ಸೈಟು ಬೇಕಾ ಸೈಟು
*ಬಿ. ಎಸ್. ಮಹದೇವಪ್ಪ
ಅಲ್ರಿ... ಇನ್ನಾದ್ರು ಒಂದು ಮನೆ ಅಂತ ಮಾಡಿಕೊಳ್ಳದಿದ್ರೆ ಹೇಗೆ ಹೇಳಿ...
ಮನೆಯಾಕೆಯ ಇಂಥಾದೊಂದು ಪ್ರಶ್ನೆಯನ್ನು ಒಂದಿಲ್ಲೊಂದು ಬಾರಿ ನೀವೂ ಎದುರಿಸಿರಬಹುದು. ಬೆಳಗಿನಿಂದ ದುಡಿದು ಬಂದು ಒಂದು ಒಳ್ಳೆಯ ಊಟ ಹೊಡೆದು, ನಿಮ್ಮಾಕೆ ವೀಳ್ಯದೆಲೆ ಮಡಿಸಿಕೊಡುವಾಗಲೂ ಮತ್ತೆ ಸೈಟಿನಾಸೆಯ ಅಪ್ಲಿಕೇಷನ್. ಮೊನ್ನೆ ಯಾರೋ ಅಚ್ಚು ಹಾಕಿಸಿದ ಗೃಹಪ್ರವೇಶದ ಕರೆಯೋಲೆಯಲ್ಲಿ ಬರೆದಿದ್ದುದು- ‘ಮಧ್ಯಮವರ್ಗದವರ ಮಹಾಸಾಧನೆಯಾದ ಮನೆ ಕಟ್ಟುವುದನ್ನು ಮಾಡಿದ್ದೇವೆ’!
ಮನೆ ಕಟ್ಟುವುದೇ ಪರಮಾರ್ಥವೇ? ಅದು ಮಹಾನ್ ಸಾಧನೆಯೇ? ಹೌದು ಎನ್ನುತ್ತಿದೆ ಮಾಸ್. ಇವತ್ತಿನ ಪರಿಸ್ಥಿತಿಯಲ್ಲಿ ಬೆಂಗಳೂರಿನಂಥಾ ನಗರಿಯಲ್ಲಿ ಮನೆಕಟ್ಟಿ ನೋಡು ಅನ್ನುವುದಿರಲಿ, ಸೈಟು ಪಡೆದು ನೋಡು ಅನ್ನುವುದೇ ಚಾಲ್ತಿ. ಇಪ್ಪತ್ತು ಮೂವತ್ತು ವರ್ಷಗಳ ಉಳಿತಾಯದ ಹಣದಲ್ಲಿ ಒಂದು ಸೈಟನ್ನು ಕೊಂಡೇ ಬಿಡೋಣ ಅಂತ ನೀವು ಮುಂದಾಗುವ ಮುನ್ನ ಇದನ್ನು ಖಂಡಿತ ಓದಲೇಬೇಕು...
ಕಳೆದೆರಡು ವರ್ಷಗಳಿಂದ ರಾಷ್ಟ್ರದ ಹಣಕಾಸು ಕ್ಷೇತ್ರದಲ್ಲಿ ಆಗಿರುವ ಕ್ಷಿಪ್ರ ಬದಲಾವಣೆಗಳ ಪರಿಣಾಮ ಇಂದು ಮನೆ ಕಟ್ಟುವುದು ಬಲು ಸುಲಭ. ಯಾಕೆಂದರೆ ಸಾಲ ಸೌಲಭ್ಯ ಹಾಗಿದೆ. ನಾವು ಊಹಿಸಿಕೊಳ್ಳಲೂ ಆಗದಷ್ಟು ಅಗ್ಗದ ಬಡ್ಡಿ ದರದಲ್ಲಿ ಹಣ ನೀಡಲು ಬ್ಯಾಂಕುಗಳು ನಾ ಮುಂದು ತಾ ಮುಂದು ಎನ್ನುತ್ತಿವೆ. ಆದರೆ ಮನೆ ಕಟ್ಟಲೊಂದು ಸೈಟು ಬೇಕಲ್ಲ. ಅದನ್ನು ಮಾಡಿಕೊಳ್ಳಲು ಬಸಿಯಬೇಕಾದ ಬೆವರು ಅಷ್ಟಿಷ್ಟಲ್ಲ.
ಬೆಂಗಳೂರಲ್ಲಿ ಸೈಟು ಕೊಳ್ಳುವುದು ಗಗನ ಕುಸುಮವೇ ಅಂತ ಬೇಸ್ತು ಬೀಳಬೇಡಿ. ಅದಕ್ಕೆ ಕೊಂಚ ಹೋವರ್ಕ್ ಮಾಡಿಕೊಳ್ಳಬೇಕಾಗುತ್ತದಷ್ಟೆ. ಟೋಪಿ ಬೀಳದಂತೆ ಎಚ್ಚರ ವಹಿಸಬೇಕಾಗುತ್ತದೆ.
ಇದೀಗ ಸೈಟು ಕೊಳ್ಳುವವರು ನೀವಾದಲ್ಲಿ....
- ಈಗ ಮಾಡಬೇಕಿರುವ ಒಂದು ಸಣ್ಣ ಜಾಣ ಕೆಲಸ ಅಂದರೆ ಹಾಸಿಗೆ ಇದ್ದಷ್ಟು ಕಾಲು ಚಾಚುವುದು. ಹತ್ತು ವರ್ಷಗಳ ನಂತರ ಈ ನಗರದ ಬೆಳವಣಿಗೆ ಗತಿ ಹೇಗಿರುತ್ತದೆ ಎಂಬುದನ್ನು ಅಂದಾಜು ಮಾಡಿಕೊಂಡು ಹೆಜ್ಜೆ ಹಾಕಬೇಕು. ಈಗ ಪಾಳು ಅನಿಸಿದ್ದು ನಾಳೆ ಸ್ವರ್ಗ. ಅದೇ ಬೆಂಗಳೂರಿನ ಬೆಳವಣಿಗೆಯ ಜಾಯಮಾನ. ಲೆಕ್ಕ ಹಾಕಿ, ಸೈಟಿನ ಮೇಲೆ ಹಣ ಹೂಡಿ. ಕೆಂಗೇರಿಯಲ್ಲಿ ನಿವೇಶನ ಕೊಂಡಿರಾ, ಅಯ್ಯೋ ಅಷ್ಟು ದೂರ ಏಕೆ ಹೋದಿರಿ- ಹೊರವಲಯಕ್ಕೆ ಹೆಜ್ಜೆ ಹಾಕಿದ ಎಲ್ಲರನ್ನೂ ಈ ಪ್ರಶ್ನೆ ಕಾಡಿರಹುದು. ಆದರೆ, ಒಂದು ಮಾತು ನೆನಪಿರಲಿ - ಇಂದಿನ ಕೆಂಗೇರಿ ನಾಳೆಯ ಮೆಜೆಸ್ಟಿಕ್!
- ಮೊದಲು ನಿಮ್ಮ ಬಜೆಟ್ ಏನು ಎಂಬುದನ್ನು ತೀರ್ಮಾನಿಸಿ.
- ಬೆಂಗಳೂರಿನ ಅಷ್ಟ ದಿಕ್ಕುಗಳ ಪೈಕಿ ನಿಮಗೆ ಒಪ್ಪಿಗೆಯಾಗುವ ದಿಕ್ಕು ಯಾವುದು ಅನ್ನುವುದನ್ನು ಅಂತಿಮಗೊಳಿಸಿಕೊಳ್ಳಿ.
- ಸೈಟು ಕೊಂಡ ತಕ್ಷಣ ಮನೆ ಕಟ್ಟುವಿರಾ ಅಥವಾ ನಾಲ್ಕಾರು ವರ್ಷ ಬಿಟ್ಟು ಮನೆ ಕಟ್ಟುವಿರಾ ಎಂಬುದೂ ಪೂರ್ವ ನಿರ್ಧಾರವಾಗಿರಲಿ.
- ನಿಮ್ಮ ನಿವೇಶನ ಇರುವ ಪ್ರದೇಶಕ್ಕೆ ನೀರಿನ ಮೂಲ ಏನು ಎನ್ನುವುದನ್ನು ಮೊದಲು ದೃಢಪಡಿಸಿಕೊಳ್ಳಿ.
- ಭವಿಷ್ಯದಲ್ಲಿ ಬೆಂಗಳೂರಿಗರಿಗೆ ಬೇರೆಲ್ಲವೂ ಸುಲಭವಾಗಿ ಸಿಗುತ್ತದೆ. ಆದರೆ ನೀರು ಮಾತ್ರ ಚಿನ್ನವಾಗುತ್ತದೆ ಎಂಬುದನ್ನು ಮರೆಯಬೇಡಿ.
- ತಕ್ಷಣಕ್ಕೆ ಮನೆ ಕಟ್ಟುವುದಾದರೆ ಮೂಲಭೂತ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಗಮನ ಕೊಡಿ. ಅಂದರೆ, ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಶಾಲೆ, ಕಾಲೇಜು, ಬಡಾವಣೆ ತಲುಪಲು ಇರುವ ರಸ್ತೆ ವ್ಯವಸ್ಥೆ, ಮನೆಯಲ್ಲಿ ಹೆಂಗಸರೊಬ್ಬರೇ ಇದ್ದರೆ ರಕ್ಷಣೆ ದೃಷ್ಟಿಯಿಂದ ಎಷ್ಟು ಕ್ಷೇಮ, ದೂರವಾಣಿ, ಶಾಪಿಂಗ್ ಕಾಂಪ್ಲೆಕ್ಸ್ ಇವೆಲ್ಲವುಗಳ ಚಾಚೂ ತಪ್ಪದೆ ತಿಳಿದುಕೊಳ್ಳಿ.
