗೆ TENDER, HOT FLESHWOW ಎಂಬ ‘ಅ್ಯನಗ್ರಮ್‌’ ಅನ್ನು ಎಲ್ಲರೂ ಒಪ್ಪುತ್ತಾರೆ. ಅದೇ ಪ್ರತಿಷ್ಠಿತ NEW YORK TIMES ಪತ್ರಿಕೆಯನ್ನು MONKEYS WRITE ಎಂದು ಬರೆದವರು ಮಾನನಷ್ಟ ಮೊಕದ್ದಮೆ ಎದುರಿಸಬೇಕಾಗಬಹುದೇನೊ?

ಕೆಲವೇ ಭಾಷಾ ಪಂಡಿತರ ಸೊತ್ತಾಗಿದ್ದ ‘ಅ್ಯನಗ್ರಮ್‌’ ರಚನೆಗೆ ಜನಪ್ರಿಯತೆ ಬಂದದ್ದು 1988 ರಲ್ಲಿ. ಪದ ಅಥವಾ ಪದಪುಂಜವನ್ನು ನೀಡಿದರೆ ಅದರೊಳಗಿನ ಅಕ್ಷರಗಳನ್ನೆಲ್ಲ ಕಲೆಸಿ, ಬೆರೆಸಿ ಬೇರೊಂದು ಅರ್ಥವನ್ನು ಕೊಡುವ ಮತ್ತೊಂದು ಪದ/ಪದಪುಂಜವನ್ನು ನಿರ್ಮಿಸಿಕೊಡುವ ಕಂಪ್ಯೂಟರ್‌ ಸಾಫ್ಟ್‌ವೇರ್‌ ರಚನೆಯಾದಂತೆ ಸಾಮಾನ್ಯರಿಗೂ ಇದರ ಬಗ್ಗೆ ಆಸಕ್ತಿ ಬಂತು. ಆದರೆ ಕಂಪನಿಯಾಂದಕ್ಕೆ ಸೂಕ್ತ ನಾಮಕರಣ ಮಾಡುವುದರ ಜೊತೆಗೆ ಅದಕ್ಕೆ ಸರಿ ಹೊಂದುವಂಥ ’ಅ್ಯನಗ್ರಮ್‌’ ಹೊಂದಿಸಿಕೊಡುವ ಕೆಲಸ ಅಷ್ಟು ಸುಲಭವಲ್ಲ. ಇಂಟರ್‌ನೆಟ್‌ ಮೂಲಕ ಇಂಥ ಕೆಲಸ ಮಾಡಿಕೊಡಲು ಹಲವಾರು ಕಂಪನಿಗಳಿವೆ. ಇದರಲ್ಲಿ ಪ್ರಮುಖವಾದ ಒಂದು ಕಂಪನಿ ಭಾರತೀಯ ಸಂಜಾತೆ ಸ್ತುತಿ ಗರ್ಗ್‌ ಆರಂಭಿಸಿರುವ NAMIX (www.namix.com) . ಇದಕ್ಕೆ ಪ್ರೇರಣೆ ನೀಡಿದ್ದು ಈಕೆಯ ಗಂಡ ಅನು ಗರ್ಗ್‌. ಈತ ಕಳೆದ ತಿಂಗಳಲ್ಲಿ ಇಂಗ್ಲೀಷ್‌ ಪುಸ್ತಕ ಲೋಕದಲ್ಲೊಂದು ಹೊಸ ದಾಖಲೆ ಮಾಡಿದ್ದಾನೆ. ಮೂವತ್ತೈದು ವರ್ಷದ ಈ ಕಂಪ್ಯೂಟರ್‌ ತಜ್ಞ ಇಂಗ್ಲೀಷ್‌ ಪದ ಬಳಕೆಯ ಬಗ್ಗೆ ಬರೆದಿರುವ A Word A Day ಎಂಬ ಪುಸ್ತಕದ ಬಿಡುಗಡೆಯ ದಿನವನ್ನು ಪ್ರಕಾಶಕರು ಪ್ರಕಟಿಸಿದ ಮೂರೇ ಗಂಟೆಗಳಲ್ಲಿ ಮೊದಲ ಆವೃತ್ತಿಯ ಎಲ್ಲ ಪ್ರತಿಗಳನ್ನು ಓದುಗರು ಮುಂಗಡ ಕಾದಿರಿಸಿಬಿಟ್ಟರು. ಬೇಡಿಕೆಯನ್ನು ಗಮನಿಸಿದ ಪ್ರಕಾಶಕರು ಹೆಚ್ಚಿಗೆ ಪ್ರತಿ ಅಚ್ಚು ಹಾಕಿಸಿದರೆ ಆ ಎಲ್ಲ ಪ್ರತಿಗಳೂ ಅಧಿಕೃತ ಬಿಡುಗಡೆಯ (ನವೆಂಬರ್‌ ಹನ್ನೊಂದು) ಮುನ್ನವೇ ಮುಂಗಡ ಮಾರಾಟವಾಗಿವೆ. ಹೀಗೆ ಮಾರಾಟವಾದ ಒಟ್ಟು ಪ್ರತಿಗಳ ಸಂಖ್ಯೆ 25,000 .

