• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಗರದೀಪದ ವೀರಪ್ಪ ಮೊಯಿಲಿಗೆ ಅಂಬೇಡ್ಕರ್‌ ಪ್ರಶಸ್ತಿ

By Staff
|

ಬೆಂಗಳೂರು : ಸತತ ಬರವಣಿಗೆಯ ಮೂಲಕ ಸುದ್ದಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯಿಲಿ ಅವರು 2002 ನೇ ಇಸವಿಯ ಅಂಬೇಡ್ಕರ್‌ ಪ್ರಶಸ್ತಿಗೆ ಹಾಗೂ ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾ ಮೂರ್ತಿ ಅವರು 2001 ಇಸವಿಯ ವರ್ಷದ ಲೇಖಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಂಬೇಡ್ಕರ್‌ ಹಾಗೂ ವರ್ಷದ ಲೇಖಕಿ ಪ್ರಶಸ್ತಿಯನ್ನು ಗೊರೂರು ಪ್ರತಿಷ್ಠಾನ ನೀಡುತ್ತಿದ್ದು , ಏಪ್ರಿಲ್‌ 14 ರಂದು ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಅಂಬೇಡ್ಕರ್‌ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಲೇಖಕ ಹಾಗೂ ಪಂಪ ಪ್ರಶಸ್ತಿ ವಿಜೇತ ಎ.ಎನ್‌.ಮೂರ್ತಿರಾವ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ರಾಣಿ ಸತೀಶ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವರು.

ಸಾಗರದೀಪ, ಕೊಟ್ಟ ಕಾದಂಬರಿಗಳಿಂದ ಹಾಗೂ ಜೊತೆಯಾಗಿ ನಡೆಯೋಣ ಕವನ ಸಂಕಲನದಿಂದ ಪ್ರಸಿದ್ಧರಾಗಿರುವ ವೀರಪ್ಪ ಮೊಯಿಲಿ ಅವರು, ಮಹಾಕಾವ್ಯ ಪ್ರಕಾರದಲ್ಲೂ ಪ್ರಯೋಗ ನಡೆಸಿದ್ದಾರೆ. ಪ್ರಸ್ತುತ ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಮೊಯಿಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ಫೋಸಿಸ್‌ ಪ್ರತಿಷ್ಠಾನದ ಮೂಲಕ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿರುವ ಸುಧಾ ಮೂರ್ತಿ, ಜನಪ್ರಿಯ ಕಾದಂಬರಿಕಾರರೂ ಹೌದು. ಅವರ ಸಮಾಜ- ಸಾರಸ್ವತ ಸಾಧನೆಯನ್ನು ಗುರ್ತಿಸಿ ಗುಲ್ಬರ್ಗಾ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more