• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಲ್ಲಿ ಭಾರೀ ಸ್ಫೋಟಕಗಳ ವಶ !

By Staff
|

ಬೆಂಗಳೂರು : :ಅಪರೂಪದ ಕಾರ್ಯಾಚರಣೆಯಲ್ಲಿ ನಗರ ಪೊಲೀಸರು ಬೃಹತ್‌ ಸ್ಫೋಟಕ (ಐಇಡಿ) ತಯಾರಿಸಲು ಬಳಸುವ ಕಂಡಾಪಟ್ಟೆ ಬಾಂಬ್‌, ಮದ್ದು- ಗುಂಡುಗಳು, ಶಸ್ತ್ರಗಳು ಮತ್ತು ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳು ಈಗ ಪೊಲೀಸರ ಅತಿಥಿಗಳು.

ವಿಜಯಕುಮಾರ್‌, ಶಿವಕುಮಾರ್‌, ಡಿ.ಕುಮಾರ್‌, ರವಿ ಮತ್ತು ಶ್ರೀನಿವಾಸನ್‌ ಇವರೇ ಬಂಧಿತರು. ವಿಜಯ ಕುಮಾರ್‌ ಕಂಪನಿಯಾಂದರಲ್ಲಿ ಮೇಂಟೆನೆನ್ಸ್‌ ಎಂಜಿನಿಯರ್‌, ಶಿವಕುಮಾರ್‌ ಒಬ್ಬ ಬಡಿಗ ಹಾಗೂ ಶ್ರೀನಿವಾಸನ್‌ ಖಾಸಗಿ ದಲ್ಲಾಳಿ ಕಂಪನಿಯಾಂದರ ಮಾಲೀಕ. ಈತನ ಸಂಬಂಧಿ ರವಿ. ಇವರೆಲ್ಲಾ ಸೇರಿಕೊಂಡು ಬೃಹತ್‌ ಸ್ಫೋಟಕಗಳನ್ನು ತಯಾರಿಸುವ ಕಾಯಕದಲ್ಲಿ ತೊಡಗಿದ್ದರೆಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಅನುಮಾನ ಬಂದ ಹಿನ್ನೆಲೆಯಲ್ಲಿ ನವೆಂಬರ್‌ 4ನೇ ತಾರೀಕು ಪೊಲೀಸರು ಇಬ್ಬರನ್ನು ಬಂಧಿಸಿ, ಒಂದು ನಾಡ ರಿವಾಲ್ವರ್‌, ಒಂದು ಗ್ರೆನೇಡ್‌, ಜಿಲಾಟಿನ್‌ ಕಡ್ಡಿಗಳು ಮತ್ತು ರಾಸಾಯನಿಗಳನ್ನು ವಶಪಡಿಸಿಕೊಂಡಿದ್ದರು. ಬಂಧಿತ ಆರೋಪಿಗಳು ಕೊಟ್ಟ ಮಾಹಿತಿಯ ಆಧಾರದ ಮೇಲೆ ಉಳಿದ ಮೂವರನ್ನು ಪತ್ತೆ ಮಾಡಲಾಯಿತು ಎಂದು ಬೆಂಗಳೂರು ಪೊಲೀಸ್‌ ಕಮಿಷನರ್‌ ಎಂ.ಡಿ.ಸಿಂಗ್‌ ಹೇಳಿದರು.

ಬಂಧಿತರ ಪೈಕಿ ಕನಿಷ್ಠ ಒಬ್ಬನಾದರೂ ಪೀಪಲ್ಸ್‌ ಲಿಬರೇಶನ್‌ ಆಫ್‌ ತಮಿಳ್‌ ಈಳಂ (PLOTE)ನಲ್ಲಿ 1985ರಲ್ಲಿ ತರಬೇತಿ ಪಡೆದಿರುವ ಶಂಕೆ ಪೊಲೀಸರದ್ದು. ಬಂಧಿತ ಆರೋಪಿಗಳ ಹೆಚ್ಚುವರಿ ಮಾಹಿತಿ ಹೆಕ್ಕಲು ತಮಿಳುನಾಡಿನ ನೆರವನ್ನೂ ಕೇಳಲು ನಿರ್ಧರಿಸಲಾಗಿದೆ. ಕಮಿಷನರ್‌ ನೇತೃತ್ವದ ಪಡೆ ಪ್ರಕರಣ ಕುರಿತು ತನಿಖೆ ನಡೆಸುತ್ತಿದೆ ಎಂದು ಖರ್ಗೆ ತಿಳಿಸಿದರು.

ವಶಪಡಿಸಿಕೊಂಡಿರುವ ವಸ್ತುಗಳು : 1200 ಇಲೆಕ್ಟ್ರಿಕ್‌ ಸ್ಫೋಟಕಗಳು, 970 ಸಾಮಾನ್ಯ ಸ್ಫೋಟಕಗಳು, 9 ಕೈ ಗ್ರಾನೇಡ್‌ಗಳು, 13 ಖಾಲಿ ಪೈಪ್‌ ಬಾಂಬ್‌ಗಳು, 75 ಲೈವ್‌ ರೌಂಡ್‌ಗಳು ಹಾಗೂ ಮತ್ತಿತರ ರಾಸಾಯನಿಕಗಳು.

(ಪಿಟಿಐ)

ಮುಖಪುಟ / ಕಾವೇರಿ ಕನ್ನಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more