ಅನುಗರ್ಗ್‌ ಯಾರು ?

ನೈನಿತಾಲ್‌ನಲ್ಲಿ ಹುಟ್ಟಿ ಬೆಳೆದ ಅನು ಗರ್ಗ್‌ ಶಾಲೆ ಕಲಿತದ್ದು ಪಕ್ಕಾ ಹಿಂದಿ ಮಾಧ್ಯಮದಲ್ಲಿ. ಕಾನ್‌ಪುರದಲ್ಲಿ ಎಂಜಿನೀರಿಂಗ್‌ ಕಲಿತು ಉನ್ನತ ಶಿಕ್ಷಣಕ್ಕೆಂದು ಹತ್ತು ವರ್ಷದ ಹಿಂದೆ ಅನು ಗರ್ಗ್‌ ಕಾಲಿಟ್ಟದ್ದು ಅಮೆರಿಕದ ಕ್ಲೀವ್‌ಲೆಂಡ್‌ನ ಕೇಸ್‌ ವೆಸ್ಟರ್ನ್‌ ರಿಸರ್ವ್‌ ವಿವಿಗೆ. ಇಲ್ಲಿ ಕಲಿಯುತ್ತಿದ್ದಾಗ ಸಮಯದಲ್ಲಿ ಅವರಿಗೆ ಹೊಸದೊಂದು ‘ಐಡಿಯಾ’ ಹೊಳೆಯಿತು. ತಮ್ಮ ಸಹಪಾಠಿಗಳಿಗೆ ಹಾಗೂ ಸ್ನೇಹಿತರಿಗೆ ಇ-ಮೇಲ್‌ನಲ್ಲಿ ದಿನಕ್ಕೊಂದು ಇಂಗ್ಲೀಷ್‌ ಪದ, ಅದರ ಮೂಲ, ಅರ್ಥ ಹಾಗೂ ಬಳಸುವ ಬಗ್ಗೆ ಪತ್ರಿಕೆ/ಪುಸ್ತಕಗಳಲ್ಲಿ ಇತ್ತೀಚೆಗೆ ಪ್ರಕಟವಾದ ಒಂದು ಸಾಲಿನ ಉದಾಹರಣೆಯನ್ನು ಕಳುಹಿಸತೊಡಗಿದರು. ಕಂಪ್ಯೂಟರ್‌ ಜಾಲಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಗರ್ಗ್‌ ಅವರ ಇ-ಮೇಲ್‌ ಜಾಲ ದಿನದಿಂದ ದಿನಕ್ಕೆ ವಿಸ್ತರಿಸತೊಡಗಿತು. ಇಂಟರ್‌ನೆಟ್‌ ಮೂಲಕ ಗರ್ಗ್‌ ಅವರ A Word A Day ಎಂಬ ಉಚಿತ ಇ-ಮೇಲ್‌ ಸೇವೆಗೆ ಜಗತ್ತಿನೆಲ್ಲೆಡೆಯಿಂದ ಬೇಡಿಕೆ ಬರಲಾರಂಭಿಸಿತು. ಇಂದು 206 ದೇಶಗಳ 5,27,850 ಮಂದಿ ಪದಪ್ರಿಯರು ತಮ್ಮ ಮುಂಜಾನೆಯ ಕಾಫಿ ಅಥವಾ ಚಹಕ್ಕೂ ಮುನ್ನ ಗರ್ಗ್‌ರ ಇ-ಮೇಲ್‌ಗೆ ಕಾಯುತ್ತಾರೆ. ಇವರಲ್ಲಿ ಭಾಷಾ ಪಾರಂಗತರಿದ್ದಾರೆ, ಪತ್ರಕರ್ತರಿದ್ದಾರೆ, ಪದಬಂಧ ಬಿಡಿಸುವವರಿದ್ದಾರೆ, ಅಮೆರಿಕಕ್ಕೆ ಹಾರಿ ಹೋಗಲು ಇಂಗ್ಲೀಷ್‌ ಜ್ಞಾನ ಹೆಚ್ಚಿಸಿಕೊಳ್ಳುವ ತುಡಿತದವರಿದ್ದಾರೆ, ಮಿದುಳಿಗೆ ಕಸರತ್ತು ನೀಡಲೆಂದೇ ಪದ ಹುಡುಕಾಟ ನಡೆಸುವವರಿದ್ದಾರೆ. ಇವರೆಲ್ಲರ ಜೊತೆಗೆ ತಂತ್ರಜ್ಞರ ದೊಡ್ಡ ದಂಡೇ ಇದೆ. ಇವರ ಚಂದಾದಾರರಲ್ಲಿ ನಮ್ಮ ಇನ್‌ಫೋಸಿಸ್‌ನಲ್ಲಿ ಕೆಲಸ ಮಾಡುವವರದೇ ಮೇಲುಗೈ (833 ಮಂದಿ). ಉಳಿದಂತೆ ಕಂಪ್ಯೂಟರ್‌ ದೈತ್ಯ ಐ.ಬಿ.ಎಂ ಗೆ ಕೆಲಸ ಮಾಡುವ 760 ಮಂದಿ, ಮಿಶಿಗನ್‌ ವಿವಿಯ 656 ಮಂದಿ, ಹಾರ್ವರ್ಡ್‌ನ 623 ಮಂದಿ, ವಾಷಿಂಗ್‌ಟನ್‌ ವಿವಿಯ 548 ಮಂದಿ, ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐ.ಐ.ಟಿ) 499 ಮಂದಿ ಮತ್ತು ಮೆಸಾಶ್ಯುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ (ಎಂ.ಐ.ಟಿ) 430 ಮಂದಿ ಸೇರಿದ್ದಾರೆ.

www.wordsmith.org ಸ್ಥಾಪಿಸಿರುವ ಗರ್ಗ್‌ಗೆ ಅಮೆರಿಕದ ಪ್ರತಿಷ್ಠಿತ ‘ಏ.ಟಿ. ಅಂಡ್‌. ಟಿ ಪ್ರಯೋಗಶಾಲೆಗಳಲ್ಲಿ’ ಉನ್ನತ ಹುದ್ದೆಯಿದೆ. ಮನೆಗೆ ಬಂದೊಡನೆ ಹೆಂಡತಿಯ ವಹಿವಾಟಿಗೆ ಒಂದಷ್ಟು ಸಹಾಯ ಮಾಡಿ, ಐದು ವರ್ಷದ ಮಗಳು ಅನನ್ಯಳೊಂದಿಗೆ ಆಟವಾಡಿದ ನಂತರವೇ ದಿನಕ್ಕೊಂದು ಪದದತ್ತ ಗಮನ ಹರಿಸಲು ಸಮಯ. ಮಧ್ಯರಾತ್ರಿಯಿಂದ ಬೆಳಗಿನ ನಾಲ್ಕು ಗಂಟೆಯ ತನಕ ಸದಸ್ಯರಿಗೆಲ್ಲ ಇ-ಮೇಲ್‌ ಹಂಚಿದ ನಂತರವೇ ನಿದ್ರಾ ದೇವಿಯ ಆಲಿಂಗನ. ಕಳೆದ ಹತ್ತು ವರ್ಷಗಳಿಂದಲೂ ಇದೇ ಪರಿಪಾಠ.