- ಒಂದು ವೇಳೆ ನೀವು ನಾಲ್ಕಾರು ವರ್ಷ ಬಿಟ್ಟು ಮನೆ ಕಟ್ಟುವುದಾದರೆ- ಐದು ವರ್ಷಗಳ ನಂತರ ಆ ಬಡಾವಣೆ ಹೇಗಿರಹುದು. ಅಷ್ಟು ಹೊತ್ತಿಗೆ ಮೂಲಭೂತ ಸೌಲಭ್ಯಗಳು ದಕ್ಕುತ್ತವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
- ನಿವೇಶನ ಮಾರುವ ವ್ಯಕ್ತಿ ಅಥವಾ ದಲ್ಲಾಳಿ ಹೇಳುವ ಎಲ್ಲಾ ಮಾತುಗಳನ್ನು ನಂಬಬೇಡಿ. ನಾಳೆ ಶಾಪಿಂಗ್ ಕಾಂಪ್ಲೆಕ್ಸ್, ನಾಳಿದ್ದು ರಸ್ತೆ, ಅದರಾಚೆ ನಾಳೆ ಕುಡಿಯುವ ನೀರು, ಒಳಚರಂಡಿ ಬರುತ್ತದೆ. ಎಲ್ಲದಕ್ಕೂ ಈಗಾಗಲೇ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆ ಅನುಮೋದನೆ ನೀಡಿದೆ ಎಂಬುದು ಅವರು ಹೇಳುವ ಮಾಮೂಲು ಮಾತು. ಆದರೆ, ಇದು ಪೂರ್ಣ ಸತ್ಯ ಅಲ್ಲದಿರಹುದು. ಹಾಗಾಗಿ, ಪ್ರತ್ಯೇಕವಾಗಿ ನೀವೇ ಒಮ್ಮೆ ಅವನು ನೀಡಿರುವ ಭರವಸೆಗಳನ್ನು ಪರೀಕ್ಷೆಗೆ ಒಡ್ಡಿ.
- ಪಕ್ಕದಲ್ಲೇ ಬಿಡಿಎ ಲೇಔಟ್ ಇದೆ. ಅದರ ಪಕ್ಕಕ್ಕೆ ಐಟಿ ಪಾರ್ಕ್ ಬರುತ್ತಿದೆ. ಹಾಗಾಗಿ, ಕೆಲವೇ ದಿನಗಳಲ್ಲಿ ಈ ನಿವೇಶನದ ಬೆಲೆ ಮೂರು ಪಟ್ಟು ಆಗುತ್ತದೆ. ಈಗಲೇ ನೀವು ಖರೀದಿಸಿದರೆ ಬುದ್ಧಿವಂತರಾಗುತ್ತೀರಿ ಎಂಬಂಥ ಆಮಿಷಗಳಿಗೆ ಬಲಿಯಾಗಬೇಡಿ. ಅವು ಪೊಳ್ಳಾಗಿರಬಹುದು.
- ನಿವೇಶನವನ್ನು ಒಂದು ಬಂಡವಾಳ ಹೂಡಿಕೆಯಂತೆ ಪರಿಗಣಿಸುತ್ತಿದ್ದರೆ ಮಾತ್ರ ಮರು ಮಾರಾಟ ಕುರಿತ ಅಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳಿ. ಇಲ್ಲವಾದರೆ ಮುಂದೆ ನೀವು ಕಟ್ಟುವ ಮನೆಯ ಬೆಲೆ ಒಂದು ಕೋಟಿ ಆದರೂ ಅದರಿಂದ ನಿಮಗೆ ಯಾವುದೇ ಪ್ರಯೋಜನವಿಲ್ಲ. ಇಂತಹ ಮೌಲ್ಯಗಳು ಕೇವಲ ಕಾಗದದ ಮೇಲಿನ ಅಂಕೆಗಳು ಮಾತ್ರ.
(ಬುಧವಾರ 29/05: ಸೈಟು ಕೊಳ್ಳಲು ಯಾರಪ್ಪಾ ಸಹಾಯ ಮಾಡ್ತಾರೆ?)
ಮುಖಪುಟ / ಇವತ್ತು... ಈ ಹೊತ್ತು...
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications