‘...ನಾಗಪ್ಪನ್ನೂ ಕೊಂದು ನಾನೂ ಸಾಯುತ್ತೇನೆ !’

ಬೆಂಗಳೂರು : ನಾಲ್ಕನೇ ಕೆಸೆಟ್ಟಿನಲ್ಲಿ ವೀರಪ್ಪನ್‌ ಆಡಿರುವ ಮಾತಿನ ಪೂರ್ಣ ಪಾಠ ಮಾಧ್ಯಮಗಳಿಗೆ ಬಿಡುಗಡೆಯಾಗದ್ದಕ್ಕೆ ರಾಜಕೀಯ ಕಾರಣಗಳಿವೆ ಎನ್ನಲಾಗುತ್ತಿದೆ. ಕೆಸೆಟ್ಟನ್ನು ಕೇಳಿರುವವರು ಯಾರಿಗೂ ಹೇಳಬೇಡಿ ಅಂತ ಸಣ್ಣಗೆ ಉಸುರಿರುವ ಸತ್ಯಗಳೇನು ಗೊತ್ತೆ ?

ವೀರಪ್ಪನ್‌ ಮಾತುಗಳಲ್ಲೇ ಕೇಳಿ...
ಆಯಮ್ಮ (ಜಯಲಲಿತಾ)ನಿಂದಲೇ ನಾಗಪ್ಪನವರ ಬಿಡುಗಡೆ ತಡವಾಗುತ್ತಿರುವುದು. ಬೇಡ ಅಂತ ಬಡಕೊಂಡರೂ ಪೊಲೀಸರನ್ನು, ಸಿಐಡಿ ಅಧಿಕಾರಿಗಳನ್ನು ನನ್ನ ಮೇಲೆ ಛೂ ಬಿಟ್ಟಿದ್ದಾಳೆ. ನನ್ನ ಮೇಲೆ ಎರಗಿದವರನ್ನು ನಾನು ಸುಮ್ಮನೆ ಬಿಡೋದಿಲ್ಲ. ಪೊಲೀಸರ ಕಾರ್ಯಾಚರಣೆ ಜೋರಾಗಿ ನಾನೇನಾದರೂ ಸಿಕ್ಕಿ ಹಾಕಿಕೊಳ್ಳುವ ಪರಿಸ್ಥಿತಿ ಬಂದರೆ, ನಾಗಪ್ಪನವರನ್ನೂ ಕೊಂದು, ನಾನೂ ಸತ್ತು ಹೋಗುತ್ತೇನೆ !

ಗುಂಡ (ಪೊನ್ನಾಚ್ಚಿ ಮಹದೇವಸ್ವಾಮಿ) ನನಗೆ ಚೆನ್ನಾಗಿ ಗೊತ್ತು. ಆದರೆ ನನ್ನ ಬೇಡಿಕೆಗಳನ್ನು ಆತನೊಬ್ಬನೇ ಸರ್ಕಾರಕ್ಕೆ ಸಮರ್ಥವಾಗಿ ತಲುಪಿಸಬಲ್ಲನೇ ಎಂಬ ಅನುಮಾನವಿದೆ. ಅದಕ್ಕೇ ಮಣಿ ಜೊತೆಮಾಡಿ ಆತನನ್ನು ಕಳಿಸಿಕೊಡಿ ಎಂದು ಕೇಳಿದ್ದು. ಇಲ್ಲ ಸಲ್ಲದ ಕೇಸು ಜಡಿದು ಮಣಿಯನ್ನು ಜೈಲಿಗೆ ತಳ್ಳಿದವರನ್ನು ನಾನು ಸುಮ್ಮನೆ ಬಿಡುವುದಿಲ್ಲ.

ರಾಜೂ ಗೌಂಡರ್‌ (ರಾಜೂ ಗೌಡ) ಜೊತೆಯಲ್ಲಿ ಗುಂಡ ಬರಲಿ. ರಾಜೂ ಒಬ್ಬ ಶಾಸಕ. ನನ್ನ ಬೇಡಿಕೆಗಳನ್ನು ಸರ್ಕಾರಕ್ಕೆ ಸರಿಯಾಗಿ ಮುಟ್ಟಿಸಿ, ಅವನ್ನು ಈಡೇರಿಸಬಲ್ಲ ಸಾಮರ್ಥ್ಯ ಉಳ್ಳವ. ಅವರು ಇಲೆಕ್ಷನ್ನಿಗೆ ನಿಂತಾಗ, ನಾನು ಅವರ ಪರವಾಗಿ ಪ್ರಚಾರ ಮಾಡಿದ್ದೆ. ರಾಜೂ ನನಗೆ ಚೆನ್ನಾಗಿ ಗೊತ್ತು !

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+