ಪದಗಳೊಂದಿಗೆ ಸರಸವಾಡುತ್ತಲೇ ಯಶಸ್ಸಿನ ಮೆಟ್ಟಲೇರುತ್ತಾ ಬಂದಿರುವ ಅನು-ಸ್ತುತಿ ದಂಪತಿಗಳಿಗೆ, ಓದುಗರ ಪತ್ರಗಳೇ ಚಿರಂತನ ಸ್ಫೂರ್ತಿ. ‘ನಿತ್ಯ ಚೈತನ್ಯ ನೀಡುವ ನಿಮ್ಮ ಪದಪತ್ರಕ್ಕೆ ವಂದನೆಗಳು. ನಾನು ವೈದ್ಯಳಾಗಿದ್ದರೆ ನನ್ನೆಲ್ಲ ರೋಗಿಗಳನ್ನು ನಿಮ್ಮ ಪತ್ರಕೂಟಕ್ಕೆ ಸದಸ್ಯರನ್ನಾಗಿಸುತ್ತಿದ್ದೆ. ನಾನೊಬ್ಬ ದೈವಾಂಶ ಸಂಭೂತಳಾಗಿದ್ದಿದ್ದರೆ ಎಲ್ಲರ ಆತ್ಮಗಳನ್ನೂ ನಿಮ್ಮ ಪತ್ರಗಳಿಂದಲೇ ಬಡಿದೆಬ್ಬಿಸುತ್ತಿದ್ದೆ. ಇದ್ಯಾವುದೂ ಅಲ್ಲದ ನ್ಯೂಯಾರ್ಕ್‌ ನಗರದ ಸುಂದರಿ ನಾನು. ನನ್ನ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತಿರುವುದು ಈ ನಿಮ್ಮ ನಿತ್ಯ ಪತ್ರಗಳೇ’. ‘ಹಿಂದೆ ಇಗರ್ಜಿಯಾಂದರಲ್ಲಿ ಪಾದ್ರಿಯಾಗಿದ್ದೆ. ಇದೀಗ ಅಂಗವಿಕಲನಾಗಿ ಒಬ್ಬಂಟಿ. ಹೊರಜಗತ್ತಿನತ್ತ ನೋಡಲು ನನಗಿರುವ ಬೆಳಕಿಂಡಿ ನಿಮ್ಮ ಪತ್ರಗಳು ಮಾತ್ರ’. ಈ ರೀತಿ ಅನು ಗರ್ಗ್‌ಗೆ ನಿತ್ಯ ಪ್ರಶಂಸೆಯ ಸುರಿಮಳೆಯಾಗುತ್ತಲೇ ಇರುತ್ತದೆ.

ಯಾವುದೇ ಹೊಸ ಪದ ಕಂಡರೂ ಅದಕ್ಕೆ ಅರ್ಥ ಹುಡುಕುವ ಚಟದ ಅನು ಗರ್ಗ್‌ಗೆ, ಮೋಜಿನ ಆ್ಯನಗ್ರಮ್‌ ರಚನೆಯಲ್ಲಿ ತೀವ್ರ ಆಸಕ್ತಿ. ತನ್ನ ಕಂಪನಿ AT

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more