ಬೆಂಗಳೂರಲ್ಲಿ ತಲೆ ಎತ್ತಲಿರುವ ದೇಶದ ಪ್ರಥಮ ಮಹಿಳಾ ಕಾನೂನು ಕಾಲೇಜು
ಬೆಂಗಳೂರು : ದೇಶದ ಪ್ರಥಮ ಕಾನೂನು ಪದವಿಯ ಮಹಿಳಾ ಕಾಲೇಜು ಬೆಂಗಳೂರು ನಗರದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದೆ.
ಬಿಷಪ್ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜು, ಐದು ವರ್ಷ ಅವಧಿಯ ಕಾನೂನು ಪದವಿ ಕಾಲೇಜಿಗಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಅರ್ಜಿ ಸಲ್ಲಿಸಿ, ಕಾಲೇಜು ಸ್ಥಾಪನೆಗೆ ಅನುಮತಿ ಗಿಟ್ಟಿಸಿಕೊಂಡಿದೆ. ಮಹಿಳಾ ಕಾನೂನು ಕಾಲೇಜು ಸ್ಥಾಪನೆಗೆ ರಾಜ್ಯ ಸರಕಾರ ಮತ್ತು ಬೆಂಗಳೂರು ವಿಶ್ವ ವಿದ್ಯಾನಿಲಯದಿಂದಲೂ ಬಿಷಪ್ ಕಾಟನ್ ಶಿಕ್ಷಣ ಸಂಸ್ಥೆ ಅನುಮತಿ ಹಾಗೂ ಅನುದಾನ ಪಡೆದುಕೊಂಡಿದೆ.
ಕಾಲೇಜಿನಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಶಿಕ್ಷಣ ಸಂಸ್ಥೆಯು ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಭರವಸೆ ನೀಡಿದೆ. ಐದು ವರ್ಷಗಳ ಅವಧಿಯ ಕಾನೂನು ಪದವಿ ತರಗತಿಗಳು ಮುಂದಿನ ಸೆಪ್ಟೆಂಬರ್ ಅಥವಾ ಅಕ್ಟೋಬರ್ನಿಂದ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಪೂರ್ವ ಸೂಚನೆಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...


Click it and Unblock the Notifications
