ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಕರ್‌ ಆರೋಪಕ್ಕೆ ಉತ್ತರಿಸೊಲ್ಲ - ಡಾ.ರಾಜ್‌

By Staff
|
Google Oneindia Kannada News

ಬೆಂಗಳೂರು : ನರಹಂತಕ ವೀರಪ್ಪನ್‌ ಸೆರೆಯಿಂದ ತಮ್ಮನ್ನು ಬಿಡಿಸಿಕೊಳ್ಳಲು 20 ಕೋಟಿ ರುಪಾಯಿ ಕಪ್ಪ ಒಪ್ಪಿಸಲಾಗಿದೆ ಎನ್ನುವ ಆರೋಪಗಳ ಕುರಿತು ಪ್ರತಿಕ್ರಿಯಿಸಲು ವರನಟ ರಾಜ್‌ಕುಮಾರ್‌ ನಿರಾಕರಿಸಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಸಿ.ದಿನಕರ್‌ ಅವರ ‘ವೀರಪ್ಪನ್ಸ್‌ ಪ್ರೆೃಜ್‌ ಕ್ಯಾಚ್‌ : ರಾಜ್‌ಕುಮಾರ್‌’ ಪುಸ್ತಕದಲ್ಲಿನ 20 ಕೋಟಿ ರುಪಾಯಿ ಕಪ್ಪದ ಪ್ರಸ್ತಾಪದ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಲು ರಾಜ್‌ ನಿರಾಕರಿಸಿದರು. ಬೆಂಗಳೂರಿನ ನೂತನ ಮೇಯರ್‌ ಸಿ.ಎಂ.ನಾಗರಾಜ್‌ ಅವರು ರಾಜ್‌ ಅವರ ನಿವಾಸಕ್ಕೆ ಸೋಮವಾರ (ಡಿ.2) ಭೇಟಿ ಕೊಟ್ಟ ಸಂದರ್ಭದಲ್ಲಿ ರಾಜ್‌ ಅವರು ಸುದ್ದಿಗಾರರಿಗೆ ಮಾತಿಗೆ ಸಿಕ್ಕಿದ್ದರು.

ದಿನಕರ್‌ ಅವರ ಪುಸ್ತಕದಲ್ಲಿನ ಆರೋಪಗಳಿಗೆ ತಾವು ಪ್ರತ್ಯೇಕವಾಗಿ ಉತ್ತರಿಸುವ ಅವಶ್ಯಕತೆ ಇಲ್ಲ. ಈ ಕುರಿತು ಜನರ ಪ್ರತಿಕ್ರಿಯೆಯೇ ತಮ್ಮ ಪ್ರತಿಕ್ರಿಯೆ ಎಂದು ರಾಜ್‌ ಜಾರಿಕೊಂಡರು.

ನಾನೊಬ್ಬ ಕಲಾವಿದ ಎಂದು ಒತ್ತಿ ಹೇಳಿದ ರಾಜ್‌, ಕಲಾವಿದ ಕಲಿಯಬೇಕಾದುದು ಪ್ರತಿದಿನವೂ ಇದ್ದೇ ಇರುತ್ತದೆ ಎಂದು ಮಾತು ಹೊರಳಿಸಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಪಾರ್ವತಮ್ಮ ರಾಜ್‌ಕುಮಾರ್‌ ಅವರು ಬೇರೆ ಪ್ರಶ್ನೆ ಕೇಳುವಂತೆ ಪತ್ರಕರ್ತರಿಗೆ ಸೂಚಿಸಿದರು.

ರಾಜ್‌ ಹೆಸರಿನಲ್ಲಿ ಉದ್ಯಾನವನ
ಬೆಂಗಳೂರು ಮಹಾನಗರದಲ್ಲಿ ವರನಟ ರಾಜ್‌ ಅವರ ಹೆಸರಿನಲ್ಲಿ ಉದ್ಯಾನ ನಿರ್ಮಿಸುವುದಾಗಿ ನೂತನ ಮೇಯರ್‌ ಸಿ.ಎಂ.ನಾಗರಾಜು ತಿಳಿಸಿದರು. ರಾಜ್‌ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜಾಜಿನಗರದಲ್ಲಿನ ಡಾ.ರಾಜ್‌ಕುಮಾರ್‌ ಕಲಾಭವನವನ್ನು ಶೀಘ್ರದಲ್ಲಿಯೇ ಸುಸಜ್ಜಿತಗೊಳಿಸಲಾಗುವುದು ಎಂದೂ ಮೇಯರ್‌ ತಿಳಿಸಿದರು. ಮೇಯರ್‌ ಹಾಗೂ ರಾಜ್‌ ಭೇಟಿಯ ಸಂದರ್ಭದಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ಜಯಮಾಲಾ, ಮೇಯರ್‌ ನಾಗರಾಜು ಪುತ್ರರಾದ ರವಿಕಿರಣ್‌, ಮುಖ್ಯ ಇಂಜಿನಿಯರ್‌ ವೆಂಕಟೇಶ್‌ ಮುಂತಾದವರು ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X