ನೀರಿನ ವ್ಯಾಜ್ಯಕ್ಕೆ ರಾಷ್ಟ್ರೀಯ ಜಲ ನೀತಿಯೇ ಮುಲಾಮು : ಕೃಷ್ಣ
ಮಂಡ್ಯ : ರಾಜ್ಯಗಳ ನಡುವಿನ ಜಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ನೀತಿ ರೂಪಿಸಬೇಕು ಎಂದು ಮುಖ್ಯಮಂತ್ರಿ ಕೃಷ್ಣ ಕರೆ ಕೊಟ್ಟರು.
ಶನಿವಾರ ತಮ್ಮ ಪಾದಯಾತ್ರೆ ಮುಗಿಸಿ, ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತಾಡಿದರು. ಇದುವರೆಗೆ ಯಾಕೆ ರಾಷ್ಟ್ರೀಯ ಜಲ ನೀತಿ ರೂಪಿಸಿಲ್ಲ ಎಂದು ಪ್ರಶ್ನಿಸಿದ ಕೃಷ್ಣ, ಅಂತರರಾಜ್ಯ ಜಲವಿವಾದಕ್ಕೆ ರಾಷ್ಟ್ರೀಯ ಜಲ ನೀತಿಯೇ ಮುಲಾಮು ಎಂದು ಒತ್ತಿ ಹೇಳಿದರು.
ಪಾದಯಾತ್ರೆಯಿಂದ ಕಾವೇರಿ ಮತ್ತು ಕೃಷ್ಣೆ ರಾಜ್ಯದ ಎರಡು ಕಣ್ಣುಗಳೆಂದು ನೆನಪಿಸಲು ಸಾಧ್ಯವಾಗಿದೆ. ಈ ಪೈಕಿ ಒಬ್ಬಳನ್ನು ಮರೆತರೆ ಇನ್ನೊಬ್ಬಳು ಮುನಿಯುತ್ತಾಳೆ. ಹಿಂದೆ ಕನ್ನಂಬಾಡಿ ಕಟ್ಟೆ ಕಟ್ಟಲು ಹೋದಾಗ, ಮಂಡ್ಯದ ಜನರು ಈ ನೀರು ಕುಡಿದರೆ ರೋಗ ಬರುತ್ತೆ ಅಂದ ಹೆದರಿದ್ದರು. ಇವತ್ತು ಇದೇ ಜನ ನೀರನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎಂದು ಭಾವುಕರಾಗಿ ಮಾತಾಡಿದರು.
ಕಲ್ಲು- ಟೊಮೊಟೋ ತೂರಾಟ : ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಪಾದ ಯಾತ್ರೆ ಬರುತ್ತಿದ್ದಂತೆ, ತೋಳಿಗೆ ಕಪ್ಪು ಬಟ್ಟೆ ಕಟ್ಟಿದ್ದ ಕೆಲವು ಯುವಕರು ಕಲ್ಲು, ಟೊಮೊಟೋ ತೂರಿದರು. ಪೊಲೀಸರು ಬೆನ್ನಟ್ಟಿದಾಗ ಪರಾರಿಯಾದರು. ಈ ಘಟನೆ ಹೊರತು ಪಡಿಸಿ ಕೃಷ್ಣ ಅವರ ಬಹಿರಂಗ ಸಭೆಗೆ ಯಾವ ತೊಂದರೆಯೂ ಆಗಲಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ












Click it and Unblock the Notifications